ಉಡುಪಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66 ಕರಾವಳಿ ಜಂಕ್ಷನ್ ಬಳಿ ಶ್ರೀರಾಮದರ್ಶನ ಕಟ್ಟಡದಲ್ಲಿರುವ ಹೀರೋ ಶಕ್ತಿ ಮೋಟಾರ್ಸ್ ನಲ್ಲಿ ಉಡುಪಿ ಜಿಲ್ಲೆಯ ಪ್ರಪ್ರಥಮ ಹಾರ್ಲೆ ಡೇವಿಡ್ ಸನ್- X440 ಬೈಕ್ ಗಳನ್ನು ಶನಿವಾರದಂದು ಅನಾವರಣಗೊಳಿಸಲಾಯಿತು.

ಹಾರ್ಲೆ ಡೇವಿಡ್ ಸನ್- X440 ಪ್ರಥಮ ಗ್ರಾಹಕರಾದ ಶಯಾನ್ ಕ್ರಾಸ್ತಾ, ರೋಲ್ಸನ್ ಡಿ ಅಲ್ಮೇಡಾ ಹಾಗೂ ನಿತ್ಯಾನಂದ ಕೇಶವ ಮೇಸ್ತ ಇವರಿಗೆ ಬೈಕ್ ಗಳನ್ನು ಕಂಪನಿಯ ನಿರ್ದೇಶಕ ವಿಜಯ್ ಕರ್ಣೆ ಹಸ್ತಾಂತರಿಸಿದರು.

ಉಡುಪಿ ಜಿಲ್ಲೆಯಲ್ಲಿ ಪ್ರಪ್ರಥಮ ಹಾಲೆ ಡೇವಿಡ್ ಸನ್- X440 ಬೈಕ್ ಇದಾಗಿದ್ದು, ಹೀರೋ ಶಕ್ತಿ ಮೋಟಾರ್ಸ್ ಜೊತೆ ಹಾರ್ಲೆ ಕಂಪನಿಯು ಪಾಲುದಾರಿಕೆ ಹೊಂದಿದೆ. ಅದಾಗಲೇ 30ಕ್ಕೂ ಮಿಕ್ಕಿ ಬುಕಿಂಗ್ ಗಳಾಗಿದ್ದು, ಮೊದಲ ಮೂರು ಗ್ರಾಹಕರಿಗೆ ಇಂದು ಬೈಕ್ ಗಳನ್ನು ಹಸ್ತಾಂತರಿಸಲಾಯಿತು. ಮುಂದಿನ ದಿನಗಳಲ್ಲಿ ಗ್ರಾಹಕರ ಅವಶ್ಯಕತೆಗಳಿಗೆ ತಕ್ಕಂತೆ ಬೇಡಿಕೆಯ ದ್ವಿಚಕ್ರ ವಾಹನಗಳನ್ನು ಜಿಲ್ಲೆಗೆ ಪರಿಚಯಿಸಲಾಗುವುದು ಎಂದು ನಿರ್ದೇಶಕ ವಿಜಯ್ ತಿಳಿಸಿದರು.
ಹೀರೋ ಶಕ್ತಿ ಮೋಟಾರ್ಸ್ ನಲ್ಲಿ ನವನವೀನ ಮಾದರಿಯ ಅತ್ಯಾಧುನಿಕ ಬೈಕ್ ಗಳು ಲಭ್ಯವಿದ್ದು, ಮೊದಲ ಬಾರಿಗೆ ಹಾರ್ಲೆ ಡೇವಿಡ್ ಸನ್ X440 ಬೈಕ್ ಗಳನ್ನು ಪರಿಚಯಿಸಲಾಗಿದೆ. ಬೈಕ್ ಬೆಲೆ 2.39 ಲಕ್ಷ ರೂ (ಎಕ್ಸ್ ಶೋ ರೂಂ) ನಿಂದ ಪ್ರಾರಂಭವಾಗುತ್ತದೆ. ಟಾಪ್ ಮಾಡೆಲ್ ಗೆ 2.79 ಲಕ್ಷ ರೂ ಆಗಲಿದೆ.

ಟಾಪ್ ಮಾಡೆಲ್ ನಲ್ಲಿ S-ವೇರಿಯೆಂಟ್, ವಿವಿಡ್ ಮತ್ತು ಡೆನಿಮ್ ಶ್ರೇಣಿಗಳಲ್ಲಿ ಲಭ್ಯವಿದೆ. ಗ್ರಾಹಕರ ಅನುಕೂಲಕ್ಕಾಗಿ ಬ್ಯಾಂಕ್ ಲೋನ್ ಸೌಲಭ್ಯ ಮತ್ತು ಸರ್ವಿಸಿಂಗ್ ಕೂಡಾ ಮಾಡಿಕೊಡಲಾಗುತ್ತದೆ. ಬೈಕ್ ಗಳ ಬುಕಿಂಗ್ ಪ್ರಾರಂಭವಾಗಿದ್ದು ಶೋರೂಂ ಗೆ ಭೇಟಿ ನೀಡಬಹುದು.
ವೈಶಿಷ್ಟ್ಯಗಳು
H-D X440 ಸಿಂಗಲ್ ಸಿಲಿಂಡರ್ ಹಾರ್ಲೆ-ಡೇವಿಡ್ಸನ್ ಅನ್ನು ಮರುರೂಪಿಸಲಾಗಿದೆ. ನಿಸ್ಸಂದಿಗ್ಧವಾದ ಶಕ್ತಿ ಮತ್ತು ಉಪಸ್ಥಿತಿಯೊಂದಿಗೆ ವೇಗವುಳ್ಳ, ಆರಾಮದಾಯಕ ಸವಾರಿಯೊಂದಿಗೆ, H-D X440 ಅನ್ನು ಸಂಪೂರ್ಣ ಹೊಸ ಪೀಳಿಗೆಯ ಹಾರ್ಲೆ-ಡೇವಿಡ್ಸನ್ ಕುಟುಂಬಕ್ಕೆ ತರಲು ವಿನ್ಯಾಸಗೊಳಿಸಲಾಗಿದೆ.
ಹೊಸ 440cc ಆಯಿಲ್ ಕೂಲ್ಡ್ ಎಂಜಿನ್ ಕ್ಲಾಸಿಕ್ ರೆಟ್ರೊ ವಿನ್ಯಾಸ ಹೊಂದಿದೆ ಮತ್ತು ಪವರ್ ಜೊತೆಗೆ ಸಾಕಷ್ಟು ಕಡಿಮೆ ಮತ್ತು ಮಧ್ಯಮ ಶ್ರೇಣಿಯ ಟಾರ್ಕ್ ಅನ್ನು ಹೊರಹಾಕುತ್ತದೆ. 6-ಸ್ಪೀಡ್ ಟ್ರಾನ್ಸ್‌ಮಿಷನ್ ಗೇರಿಂಗ್ ಹೈವೇ ಕ್ರೂಸಿಂಗ್ ಮತ್ತು ನಗರ ಪ್ರಯಾಣಕ್ಕಾಗಿ ಹೊಂದುವಂತೆ ಮಾಡುತ್ತದೆ.












