ನಿಮಗೆ ಗೊತ್ತಿದ್ಯೋ ಇಲ್ವೋ ಗೊತ್ತಿಲ್ಲ. ಮಾಡರ್ನ್ ಜೀವನ ಶೈಲಿ ಹಾಗೂ ಡಯಟ್ ನಿಂದ ಈಗೀಗ ನಮಗೆ ಚರ್ಮದ ಸಮಸ್ಯೆ ಅತೀಯಾಗಿ ಕಾಡ್ತಿದೆ. ಚರ್ಮವನ್ನು ಹೇಗೆ ಕೇರ್ ಮಾಡಿಕೊಳ್ಳಬೇಕು ಎನ್ನುವ ಕುರಿತು ನಮಗೆಲ್ಲಾ ಮಾಹಿತಿ ಕಮ್ಮಿ. ಅದಕ್ಕೋಸ್ಕರವೇ ಚರ್ಮವನ್ನು ಕಾಂತಿಯುತವಾಗಿ ಇಟ್ಟುಕೊಳ್ಳಲು ಏನೇನ್ ಮಾಡ್ಬೇಕು ಎನ್ನುವ ಕುರಿತು ಒಂದಷ್ಟ್ ಮಾಹಿತಿ ಇಲ್ಲಿದೆ ನೋಡಿ:
ಚರ್ಮದ ರಕ್ಷಣೆಗೆ ಸಿಂಪಲ್ ಐಡಿಯಾಗಳು:
*ಪಿಂಪಲ್ಸ್- ಇದು ಹಾರ್ಮೋನಲ್ ಇಂಬ್ಯಾಲೆನ್ಸ್, ಜಿಡ್ಡಿನ ಪದಾರ್ಥ, ಜಂಕ್ ಫುಡ್ ,ಸ್ಟ್ರೆಸ್ ಇಂದ ಬರುತ್ತದೆ .ಪಿಂಪಲ್ಸ್ ಬಂದಾಗ ಅದನ್ನು ಮುಟ್ಟುವುದು, ಮೇಕಪ್ ಮಾಡಿಕೊಳ್ಳಲು ಹೋಗಲೇಬೇಡಿ.
* ಸ್ಕಿನ್ ಟ್ಯಾನ್-ಪ್ರಖರ ಬಿಸಿಲಿಗೆ ನಮ್ಮ ಚರ್ಮದಲ್ಲಿ ಮೆಲಾನಿನ್ ಪಿಗ್ಮೆಂಟ್ ಉತ್ಪತ್ತಿಯಾಗುವುದರಿಂದ ಸ್ಕಿನ್ ಟ್ಯಾನ್ ಕಾಣಬಹುದು. ಆದ್ದರಿಂದ ಬೆಳಿಗ್ಗೆ ಹತ್ತರಿಂದ ಸಂಜೆ ನಾಲ್ಕರವರೆಗೆ ಬಿಸಿಲಿಗೆ ಹೋಗಬೇಡಿ. ಅನಿವಾರ್ಯ ಇದ್ದರೆ ಛತ್ರಿ ಅಥವಾ ಹ್ಯಾಟ್ ಧರಿಸಿ ಹಾಗೂ ಕಣ್ಣಿಗೆ ಗೋಬೆಲ್ಸ್ ಹಾಕಿರಿ. ಮನೆಗೆ ಬಂದ ತಕ್ಷಣ ಐಸ್ ಅನ್ನು ಬಟ್ಟೆಯ ಒಳಗೆ ಇಟ್ಟು ಫೇಸ್ ಮಸಾಜ್ ಮಾಡಿ. ಇದರಿಂದ ಸ್ಕಿನ್ ಟ್ಯಾನ್ ಕಡಿಮೆಯಾಗುತ್ತದೆ.
*ಚರ್ಮ ಸೌಂದರ್ಯಕ್ಕೆ ನಾವು ದಿನನಿತ್ಯ ತೆಂಗಿನ ಎಣ್ಣೆಯ ಮಸಾಜ್ ಮಾಡಿ ಸ್ನಾನ ಮಾಡಿದರೆ ತುಂಬಾ ಒಳ್ಳೆಯದು. ಇದರಿಂದ ಚರ್ಮ ಸುಕ್ಕುಗಟ್ಟುವುದಿಲ್ಲ ಹಾಗೂ ನಮ್ಮ ಚರ್ಮದ ಸೌಂದರ್ಯ ಹೆಚ್ಚುತ್ತದೆ.
* ತುಟಿಯ ಸೌಂದರ್ಯಕ್ಕೆ ಡೈಲಿ ಬೀಟ್ರೂಟ್ ರಸ ಅಥವಾ ದಾಳಿಂಬೆಯ ರಸದಿಂದ ಐದು ನಿಮಿಷ ಮಸಾಜ್ ಮಾಡಿ.
