ಉಡುಪಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಐ.ಟಿ.ಡಿ.ಪಿ ಇಲಾಖೆ, ಆರೋಗ್ಯ ಇಲಾಖೆ, ಬುಡಕಟ್ಟು ಸಮುದಾಯದ ಸಂಘಟನೆಗಳು ಉಡುಪಿ ಹಾಗೂ ಯೆನಪೋಯ ಮಂಗಳೂರು ಇವರ ಸಹಯೋಗದೊಂದಿಗೆ ಜಿಲ್ಲೆಯ ಬುಡಕಟ್ಟು ಜನಾಂಗದವರ ಆರೋಗ್ಯ ತಪಾಸಣೆ ನಡೆಸುವ ಸಲುವಾಗಿ ಮಾರ್ಚ್ 4 ವರೆಗೆ ಈ ಕೆಳಕಂಡ ಸ್ಥಳಗಳಲ್ಲಿ ಬೆಳಗ್ಗೆ 9 ರಿಂದ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಜನವರಿ 26 ರಂದು ಹೆಗ್ಗುಂಜೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಮಂದಾರ್ತಿ, ಆವರ್ಸೆ, ಬಿಲ್ಲಾಡಿ, ಹೆಗ್ಗುಂಜೆ, ನಡೂರು ಮತ್ತು ಸೈಬ್ರಕಟ್ಟೆ ವ್ಯಾಪ್ತಿಯವರಿಗೆ,
ಫೆಬ್ರವರಿ 1 ರಂದು ಮಣಿಪುರ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಮಣಿಪುರ, ಮೂಡುಬೆಳ್ಳೆ, ಕುರ್ಕಾಲು ಮತ್ತು ಕಟಪಾಡಿ ವ್ಯಾಪ್ತಿಯವರಿಗೆ, ಫೆ. 2 ರಂದು ಶಿರ್ವಾ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಶಿರ್ವಾ ಮತ್ತು ಕುತ್ಯಾರು ವ್ಯಾಪ್ತಿಯವರಿಗೆ, ಫೆ. 3 ರಂದು ಪಡುಬಿದ್ರಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಪಡುಬಿದ್ರಿ, ಎರ್ಮಾಳು, ಹೆಜಮಾಡಿ ಮತ್ತು ಪಲಿಮಾರು ವ್ಯಾಪ್ತಿಯವರಿಗೆ, ಫೆ. 7 ರಂದು ಕಾಪು ಪುರಸಭೆ ಸಭಾಂಗಣದಲ್ಲಿ ಕಾಪು, ಇನ್ನಂಜೆ, ಮಜೂರು ಮತ್ತು ಮುಳೂರು ವ್ಯಾಪ್ತಿಯವರಿಗೆ, ಫೆ. 8 ರಂದು ಕೊಲ್ಲೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಕೊಲ್ಲೂರು, ಯಳ್‌ಜಿತ್, ಮೂರೂರು ಮತ್ತು ಅರೆಶಿರೂರು ವ್ಯಾಪ್ತಿಯವರಿಗೆ, ಫೆ. 9 ರಂದು ಮುದೂರು ಕೊರಗ ಸಮುದಾಯಭವನದಲ್ಲಿ ಮುದೂರು ಹಾಗೂ ಜಡ್ಕಲ್ ವ್ಯಾಪ್ತಿಯವರಿಗೆ, ಫೆ. 10 ರಂದು ಹೆಮ್ಮಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ತ್ರಾಸಿ, ತಲ್ಲೂರು, ಗಂಗೊಳ್ಳಿ, ಹೆಮ್ಮಾಡಿ ಮತ್ತು ಕಟ್‌ಬೆಲ್ತೂರು ವ್ಯಾಪ್ತಿಯವರಿಗೆ, ಫೆ. 15 ರಂದು ಸಾಲಿಗ್ರಾಮ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ಕೋಟ, ಕೋಟತಟ್ಟು, ಸಾಲಿಗ್ರಾಮ, ಸಾಸ್ತಾನ ಮತ್ತು ವಡ್ಡರ್ಸೆ ವ್ಯಾಪ್ತಿಯವರಿಗೆ, ಫೆ. 