udupixpress
Home Trending ಸೇನಾಧಿಕಾರಿಯಾಗಲು ಹ್ಯಾಟ್ರಿಕ್ ಹೀರೋ ರೆಡಿ: ಸೆಟ್ಟೇರಲಿದೆ ಒಂದು ಅದ್ಧೂರಿ ಆಕ್ಷನ್, ರೊಮ್ಯಾನ್ಸ್ ಚಿತ್ರ

ಸೇನಾಧಿಕಾರಿಯಾಗಲು ಹ್ಯಾಟ್ರಿಕ್ ಹೀರೋ ರೆಡಿ: ಸೆಟ್ಟೇರಲಿದೆ ಒಂದು ಅದ್ಧೂರಿ ಆಕ್ಷನ್, ರೊಮ್ಯಾನ್ಸ್ ಚಿತ್ರ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತಮ್ಮ ಹೊಸ ಚಿತ್ರಕ್ಕಾಗಿ ಸೇನಾಧಿಕಾರಿಯಾಗಲು ಸಿದ್ದತೆ ನಡೆಸಿದ್ದಾರೆ. ಕನ್ನಡ ಮತ್ತು ತೆಲುಗು ದ್ವಿಭಾಷೆಗಳಲ್ಲಿ ನಿರ್ಮಾಣಗೊಳ್ಳಲಿರುವ ಈ ಚಿತ್ರಕ್ಕೆ ಹೈದಾರಾಬಾದ್ ಮೂಲದ ಉದ್ಯಮಿ ಶ್ರೀಕಾಂತ್ ಧುಲಿಪುಡಿ ಬಂಡವಾಳ ಹಾಕುತ್ತಿದ್ದು ಇದೊಂದು ಬಹುನಿರೀಕ್ಷಿತ ಚಿತ್ರ ಎನ್ನಲಾಗುತ್ತಿದೆ.

ನವ ನಿರ್ದೇಶಕ ರಾಮ್ ಧುಲಿಪುಡಿ ಸಾರಥ್ಯದಲ್ಲಿ ಬರಲಿರುವ ಈ ಸಿನಿಮಾದಲ್ಲಿ ಆಕ್ಷನ್, ರೊಮ್ಯಾನ್ಸ್, ಸೆಂಟಿಮೆಂಟ್ ಎಲ್ಲವೂ ಇದೆಯಂತೆ. ಎಲ್ಲರಿಗೂ ಇಷ್ಟವಾಗುವ ಕತೆ, ಸನ್ನಿವೇಶಗಳಿವೆಯಂತೆ. ಕನ್ನಡ ಮತ್ತು ತೆಲುಗಿನಲ್ಲಿ ದೊಡ್ಡ ಮಟ್ಟದಲ್ಲಿ ತಯಾರಿಸಲು ನಿರ್ಧೇಶಕರು ಮುಂದಾಗಿದ್ದಾರೆ. ಸೇನೆಯ ಯೂನಿಫಾರ್ಮ್ ನಲ್ಲಿ ಶಿವರಾಜ್ ಕುಮಾರ್ ಅವರನ್ನು ನೋಡಿದ ಅವರ ಅಭಿಮಾನಿಗಳು ಗ್ಯಾರಂಟಿ ಥ್ರಿಲ್ಲ್ ಆಗುತ್ತಾರೆ. ಚಿತ್ರದ ಪೋಸ್ಟರ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನವೆಂಬರ್ ನಲ್ಲಿ ಫೋಟೋಶೂಟ್ ನಡೆಯಲಿದೆ ಎಂದಿದ್ದಾರೆ ನಿರ್ದೇಶಕರು.

error: Content is protected !!