ಆರೋಗ್ಯ, ಕ್ರೀಡಾ ಸ್ಪೂರ್ತಿ, ನೆಮ್ಮದಿಗಾಗಿ “ಮ್ಯಾರಥಾನ್” ಮಿಸ್ ಮಾಡದೇ ಬನ್ನಿ ಬ್ರಹ್ಮಾವರಕ್ಕೆ

ದೈನಂದಿನ ಜಂಜಾಟಗಳಿಂದ ನಮ್ಮ ಜೀವನ ಶೈಲಿಯೇ ಬದಲಾಗುತ್ತಿದೆ.ಇಲ್ಲಿ ನಮ್ಮ ಆರೋಗ್ಯದ ಬಗ್ಗೆ ಯೋಚಿಸಲು ನಮಗೆ ಪುರುಸೊತ್ತು ಇಲ್ಲದಂತಾಗಿದೆ.ಸಿಂಪಲ್ಲಾಗಿ ಆರೋಗ್ಯ ಕಾಪಾಡಿಕೊಳ್ಳುವ ಸುಲಭ ದಾರಿಗಳಿದ್ದರೂ ನಾವದ್ದನ್ನು ಕೇರ್ ಲೇಸ್ ಮಾಡುತ್ತಿದ್ದೇವೆ. ಆದ್ರೆ ಯಾರಾದ್ರೂ ಕಿವಿ ಹಿಂಡಿ ಹೀಗೆ ಮಾಡಿ,  ಹಾಗೆ ಮಾಡಿ ಅಂದ್ರೆ ನಾವದ್ದನ್ನು ಚಾಚೂ ತಪ್ಪದೇ ಪಾಲಿಸುತ್ತೇವೆ. ಆದ್ರೆ ಹೇಳುವವರು ಯಾರು ಮಾರಾರ್ರೆ, ಅನ್ನೋದು ನಿಮ್ಮ ಪ್ರಶ್ನೆ ಅಲ್ವಾ?  ಹಾಗೇನಿಲ್ಲ, ಹೇಳುವವರೂ ಇದ್ದಾರೆ. ಯಾರದು ಅಂತೀರಾ? ಹಾಗಾದ್ರೆ ಇಲ್ಲಿ ಕೇಳಿ.

ಆರೋಗ್ಯ ಮಾಹಿತಿಗೆ ಇಲ್ಲಿದೆ ದಾರಿ:

ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಅನ್ನೋ ಮಾಹಿತಿಗಳೊಂದಿಗೆ ಈಗಾಗಲೇ ಹಲವಾರು ಕ್ರೀಡಾ ಸೆಮಿನಾರ್ ಹಾಗೂ ಟೂರ್ನಮೆಂಟ್ ಗಳನ್ನು ಆಯೋಜಿಸಿರುವ ಏಕ್ತಾ ಇವೆಂಟ್ ಮ್ಯಾನೇಜ್ಮೆಂಟ್ ಮತ್ತೊಂದು ದಾಪುಗಾಲು ಹಾಕಿದೆ. ನಮ್ಮ ಬ್ರಹ್ಮಾವರ ಹೃದಯ ಭಾಗದಲ್ಲಿ ಆರೋಗ್ಯದ ಬಗ್ಗೆ ಜನಜಾಗೃತಿ ಮೂಡಿಸುವ ಸಲುವಾಗಿ ಏಕ್ತಾ ಇವೆಂಟ್ ಮ್ಯಾನೇಜ್ಮೆಂಟ್ ಹಾಗೂ ಕಲ್ಯಾಣಿ ಸ್ಪೋರ್ಟ್ಸ್ ಇದರ ಜಂಟಿ ಆಶ್ರಯದಲ್ಲಿ “ಬಿ ಹೆಲ್ತಿ ಎಂಬ  ಮ್ಯಾರಥಾನ್” ಅನ್ನು ಆಯೋಜಿಸಿದೆ. ಮ್ಯಾರಥಾನ್ ನಲ್ಲಿ  ಎಲ್ಲ ವಯೋಮಾನದವರಿಗೂ ಭಾಗವಹಿಸಲು ಮುಕ್ತ ಅವಕಾಶ ಉಂಟು.