* ರಿಂಕ್ಸ್ ಕಡಿಮೆ ಮಾಡಲು ತೆಂಗಿನ ಎಣ್ಣೆ, ಅಲ್ವೇರಾಜೆಲ್, ಪೈನಾಪಲ್ ರಸ, ಕ್ಯಾರೆಟ್ ರಸ, ಯಾವುದಾದರೂ ಒಂದರಿಂದ ಮಸಾಜ್ ಮಾಡಿ ಒಣಗಿದ ಮೇಲೆ ತೊಳೆಯಿರಿ.
* ಫಂಗಲ್ ಇನ್ಫೆಕ್ಷನ್ –ಇದರ ಪ್ರಮುಖ ಕಾರಣ ನಾವು ಚರ್ಮವನ್ನು ಶುಚಿಯಾಗಿ ಇಡದೇ ಇರುವುದರಿಂದ ಹಾಗೂ ಒದ್ದೆ ಬಟ್ಟೆ ಧರಿಸುವುದರಿಂದ ಸೋ ಇದನ್ನು ನಿರಾಕರಿಸಿ.
ಫೇಸ್ ಪ್ಯಾಕ್ ಮಾಡಿ ಆರಾಮಾಗಿರಿ:
*ಕಡ್ಲೆ ಹಿಟ್ಟಿನ ಫೇಸ್ ಪ್ಯಾಕ್
ಒಂದು ದೊಡ್ಡ ಚಮಚ ಕಡ್ಲೆ ಹಿಟ್ಟು, 1-2 ಚಮಚ ಹಳದಿ, ಎರಡು ಚಮಚ ರೋಸ್ ವಾಟರ್ ನ್ನು ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ ಒಣಗಿದ ನಂತರ ತೊಳೆಯಿರಿ. ಹಳದಿ ಆ್ಯಂಟಿಬ್ಯಾಕ್ತಿರಿಯಲ್, ಆ್ಯಂಟಿ ಸೆಪ್ಟಿಕ್ ಆಗಿ ಕಾರ್ಯನಿರ್ವಹಿಸುತ್ತದೆ. ಕಡ್ಲೆ ಹಿಟ್ಟು ಚರ್ಮದ ರಕ್ಷಣೆ ಮಾಡುತ್ತದೆ .
ಚಂದನ ಫೇಸ್ ಪ್ಯಾಕ್-
ಚಂದನ ಪೌಡರ್ ಎರಡು ಚಮಚ, ಜೇನುತುಪ್ಪ ಒಂದು ಚಮಚ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ ಒಣಗಿದ ನಂತರ ತೊಳಿಯಿರಿ.
ಅಕ್ಕಿ ಹಿಟ್ಟಿನ ಫೇಸ್ಪ್ಯಾಕ್ .
2 ಚಮಚ ಅಕ್ಕಿಹಿಟ್ಟು, 1 ಚಮಚ ಜೇನುತುಪ್ಪ, 1 ಚಮಚ ರೋಸ್ವಾಟರ್ಕಲಿಸಿ ಪೇಸ್ಟ್ ಮುಖಕ್ಕೆ ಹಚ್ಚಿ ಒಣಗಿದ ಮೇಲೆ ನೀರಿನಿಂದ ತೊಳೆಯಿರಿ. ಅಯ್ಲಿ ಸ್ಕಿನ್ ಇದ್ದವರಿಗೆ ಇದು ಒಳ್ಳೆಯದು .
ಇದನ್ನೂ ಮಾಡಿ:
ಸ್ವಲ್ಪ ಬೇವಿನ ಎಲೆ ಹಾಗೂ ಸ್ವಲ್ಪ ತುಳಸಿ ಎಲೆಯನ್ನು ಜಜ್ಜಿ ಅದರ ರಸವನ್ನು ತೆಗೆದು, ಅದಕ್ಕೆ ಹಳದಿ ಹಾಕಿ ಯಾವುದೇ ಚರ್ಮದ ಇನ್ಫೆಕ್ಷನ್ಗೆಹಚ್ಚಿದರೆ ಬೇಗ ಗುಣವಾಗುತ್ತದೆ. ದಿನನಿತ್ಯ ತೆಂಗಿನ ರಸವನ್ನು ಹಚ್ಚಿದರೆ ಚರ್ಮದ ಕಾಂತಿ ಹೆಚ್ಚುತ್ತದೆ.
ಹೀಗ್ ಮಾಡಿ:
ದಿನ ನಿತ್ಯ ಎಂಟು ಗಂಟೆಯ ನಿದ್ದೆ ಹಾಗೂ ಎಂಟು ಗ್ಲಾಸ್ ನೀರನ್ನು ಕುಡಿಯಲು ಮರೆಯದಿರಿ .
ಹಸಿರು ತರಕಾರಿ ಹಾಗೂ ಹಣ್ಣು ಚರ್ಮಕ್ಕೆ ಒಳ್ಳೆಯದು
ಇದು ಬೇಡ:
- ಜಿಡ್ಡಿನ ಪದಾರ್ಥ, ಜಂಕ್ ಫುಡ್, ಐಸ್ಕ್ರೀಂ, ಚಾಕೊಲೇಟ್, ಸ್ವೀಟ್.