ಮಾ.14ರಿಂದ 20ರ ವರೆಗೆ “ಹರ್ಷೋತ್ಸವ” ಸಂಭ್ರಮಾಚರಣೆ

ಉಡುಪಿ: ಗ್ರಾಹಕರ ನೆಚ್ಚಿನ ಶಾಪಿಂಗ್ ಹಬ್ಬ “ಹರ್ಷೋತ್ಸವ” ಈ ಬಾರಿ ಇನ್ನಷ್ಟು ವೈಶಿಷ್ಟ್ಯಗಳೊಂದಿಗೆ ಮಾ.14 ರಿಂದ 20ರ ವರೆಗೆ ನಡೆಯಲಿದೆ.

ಉಡುಪಿಯ 3, ಮಂಗಳೂರಿನ 2, ಬ್ರಹ್ಮಾವರ, ಸುರತ್ಕಲ್, ಪುತ್ತೂರು, ಕುಂದಾಪುರ, ಶಿವಮೊಗ್ಗ ಮಳಿಗೆಗಳಲ್ಲಿ ಗ್ರಾಹಕರ ಶಾಪಿಂಗ್ ಹಬ್ಬ ಹರ್ಷೋತ್ಸವ ಸಂಭ್ರಮದಿಂದ ಜರುಗಲಿದೆ‌.

ಜಗತ್ಪ್ರಸಿದ್ಧ ಬ್ರ್ಯಾಂಡ್ ಗಳಾದ ಗೋದ್ರೇಜ್, ಒನಿಡಾ, ವೋಲ್ಟಾಸ್, ಐಎಫ್ ಬಿ , ವಲ್ಸಪೂಲ್ , ಸೋನಿ, ಪ್ಯಾನಸೋನಿಕ್, ಎಲ್ ಜಿ, ಸ್ಯಾಮ್ ಸಂಗ್, ಬೋಶ್, ಹೈಯರ್, ಲೀಭೇರ್, ಬ್ಲೂ ಸ್ಟಾರ್, ಆಪಲ್, ಎಚ್ ಪಿ, ನಿಕಾನ್, ಪ್ರೆಸ್ಟೀಜ್, ಉಷಾ ಮೊದಲಾದ ಕಂಪೆನಿಗಳ ಗೃಹೋಪಕರಣಗಳು ವಿಶಾಲ ಶ್ರೇಣಿಯಲ್ಲಿ ಲಭ್ಯವಿದ್ದು, ಅತ್ಯುತ್ತಮ ಬೆಲೆಯಲ್ಲಿ, ಕೊಡುಗೆಗಳೊಂದಿಗೆ ಸಿಗುವುದು ಹರ್ಷೋತ್ಸವದ ವಿಶೇಷತೆ.

1987ರ ಮಾ.9 ರಂದು ಉಡುಪಿಯಲ್ಲಿ ಪ್ರಾರಂಭಗೊಂಡ ಹರ್ಷ, ಗೃಹೋಪಕರಣಗಳ ಮಾರಾಟ ಮತ್ತು ಸೇವೆಯಲ್ಲಿ ಪ್ರಸಿದ್ಧ ಮಳಿಗೆಯಾಗಿ ರಾಜ್ಯಾದ್ಯಂತ 12 ನಗರಗಳ 16 ಮಳಿಗೆಗಳಲ್ಲಿ 15 ಲಕ್ಷಕ್ಕೂ ಅಧಿಕ ಗ್ರಾಹಕರ ಮನೆ ಮಾತಾಗಿದೆ.

ಕರಾವಳಿ ಜಿಲ್ಲೆಯಲ್ಲಿ ಶಾಪಿಂಗ್ ಸಂಸ್ಕೃತಿಯನ್ನು ಹುಟ್ಟುಹಾಕಿದ ಕೀರ್ತಿ ಹರ್ಷಕ್ಕೆ ಸಲ್ಲುತ್ತದೆ. 3 ದಶಕಗಳಿಂದ ಉಡುಪಿ, ಮಂಗಳೂರು ನಗರಗಳಲ್ಲಿ ಗ್ರಾಹಕರ ವಿಶ್ವಾಸ ಗಳಿಸಿದ ಹರ್ಷ ಅನಂತರ ಶಿವಮೊಗ್ಗ, ಹುಬ್ಬಳ್ಳಿ, ಪುತ್ತೂರು, ಕುಂದಾಪುರ, ಬೆಳಗಾವಿ, ಧಾರವಾಡ, ಕಲಬುರಗಿ, ಬೆಂಗಳೂರು, ಬ್ರಹ್ಮಾವರ, ಸುರತ್ಕಲ್ ನಗರಗಳಲ್ಲಿ ಶಾಪಿಂಗ್ ನ ವಿನೂತನ ಅನುಭವವನ್ನು ನೀಡಲೆಂದೇ 25,000 ಚ. ಅಡಿಯ 3 ಅಂತಸ್ತುಗಳ ವಿಶಾಲ ಸಂಗ್ರಹದೊಂದಿಗೆ ಬೃಹತ್ ಮಳಿಗೆಗಳನ್ನು ಹೊಂದಿದೆ.

