ಚರ್ಮದ ಮೈಬಣ್ಣ, ಕಾಂತಿ ಹೆಚ್ಚಲು ಈ ಪಲ್ಯ ಮಾಡಿ ತಿಂದ್ರೆ ಸಾಕು: ನಮ್ಮ ಆರೋಗ್ಯ ನಮ್ಮ ಕೈಲಿ ಅಂಕಣ

ಸಾಮಾನ್ಯವಾಗಿ ಅಲಸಂಡೆ ಪಲ್ಯ ಅಥವಾ ಅಲಸಂಡೆ ಬೀಜದ ಸಾರು ಮಾಡುವುದನ್ನು ಕಂಡಿರುತ್ತೇವೆ. ಆದರೆ ಅಲಸಂಡೆ ಸೊಪ್ಪಿನ ಪಲ್ಯ ಕೂಡಾ ಮಾಡಬಹುದು ಎನ್ನುವುದು ನಿಮಗೆ ತಿಳಿದಿದೆಯೇ? ಅಲಸಂಡೆ ಸೊಪ್ಪಿನ ಪಲ್ಯ ತುಂಬಾ ರುಚಿಕರ ಮಾತ್ರವಲ್ಲದೆ ಆರೋಗ್ಯಕ್ಕೂ ತುಂಬಾ ಒಳ್ಳೆಯದು .ಅಲಸಂಡೆ ಸೊಪ್ಪು ಹಚ್ಚ-ಹಸಿರಾಗಿರುವುದರಿಂದ ಇದರಲ್ಲಿ ವಿಟಮಿನ್-ಎ ಹೇರಳವಾಗಿದೆ.ಇದರಿಂದ ಚರ್ಮದ ಮೈಬಣ್ಣ ಹಾಗೂ ಕಾಂತಿ ಹೆಚ್ಚುತ್ತದೆ ಹಾಗೂ ರಾತ್ರಿ ದೃಷ್ಟಿಯನ್ನು ಸುಧಾರಿಸುತ್ತದೆ. ಇದು ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ.
ಸಿಲ್ವಿಯಾ ಕೊಡ್ದೆರೋ ತಿಳಿಸಿದ್ದಾರೆ ಒಂದೊಳ್ಳೆ ಆರೋಗ್ಯಕರ ರೆಸಿಪಿ.

ವಿಟಮಿನ್-ಬಿ2 ಹಾಗೂ ವಿಟಮಿನ್-ಸಿ ಪ್ರಮಾಣ ಹೆಚ್ಚಾಗಿದೆ. ದೇಹಕ್ಕೆ ಬೇಕಾದಂತಹ ಕಬ್ಬಿಣ ಮತ್ತು ಕ್ಯಾಲ್ಸಿಯಂ ಒದಗಿಸುತ್ತದೆ. ಎಲ್ಲಾ ರೀತಿಯಲ್ಲೂ ಇದು ಆರೋಗ್ಯಕ್ಕೆ ಉತ್ತಮವಾಗಿದೆ.

ಮಾಡಲು ಏನೇನ್ ಬೇಕು?
*ಚೆನ್ನಾಗಿ ತೊಳೆದು ಸಣ್ಣಗೆ ಹೆಚ್ಚಿದ ಅಲಸಂಡೆ ಸೊಪ್ಪು
*ಬೆಳ್ಳುಳ್ಳಿ
*ಈರುಳ್ಳಿ
*ಹಸಿ ಮೆಣಸು
*ಟೊಮೆಟೊ
*ಅರಿಶಿನ ಹುಡಿ
*ಸಾಸಿವೆ
*ಜೀರಿಗೆ
*ಉಪ್ಪು
*ಎಣ್ಣೆ

ಹೀಗೆ ಮಾಡಿ:
ಒಂದು ಪಾತ್ರೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಸಾಸಿವೆ, ಜೀರಿಗೆ ಹಾಕಿ ಸಿಡಿದ ನಂತರ ಜಜ್ಜಿದ ಬೆಳ್ಳುಳ್ಳಿ ಹಾಕಿ ಸ್ವಲ್ಪ ಫ್ರೈ ಮಾಡಿ ನಂತರ ಕೊಚ್ಚಿದ ಈರುಳ್ಳಿ ಹಾಕಿ ನಸುಕಂದು ಬಣ್ಣಕ್ಕೆ ತಿರುಗಿದ ನಂತರ ಹಸಿಮೆಣಸು ಹಾಕಿ, ಸ್ವಲ್ಪ ತುರಿದ ಶುಂಠಿ, ಟೊಮೆಟೊ,ಅರಿಶಿಣ ಹುಡಿ ಹಾಕಿ ಫ್ರೈ ಮಾಡಿ ನಂತರ ಸಣ್ಣಗೆ ಹೆಚ್ಚಿದ ಅಲಸಂಡೆ ಸೊಪ್ಪು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕೈಯಾಡಿಸಿ ಮಧ್ಯಮ ಉರಿಯಲ್ಲಿ ಮುಚ್ಚಳ ಮುಚ್ಚಿ ಬೇಯಿಸಿ. ಬೇಕಾದಲ್ಲಿ ಕಾಲು ಲೋಟ ನೀರು ಸೇರಿಸಿ. ಕೊನೆಗೆ ಸ್ವಲ್ಪ ಕಾಯಿತುರಿಯನ್ನು ಸೇರಿಸಿ 2ನಿಮಿಷ ಬೇಯಿಸಿದರೆ ರುಚಿಕರ ಹಾಗೂ ಆರೋಗ್ಯಕರ ಅಲಸಂಡೆ ಸೊಪ್ಪಿನ ಪಲ್ಯ ರೆಡಿ.

ಸಿಲ್ವಿಯಾ ಕೊಡ್ದೆರೋ