16 ರಂದು ಬಾರ್ಕೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಹನೆಹಳ್ಳಿ, ಯಡ್ತಾಡಿ ಮತ್ತು ಬಾರ್ಕೂರು ವ್ಯಾಪ್ತಿಯವರಿಗೆ, ಫೆ. 17 ರಂದು ಕಾರ್ಕಳ ಬಂಡೀಮಠ ವಿದ್ಯಾರ್ಥಿನಿಲಯದಲ್ಲಿ ನಕ್ಕರೆ, ಕಾರ್ಕಳ ಕುಕ್ಕುಂದೂರು ಮತ್ತು ಹಿರ್ಗಾಣ ವ್ಯಾಪ್ತಿಯವರಿಗೆ, ಫೆ. 20 ರಂದು ಎಲ್ಲೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಮುದರಂಗಡಿ, ಎಲ್ಲೂರು, ಬೆಳಪು ಮತ್ತು ಉಚ್ಚಿಲ ವ್ಯಾಪ್ತಿಯವರಿಗೆ, ಫೆ. 21 ರಂದು ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಬೊಮ್ಮರಬೆಟ್ಟು, ಅಂಜಾರು, ಹಿರಿಯಡ್ಕ, ಆತ್ರಾಡಿ, ಹಿರೆಬೆಟ್ಟು, ಗುಡ್ಡೆಂಗಡಿ, ಓಂತಿಬೆಟ್ಟು, ಕುಕ್ಕೆಹಳ್ಳಿ, ಬೆಳ್ರ‍್ಪಾಡಿ, ದೂಪದಕಟ್ಟೆ ಮತ್ತು ಕೋಡಿಬೆಟ್ಟು ವ್ಯಾಪ್ತಿಯವರಿಗೆ, ಫೆ. 22 ರಂದು ಕೆಂಜೂರು ಕೊರಗ ಸಮುದಾಯ ಭವನದಲ್ಲಿ ಕಳತ್ತೂರು, ನಾಲ್ಕೂರು, ಬೈರಂಪಳ್ಳಿ, ಕೆಮ್ಮಣ್ಣು ಮತ್ತು ಆರೂರು ವ್ಯಾಪಿಯವರಿಗೆ, ಫೆ. 23 ರಂದು ಆವರ್ಸೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಆವರ್ಸೆ, ಹೇರಾಡಿ, ಪಾಂಡೇಶ್ವರ ಮತ್ತು ಹೆಗ್ಗುಂಜೆ ವ್ಯಾಪ್ತಿಯವರಿಗೆ, ಫೆ. 24 ರಂದು ಹಿರೇಬೆಟ್ಟು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಮಲ್ಪೆ, ಬಡಗಬೆಟ್ಟು, ಮೂಡುಬೆಟ್ಟು, ಹೆರ್ಗ, ಅಂಬಲಪಾಡಿ, ಶಿವಳ್ಳಿ, ಕಡೇಕಾರು, ಹಿರೇಬೆಟ್ಟು, ಆತ್ರಾಡಿ ಮತ್ತು ಕೆಮ್ಮಣ್ಣು ವ್ಯಾಪ್ತಿಯವರಿಗೆ, ಫೆ. 27 ರಂದು ಬಸ್ರೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಕುಂದಾಪುರ ಪುರಸಭೆ, ಬಸ್ರೂರು, ತೆಕ್ಕಟ್ಟೆ, ಗುಳ್ಳಾಡಿ ಮತ್ತು ಜನ್ನಾಡಿ ವ್ಯಾಪ್ತಿಯವರಿಗೆ, ಫೆ. 28 ರಂದು ಅಂಪಾರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಅಂಪಾರು, ಕಾವ್ರಾಡಿ, ಹೊಸಂಗಡಿ, ಹಳ್ಳಿಹೊಳೆ, ಸಿದ್ಧಾಪುರ ಮತ್ತು ಕರ್ಕುಂಜೆ ವ್ಯಾಪ್ತಿಯವರಿಗೆ.
