ತೆಂಕಪೇಟೆ: ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಚಂಡಿಕಾ ಹವನ; ಮಕ್ಕಳಿಗೆ ಅಕ್ಷರಾಭ್ಯಾಸ

ಉಡುಪಿ: ತೆಂಕಪೇಟೆ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ವಿಜಯದಶಮಿ ಪ್ರಯುಕ್ತ ಶ್ರೀ ದೇವರ ಸನ್ನಿಧಿಯಲ್ಲಿ ಚಂಡಿಕಾ ಹವನವನ್ನು ವಿನಾಯಕ ಭಟ್ ಮಾರ್ಗದರ್ಶನದಲ್ಲಿ ನಡೆಸಲಾಯಿತು.

ದಯಘನ್ ಭಟ್, ಮೇಘಶ್ಯಾಮ್ ಭಟ್, ದೀಪಕ್ ಭಟ್ ಮತ್ತು ಅರ್ಚಕ ವೃಂದದವರು ಸಾಮೂಹಿಕ ಪ್ರಾರ್ಥನೆ, ಧಾರ್ಮಿಕ ಪೂಜಾ ವಿಧಾನಗಳನ್ನು ನಡೆಸಿಕೊಟ್ಟರು. ಚಂಡಿಕಾ ಹವನ ಪೂಜಾ ಕಾರ್ಯದಲ್ಲಿ ಹೆಚ್ ಉಮೇಶ್ ದಂಪತಿಗಳು ಸಹಕರಿಸಿದರು. ಪೂರ್ಣಾಹುತಿ ಮಹಾಪೂಜೆ ಬಳಿಕ ಸಮಾರಾಧನೆ ನಡೆಯಿತು. ಇದೇ ಸಂದರ್ಭದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮವನ್ನು ವಿನಾಯಕ ಭಟ್ ನಡೆಸಿಕೊಟ್ಟರು.

ದೇವಳದ ಆಡಳಿತ ಮೊಕ್ತೇಸರ ಪಿ ವಿ ಶೆಣೈ, ವಿಶ್ವನಾಥ ಭಟ್ , ವಸಂತ ಕಿಣಿ, ಅಶೋಕ ಬಾಳಿಗಾ, ಪ್ರಕಾಶ್ ಶೆಣೈ, ಪುಂಡಲೀಕ ಕಾಮತ್ , ಕೈಲಾಸನಾಥ ಶೆಣೈ, ವಿಶಾಲ್ ಶೆಣೈ, ದೇವದಾಸ್ ಪೈ ಮತ್ತು ಆಡಳಿತ ಮಂಡಳಿಯ ಸದಸ್ಯರು ಹಾಗು ಜಿ.ಸ್.ಬಿ. ಯುವಕ ಮಂಡಳಿ, ಮಹಿಳಾ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.