‘ಹನು ಮಾನ್’ ಪ್ರಶಾಂತ್ ವರ್ಮಾ ಬರೆದು ನಿರ್ದೇಶಿಸಿದ ಮುಂಬರುವ ಭಾರತೀಯ ತೆಲುಗು ಭಾಷೆಯ ಸೂಪರ್ ಹೀರೋ ಚಿತ್ರವಾಗಿದೆ. ಪ್ರೈಮ್‌ಶೋ ಎಂಟರ್‌ಟೈನ್‌ಮೆಂಟ್ ನಿರ್ಮಿಸಿರುವ ಈ ಚಿತ್ರದಲ್ಲಿ ತೇಜ ಸಜ್ಜ ಮತ್ತು ಅಮೃತಾ ಅಯ್ಯರ್ ನಟಿಸಿದ್ದಾರೆ. ಈ ಚಿತ್ರವು ಕಾಲ್ಪನಿಕ ಗ್ರಾಮ ಅಂಜನಾದ್ರಿಯ ಮೇಲೆ ಚಿತ್ರಿತವಾಗಿದೆ ಮತ್ತು ಪ್ರಶಾಂತ್ ವರ್ಮಾ ಸಿನಿಮಾಟಿಕ್ ಯೂನಿವರ್ಸ್ ನ ಭಾಗವಾಗಿದೆ. ಕೆ ನಿರಂಜನ್ ರೆಡ್ಡಿ ಚಿತ್ರದ ನಿರ್ಮಾಪಕರಾಗಿದ್ದಾರೆ. ಚಿತ್ರವು ಡಿಸೆಂಬರ್ ನಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ.
ಚಿತ್ರದ ಶೀರ್ಷಿಕೆಯ ಬಗ್ಗೆ ಡೆಕ್ಕನ್ ಕ್ರೋನಿಕಲ್ ಜೊತೆ ಮಾತನಾಡಿದ ಪ್ರಶಾಂತ್ ವರ್ಮಾ, ಹಿಂದೂ ಪುರಾಣಗಳಲ್ಲಿ ಯಾವುದೇ ಮಹಾಶಕ್ತಿ ಅಥವಾ ಮಹಾವೀರನ ಬಗ್ಗೆ ಯೋಚಿಸುವಾಗ, ಭಗವಾನ್ ಹನುಮಂತನನ್ನು ನೆನಪಿಸಿಕೊಳ್ಳುವ ಅನೇಕರಿಗೆ ಇದು ಸಮರ್ಪಣೆಯಾಗಿರುವುದರಿಂದ ನಾನು ಈ ಹೆಸರನ್ನು ಆಯ್ಕೆ ಮಾಡಿದ್ದೇನೆ. ಚಿತ್ರದಲ್ಲಿ ನಾಯಕನ ಹೆಸರು ಹನು-ಮಾನ್ ಎಂದಾಗಿದೆ ಮತ್ತು ಇದು ಹಿಂದೂ ದೇವರಾದ ಹನುಮಂತನಿಂದ ಪ್ರೇರಿತವಾಗಿದೆ ಎಂದಿದ್ದಾರೆ.
ಹನುಮಂತು ಪಾತ್ರದಲ್ಲಿ ತೇಜ ಸಜ್ಜ, ಮೀನಾಕ್ಷಿಯಾಗಿ ಅಮೃತಾ ಅಯ್ಯರ್, ಅಂಜಮ್ಮ ಪಾತ್ರದಲ್ಲಿ ವರಲಕ್ಷ್ಮಿ ಶರತ್‌ಕುಮಾರ್, ಮೈಕೆಲ್ ಆಗಿ ವಿನಯ್ ರೈ ಮತ್ತು ರಾಜ್ ದೀಪಕ್ ಶೆಟ್ಟಿ ಮುಂತಾದವರು ನಟಿಸಿದ್ದಾರೆ. 75 ಕೋಟಿ ರೂ ಬಜೆಟ್ ನಲ್ಲಿ ನಿರ್ಮಾಣವಾದ ಸಿನಿಮಾ ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ತೆರೆಕಾಣಲಿದೆ. ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸದ್ದುಮಾಡುತ್ತಿದ್ದು ಜನರು ಕೈಮುಗಿಯುತ್ತಿದ್ದಾರೆ.
ದಾಶರಧಿ ಶಿವೇಂದ್ರ ಛಾಯಾಗ್ರಹಣ, ಶ್ರೀಕಾಂತ್ ಪಟ್ನಾಯಕ್ ಆರ್, ಎಸ್.ಬಿ.ರಾಜು ತಳಾರಿ ಸಂಕಲನ, ಅನುದೀಪ್ ದೇವ್, ಹರಿ ಗೌರ, ಜೈ ಕ್ರಿಶ್ ಕೃಷ್ಣ ಸೌರಭ ಸಂಗೀತ ವಿಭಾಗದಲ್ಲಿ ದುಡಿದಿದ್ದಾರೆ.
ಈ ಹಿಂದೆ ಪುರಾಣದ ಆಧಾರದಲ್ಲಿ ತೆರೆಕಂಡಿದ್ದ ಕಾರ್ತಿಕೇಯನ್-2 ಎನ್ನುವ ಸಿನಿಮಾವು ದೇಶಾದ್ಯಂತ ಸದ್ದು ಮಾಡಿದ್ದು, ಗಲ್ಲಾ ಪೆಟ್ಟಿಗೆಯಲ್ಲಿ ಲಾಭಗಳಿಸಿರುವುದನ್ನು ನೆನಪಿಸಿಕೊಳ್ಳಬಹುದು.