ಈ ಬಾರಿ ಉಡುಪಿಯ ಜನತೆಗೆಂದೇ ವಿಶೇಷವಾಗಿ ಎಲ್ಲ ಬಗೆಯ ನವ- ನವೀನ ಮಾದರಿಯ ಗುಣಮಟ್ಟದ ಪೀಠೋಪಕರಣಗಳು, ಫಿಟ್ನೆಸ್, ಜಿಮ್ ಉಪಕರಣಗಳು ಸೇರಿದಂತೆ ಡಿಜಿಟಲ್ ಹಾಗೂ ಗೃಹೋಪಕರಣಗಳನ್ನು ಒಳಗೊಂಡ 4 ಅಂತಸ್ತುಗಳ ಅತೀ ದೊಡ್ಡ ಮಳಿಗೆ ನಗರದ ಹೃದಯ ಭಾಗದ ಸಿಟಿ ಬಸ್ ನಿಲ್ದಾಣದ ಸಮೀಪ ತೆರೆಯಲ್ಪಟ್ಟಿದೆ.

ಪ್ರೀತಿಯ ಕರೆಯೋಲೆ  

35 ವರ್ಷಗಳಿಂದ ಪ್ರತೀ ವರ್ಷ ಹರ್ಷೋತ್ಸವದ ಆಮಂತ್ರಣ ಪತ್ರಿಕೆಯನ್ನು ಕಳುಹಿಸಿ, ಹುಟ್ಟುಹಬ್ಬದ ಅದ್ದೂರಿ ಆಚರಣೆಗೆ ತನ್ನೆಲ್ಲ ಗ್ರಾಹಕರನ್ನು ಆಹ್ವಾನಿಸುತ್ತಿರುವುದು ಹರ್ಷದ ಹಿರಿಮೆ.

ಈ ಬಾರಿ ಸುಮಾರು 4.7 ಲಕ್ಷ ಮಂದಿ ಗ್ರಾಹಕರಿಗೆ ಕರೆಯೋಲೆಯನ್ನು ಕಳುಹಿಸಲಾಗಿದೆ.

ತ್ವರಿತ ಲಕ್ಕಿ ಡ್ರಾ ಕೊಡುಗೆಗಳು

ಅಂತಾರಾಷ್ಟ್ರೀಯ ಬ್ರ್ಯಾಂಡ್ ನ ಉತ್ಪನ್ನಗಳನ್ನು ರಿಯಾಯಿತಿ ದರದಲ್ಲಿ ಗ್ರಾಹಕರಿಗೆ ನೀಡುವುದು ಹರ್ಷದ ವಿಶೇಷತೆ.

ಹರ್ಷೋತ್ಸವದ ಆಕರ್ಷಕ ವಿನಿಮಯ ಕೊಡುಗೆಗಳು, ವಿಶಿಷ್ಟ ಕಾಂಬಿ ಕೊಡುಗೆಗಳು, ವಿಶೇಷ ರಿಯಾಯಿತಿಗಳು, ಖಚಿತ ಉಡುಗೊರೆಗಳು ಗ್ರಾಹಕರಿಗೆ ಹೆಚ್ಚಿನ ಸಂತಸ ನೀಡಲಿದೆ.