ಯಾವಾಗ? ಎಲ್ಲಿ?

ಜ.೨೦ ರಂದು ಬೆಳಗ್ಗೆ ೫.೩೦ ಕ್ಕೆ ಸಿಟಿ ಸೆಂಟರ್ ಹಾಗೂ ಮಹೇಶ್ ಆಸ್ಪತ್ರೆ ಎದುರು, ಹೊಟೇಲ್ ಆಶ್ರಯದ ಹತ್ತಿರ  ನಮ್ಮ ಆರೋಗ್ಯಕ್ಕೆ, ಬದುಕಿಗೆ ಒಂದಷ್ಟು ವಿಭಿನ್ನ ಹಾಗೂ ಆಪ್ತ ಮಾಹಿತಿ ನೀಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ಏನು ಉದ್ದೇಶ?

ಇಂತದ್ದೊಂದು ಆರೋಗ್ಯದ ಕಾಳಜಿ ಕುರಿತ ಮ್ಯಾರಥಾನ್ ಈ ಕಾಲಕ್ಕೆ ಅನಿವಾರ್ಯ ಮತ್ತು ಅತ್ಯಗತ್ಯ ಎನ್ನುವ ಅರಿವಿನಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ವಿಚಿತ್ರ ಆಹಾರ ಪದ್ಧತಿ, ಕೆಲಸದ ಒತ್ತಡ ಹಾಗೂ ವ್ಯಾಯಾಮ ಇಲ್ಲದೇ ನಾವೆಲ್ಲ  ಮನೆಗಿಂತ ಹೆಚ್ಚು ಆಸ್ಪತ್ರೆಯಲ್ಲಿ ಕಾಲ ಕಳೆಯುವಂತಾಗಿದೆ. ಇದನ್ನು ತಪ್ಪಿಸಬೇಕಾದರೆ ಜನರಿಗೆ ಮಾಹಿತಿ ಬೇಕು. ಆರೋಗ್ಯದ ಗುಟ್ಟು ಕಾಪಾಡುವ ದಾರಿ ಬೇಕು. ಈ ದಾರಿ ತೋರಿಸುವ ಸಲುವಾಗಿಯೇ ಮ್ಯಾರಥಾನ್ ಆಯೋಜಿಸಲಾಗಿದೆ.

ಉಡುಪಿ Xpress ಕಾಳಜಿ:

ಜನತೆಗೆ ಉಪಯೋಗವಾಗುವ ಈ ಕಾರ್ಯಕ್ರಮಕ್ಕೆ  ಉಡುಪಿ Xpress ಮಾಧ್ಯಮ ಸಹಯೋಗ ನೀಡಲಿದೆ.   ಕರ್ನಾಟಕ ಹಾಗೂ ದೇಶದ ವಿವಿದೆಡೆ ಇಂತಹ ಕಾರ್ಯಕ್ರಮಗಳನ್ನು  ಈಗಾಗಲೇ ಆಯೋಜಿಸಿರುವ ಈ ಸಂಸ್ಥೆಯ ಕಾರ್ಯಕ್ರಮದಿಂದ ಬ್ರಹ್ಮಾವರದ ಜನತೆ ಕೂಡ ನೆಮ್ಮದಿಯ ದಾರಿ ಕಂಡುಕೊಳ್ಳಬಹುದು.  ಕಾರ್ಯಕ್ರಮದಲ್ಲಿ ನೀವು ಭಾಗವಹಿಸಿದರೆ ಉತ್ತಮ ಸಮಾಜಕ್ಕೆ, ಆರೋಗ್ಯಕ್ಕೆ ಮುನ್ನುಡಿ ಹಾಡಿದಂತಾಗುತ್ತದೆ.

