ಉಡುಪಿ:ಕರ್ನಾಟಕ ಬ್ಯಾಂಕ್ ಆಶ್ರಯದಲ್ಲಿ ಉಡುಪಿಯ ಶ್ರೀ ಉತ್ತರಾದಿಮಠಕ್ಕೆ ಕೊಡಮಾಡಲ್ಪಟ್ಟ ಶುದ್ಧ ಕುಡಿಯುವ ನೀರಿನ ಯಂತ್ರವನ್ನು ಶುಕ್ರವಾರದಂದು ಬ್ಯಾಂಕಿನ ಸಹಾಯಕ ಜನರಲ್ ಮ್ಯಾನೇಜರ್ ವಾದಿರಾಜ ಕೆ ಭಟ್ ರವರು ಹಸ್ತಾಂತರಿಸಿದರು.
ಕಡಿಯಾಳಿ ಶ್ರೀಮಹಿಷಮರ್ದಿನೀ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಬಿ.ವಿಜಯರಾಘವ ರಾವ್, ಬ್ಯಾಂಕಿನ ರಥಬೀದಿ ಶಾಖೆಯ ಮ್ಯಾನೇಜರ್ ಪ್ರಶಾಂತ್ , ಉಡುಪಿಯ ಉತ್ತರಾದಿ ಮಠದ ವ್ಯವಸ್ಥಾಪಕರಾದ ಪ್ರಕಾಶ್ ಆಚಾರ್ಯರವರು ಉಪಸ್ಥಿತರಿದ್ದರು.












