ಭಾರತ ಕ್ರಿಕೆಟ್ ತಂಡದ ಬ್ಯಾಟ್ಸ್ಮನ್ ಶಿಖರ್ ಧವನ್ ಅವರ ಮಗ ಜೋರಾವರ್ ಶನಿವಾರ ತನ್ನ ಐದನೇ ವರ್ಷದ ಜನ್ಮದಿನವನ್ನು ವಿಶಿಷ್ಟವಾಗಿ ಆಚರಿಸಿಕೊಂಡನು. ಕೇಕ್ ಕತ್ತರಿಸುವ ಸಂದರ್ಭದಲ್ಲಿ ಜೋರಾವರ್ ಕುತ್ತಿಗೆಯಲ್ಲಿ ಹೆಬ್ಬಾವು, ತಲೆ ಮೇಲೆ ಕಪ್ಪೆ ಮತ್ತು ಸ್ಕಿಂಕ್ (ಹಲ್ಲಿ ಜಾತಿಯ ಪ್ರಾಣಿ) ಇದ್ದವು. ಪ್ರಾಣಿ, ಪಕ್ಷಿಗಳೆಂದರೆ ಅಪಾರ ಇಷ್ಟಪಡುವ ಜೋರಾವರ್ಗಾಗಿ ಆತನ ತಾಯಿ ಅಯೇಷಾ ಮುಖರ್ಜಿ ಅವರು ಈ ಜನ್ಮದಿನದ ಪಾರ್ಟಿ ಏರ್ಪಡಿಸಿದ್ದರು. ಇದರಲ್ಲಿ ಆತನ ಶಾಲೆಯ ಸ್ನೇಹಿತರು ಮತ್ತಿತರರು ಭಾಗವಹಿಸಿದ್ದರು.