ಮಕ್ಕಳಿಗೆ ಈ ಕಾರ್ಯಕ್ರಮ ಹೆಚ್ಚು ಸೂಕ್ತ:

ನಾವೆಲ್ಲ ಬಾಲ್ಯದಲ್ಲಿ ಮರಕೋತಿ ಆಟ, ಲಗೋರಿ, ಮೊದಲಾದ ಆಟಗಳನ್ನು ಆಡಿ ಬೆಳೆದವರು. ಆದರೆ ಈ ಕಾಲದ ಮಕ್ಕಳಿಗೆ ಗ್ರಾಮೀಣ ಆಟಗಳ ಬಗ್ಗೆಯೇ ತಿಳುವಳಿಕೆ ಇಲ್ಲ. ಅಂತಹ ಆಟಗಳು ಕೊಡುವ ಖುಷಿ ಯಾವ ರೀತಿಯದ್ದು ಎನ್ನುವ ಅರಿವು ಅವರಿಗಿಲ್ಲ. ಆಟಗಳಂದ್ರೆ ಬರೀ ಮೊಬೈಲ್ ಆಟಗಳೇ ಎನ್ನುವ ಮನೋಭಾವ ಅವರಲ್ಲಿದೆ. ಈ ಮನೋಭಾವವನ್ನು ಅವರಿಂದ ತೆಗೆದು ಹಾಕಬೇಕು, ಗ್ರಾಮೀಣ ಕ್ರೀಡೆ, ವ್ಯಾಯಾಮ ಹಾಗೂ ಆರೋಗ್ಯದ ಬಗ್ಗೆ ಅವರಲ್ಲಿ ಜಾಗೃತಿ ಮೂಡಿಸಬೇಕು ಎನ್ನುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ

-ಅಮೃತ್ ಶೆಣೈ, ಉಡುಪಿ

ಗೌರವಾಧ್ಯಕ್ಷರು, ಮ್ಯಾರಥಾನ್-2019

—————————————————————————————

ಆರೋಗ್ಯದ ಕುರಿತ ಕಳಕಳಿ ಮೂಡಿಸಬೇಕು

ಯುವ ಜನತೆಯಲ್ಲಿ ಕ್ರೀಡಾಮನೋಭಾವ ಹಾಗೂ ಗ್ರಾಮೀಣ ಭಾಗದ ಜನರಲ್ಲಿ ಆರೋಗ್ಯದ ಕುರಿತ ಕಳಕಳಿ ಮೂಡಿಸಬೇಕು ಎನ್ನುವ ಉದ್ದೇಶ ಈ ಮ್ಯಾರಥಾನ್ ನದ್ದು. ಬರೀ ಬ್ರಹ್ಮಾವರದ ಜನತೆ ಮಾತ್ರವಲ್ಲ, ಯಾವ ಊರಿನ ಜನರು ಬೇಕಾದರೂ ಇಲ್ಲಿ ಭಾಗವಹಿಸಬಹುದು. ಈಗಾಗಲೇ ಹೊರರಾಜ್ಯದವರು ಕೂಡ ಹೆಸರು ನೋಂದಾಯಿಸಿದ್ದಾರೆ. ಕ್ರೀಡೆ,ಆರೋಗ್ಯದ ಕಳಕಳಿಯೇ ನಮ್ಮ ಕಾರ್ಯಕ್ರಮದ ಮುಖ್ಯ ಧ್ಯೇಯ

-ಖಲೀಲ್ ಕೆರಾಡಿ, ಸಂಯೋಜಕರು

 ————————————————————————————–

 ಕಾಳಜಿ ಜಾಸ್ತಿಯಾಗಬೇಕು

ಆರೋಗ್ಯ ಹಾಗೂ ಕ್ರೀಡೆಯ ಕುರಿತ ಕಾಳಜಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ದೊಡ್ಡ ಮಟ್ಟದಲ್ಲೇ ಹಮ್ಮಿಕೊಂಡಿದ್ದೇವೆ. ಜನರಿಗೆ ಆರೋಗ್ಯ ಹಾಗೂ ಕ್ರೀಡೆಗಳ ಕುರಿತು ಕಳಕಳಿ ಕಡಿಮೆಯಾಗುತ್ತಿದೆ. ಅದು ಜಾಸ್ತಿಯಾದರೆ ಮಾತ್ರ ಜನರು ಖುಷಿಯಿಂದಿರಬಹುದು.

-ಪ್ರಶಾಂತ್ ಕುಂದರ್, ಬ್ರಹ್ಮಾವರ

ಸಂಯೋಜಕರು

—————————————————————————-