ಜೀವ ನುಂಗಲು ಬಂತು ಹಂಟಾ ವೈರಸ್ :ಚೀನಾದಲ್ಲಿ ಓರ್ವ ವ್ಯಕ್ತಿ ಸಾವು!

ಯುನ್ನಾನ್: ಕೊರೋನಾ ವೈರಸ್ ನಿಂದ ಜಗತ್ತು ತತ್ತರಿಸಿ ಹೋಗಿರುವಾಗ ಈಗ ಹೊಸ ವೈರಸ್ ಚೀನಾದಲ್ಲಿ ಆತಂಕ ಸೃಷ್ಟಿಸಿದೆ. ಅದೇ ಹಂಟಾ ವೈರಸ್.

ಚೀನಾದ ಯುನ್ನಾನ್ ನಲ್ಲಿ ಹಂಟಾ ವೈರಸ್ ಪ್ರಕರಣ ವರದಿಯಾಗಿದ್ದು, ಅಲ್ಲಿನ ಪತ್ರಿಕೆ ಚೀನಾದ ಗ್ಲೋಬಲ್ ಟೈಮ್ಸ್ ಪತ್ರಿಕೆಯ ಅಧಿಕೃತ ಟ್ವೀಟ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಶಾಂಡೊಂಗ್ ಪ್ರಾಂತ್ಯದ ಯುನ್ನಾನ್ ಪ್ರದೇಶದಲ್ಲಿ ಕೆಲಸಕ್ಕೆ ಬರುತ್ತಿದ್ದ ಓರ್ವ ವ್ಯಕ್ತಿ, ಹಂಟಾ ವೈರಸ್ ಗೆ ತುತ್ತಾಗಿ ಬಸ್ ನಲ್ಲೇ ಸಾವನ್ನಪ್ಪಿದ್ದಾನೆ. ಬಸ್ ನಲ್ಲೇ ಇದ್ದ 32 ಜನರನ್ನೂ ಸಹ ಪರೀಕ್ಷೆಗೆ ಒಳಪಡಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅದಾಗ್ಯೂ ಇದು ಭಯಾನಕ ವೈರಸ್ ಅಲ್ಲ ಎನ್ನುವ ಊಹಾಪೋಹಗಳೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದರೂ  ಈ ಕುರಿತು ಸದ್ಯಕ್ಕೆ ಯಾವುದೇ ಮಾಹಿತಿಯನ್ನು ಈಗಲೇ ಹೇಳುವುದು ಕಷ್ಟ ಎನ್ನುವ ಅಭಿಪ್ರಾಯವೂ ವಿಜ್ಞಾನ ವಲಯದಲ್ಲಿ ಕೇಳಿಬಂದಿದೆ.