ಮಾರ್ಚ್ 1 ರಂದು ಬೈಂದೂರು ಆಶ್ರಮ ಶಾಲೆಯಲ್ಲಿ ಶಿರೂರು, ಉಪ್ಪುಂದ ಮತ್ತು ತಗ್ಗರ್ಸೆ ವ್ಯಾಪ್ತಿಯವರಿಗೆ, ಮಾ. 2 ರಂದು ಕಾರ್ಕಳ ಬಂಡೀಮಠ ವಿದ್ಯಾರ್ಥಿನಿಲಯದಲ್ಲಿ ಕಾರ್ಕಳ ಪುರಸಭೆ, ಶಿರ್ಲಾಲು, ಪಳ್ಳಿ ಮತ್ತು ರಂಜಾಳ ವ್ಯಾಪ್ತಿಯವರಿಗೆ, ಮಾ. 3 ರಂದು ನಿಟ್ಟೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಮುಡಾರು, ನೀರೆ, ಮರ್ಣೆ, ಬೋಳ, ನಿಟ್ಟೆ, ಮುದ್ರಾಡಿ, ಶಿರ್ಲಾಲು, ಇನ್ನಾ ಮತ್ತು ಮುಂಡ್ಕೂರು ವ್ಯಾಪ್ತಿಯವರಿಗೆ ಮತ್ತು ಮಾ. 4 ರಂದು ನಾಡಾ ಕೊರಗ ಸಮುದಾಯ ಭವನದಲ್ಲಿ ಹಕ್ಲಾಡಿ, ಆಲೂರು, ನಾಡಾ ಮತ್ತು ಹೊಸಾಡು ವ್ಯಾಪ್ತಿಯವರಿಗೆ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ನಡೆಯಲಿದೆ.
ಶಿಬಿರದಲ್ಲಿ ಸಾಮಾನ್ಯ ವೈದ್ಯಕೀಯ ಪರೀಕ್ಷೆ, ರಕ್ತದೊತ್ತಡ, ರಕ್ತ ಹೀನತೆ, ಮಧುಮೇಹ, ಬಾಯಿ ಮತ್ತು ದಂತ ಪರೀಕ್ಷೆ, ಗರ್ಭಕಂಠದ ಪರೀಕ್ಷೆ, ಮಕ್ಕಳ ಆರೋಗ್ಯ ತಪಾಸಣೆ, ಸ್ತನದ ಪರೀಕ್ಷೆ (ಮೆಮೋಗ್ರಾಫಿ, ಸಾಮಾನ್ಯ ಸ್ತ್ರೀರೋಗ ಪರೀಕ್ಷೆ, ಕಣ್ಣಿನ ತಪಾಸಣೆ ಹಾಗೂ ಉಚಿತ ಚಿಕಿತ್ಸೆ ಮತ್ತು ಕಾನ್ಸರ್ ಜಾಗೃತಿ ಕಾರ್ಯಕ್ರಮ ನಡೆಯಲಿದೆ.
ಆರೋಗ್ಯ ಶಿಬಿರವು ಸಂಪೂರ್ಣ ಉಚಿತವಾಗಿದ್ದು, ತಜ್ಞ ವೈದ್ಯರು ತಪಾಸಣೆ ನಡೆಸಿ, ಆರೋಗ್ಯದ ಕುರಿತು ಸಲಹೆ, ಸೂಚನೆ ನೀಡಲಿದ್ದಾರೆ. ಮುಂದಿನ ಎರಡು ವರ್ಷಗಳವರೆಗೆ ಮಂಗಳೂರು ಯೆನಪೋಯ ಆಸ್ಪತ್ರೆಯಲ್ಲಿ ಮುಂದುವರೆದ ಚಿಕಿತ್ಸೆಯನ್ನು ಉಚಿತವಾಗಿ ನೀಡಲಿದ್ದು, ಇದಕ್ಕಾಗಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಔಷಧಿ ಮತ್ತು ಆರೋಗ್ಯ ಕಾರ್ಡ್ ವಿತರಿಸಲಾಗುವುದು. ಮಹಿಳೆಯರಿಗಾಗಿ ಅತ್ಯಾಧುನಿಕ ತಂತ್ರಜ್ಞಾನದ ಮೊಬೈಲ್ ಕ್ಲಿನಿಕ್ ಬಸ್‌ನಲ್ಲಿ ತಪಾಸಣಾ ವ್ಯವಸ್ಥೆ ಇದ್ದು, ಪರಿಶಿಷ್ಟ ವರ್ಗದ ಬುಡಕಟ್ಟು ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಆರೋಗ್ಯ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಹಾಗೂ ಮಾಹಿತಿಗಾಗಿ ಡಾ. ಅಶ್ವಿನಿ ಶೆಟ್ಟಿ ಮೊ.ನಂ: 9964372938 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಸಮಗ್ರ ಗಿರಿಜನ
ಅಭಿವೃದ್ಧಿ ಯೋಜನೆಯ ಯೋಜನಾ ಸಮನ್ವಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.