ಅಲ್ಲದೆ ಹರ್ಷೋತ್ಸವದ ಕೇಂದ್ರ ಬಿಂದು ಲಕ್ಕಿ ಡ್ರಾ, ಖರೀದಿಯ ಅನಂತರ ಸ್ಥಳದಲ್ಲೇ ನಡೆಯುವ ಲಕ್ಕಿ ಡ್ರಾದಲ್ಲಿ ಗ್ರಾಹಕರು ಆ ಕೂಡಲೇ ಎಲ್ಐಡಿ ಟಿವಿ, ಸ್ಪ್ಲಿಟ್ ಎಸಿ, ಸ್ಮಾರ್ಟ್ ಫೋನ್, ಸ್ಮಾರ್ಟ್ ವಾಚ್, ಮೈಕ್ರೋವೇವ್ ಓವನ್, ಮಿಕ್ಸರ್, ಗ್ರೈಂಡರ್, ಎಲೆಕ್ಟ್ರಿಕ್ ಕುಕ್ಕರ್ ಸಹಿತ 12 ಸಾವಿರಕ್ಕೂ ಹೆಚ್ಚು ಬಹುಮಾನಗಳನ್ನು ಗೆಲ್ಲುವ ಅವಕಾಶವಿದೆ.

ಐಎಮ್ಐ ಖರೀದಿ- ಬಹುಮಾನ

ಬಜಾಜ್ ಫೈನಾನ್ಸ್, ಎಚ್ ಡಿಸಿ, ಎಚ್ ಡಿಎಫ್ ಸಿ, ಕೋಟಕ್ ಮಹಿಂದ್ರಾ ಬ್ಯಾಂಕ್ ಅಥವಾ ಐಡಿಎಫ್ ಸಿ ಮೂಲಕ ಗ್ರಾಹಕರ ಕೈಗೆಟಕುವ ಐಎಂಐ ಯೋಜನೆಯಡಿ ಇಷ್ಟವಾದ ಗೃಹೋಪಕರಣಗಳನ್ನು ಖರೀದಿಸಿ, ಬಡ್ಡಿ ರಹಿತ ಸುಲಭ ಕಂತುಗಳಲ್ಲಿ ಅನಂತರ ಪಾವತಿಸಬಹುದು.

ಇದರೊಂದಿಗೆ ಈ ಬಾರಿ ವಿಶೇಷವಾಗಿ ಸುಲಭ ಕಂತು ಯೋಜನೆಯಡಿ ಖರೀದಿಸುವ ಗ್ರಾಹಕರಿಗೆ ಲಕ್ಕಿ ಡ್ರಾ ಮೂಲಕ ಎಲ್ ಜಿ ಸಂಸ್ಥೆಯ 65″ ಎಲ್ಇಡಿ ಟಿವಿ, ಸೈಡ್- ಬೈ- ಸೈಡ್

ರೆಫ್ರಿಜರೇಟರ್, ವಾಷಿಂಗ್ ಮೆಷನ್, ಏರ್ ಕಂಡೀಷನರ್, ಮೈಕ್ರೋವೇವ್ ಓವನ್ ಗೆಲ್ಲುವ ಅವಕಾಶವಿದೆ.

ವಿವಿಧ ಬ್ಯಾಂಕುಗಳ ಡೆಬಿಟ್/ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಯೊಂದಿಗೆ ಶೇ.15ರ ವರೆಗೆ ಕ್ಯಾಶ್ ಬ್ಯಾಕ್ ದೊರೆಯಲಿದೆ‌.

ಎಸ್ ಬಿಐ ಕಾರ್ಡ್ ಮೂಲಕ ಶಾಪಿಂಗ್ ಮಾಡಿದ್ದಲ್ಲಿ ವಿಶೇಷವಾಗಿ ಶೇ.7.5ರ ವರೆಗಿನ ಕ್ಯಾಶ್ ಬ್ಯಾಕ್ ಲಭ್ಯವಿದೆ.

ಕೊಡುಗೆಗಳು- ರಿಯಾಯಿತಿ ದರ

ಗ್ರಾಹಕರು ಖರೀದಿಸುವ ಎಲ್ಲ ವಸ್ತು- ವೈವಿಧ್ಯಗಳು ಜೊತೆಗೆ ಖಚಿತ ಉಡುಗೊರೆಗಳು ದೊರೆಯಲಿವೆ.

ನವನವೀನ ಮಾದರಿಯ ಗೃಹೋಪಯೋಗಿ ವಸ್ತುಗಳು, ಹೆಲ್ತ್ ಕೇರ್ ಬ್ಯೂಟಿ ಕೇರ್ ಉತ್ಪನ್ನಗಳು ಹಲವಾರು ಕೊಡುಗೆಗಳೊಂದಿಗೆ ಒಂದೇ ಸೂರಿನಡಿ ಲಭ್ಯವಿವೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.