ಹಜ್‌ ಯಾತ್ರೆ: ಮಂಗಳೂರಿನಿಂದ ನೇರ ವಿಮಾನ ಯಾನ ರದ್ದು..!!

ಮಂಗಳೂರು: ಪ್ರಸಕ್ತ ಸಾಲಿನ ಪವಿತ್ರ ಹಜ್‌ ಯಾತ್ರೆಗಾಗಿ ಮಂಗಳೂರು ವಿಮಾನ ನಿಲ್ದಾಣದಿಂದ ನೇರ ಪ್ರಯಾಣ ಅವಕಾಶವನ್ನು ರದ್ದುಪಡಿಸಲಾಗಿದೆ.

ಕೋವಿಡ್‌ ಸಾಂಕ್ರಾಮಿಕದ ಬಳಿಕ ಮತ್ತೆ ಮಂಗಳೂರು ವಿಮಾನ ನಿಲ್ದಾಣದಿಂದ ಹಜ್‌ ಯಾತ್ರೆಗೆ ತೆರಳಲು ಯಾತ್ರಿಗಳಿಗೆ ಅವಕಾಶ ಕಲ್ಪಿಸ ಲಾಗಿತ್ತು. ಹಜ್‌ ಯಾತ್ರೆಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿಯೂ ಯಾತ್ರಿ ಗಳಿಗೆ ತಮ್ಮ ಅನುಕೂಲಕ್ಕೆ ತಕ್ಕಂತೆ ವಿಮಾನ ಹತ್ತುವ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾ ಗಿತ್ತು. ಆದರೆ, ಭಾರತೀಯ ಹಜ್‌ ಸಮಿತಿಯು ದೇಶದ ಹಲವಾರು ರಾಜ್ಯ ಗಳಲ್ಲಿನ ವಿಮಾನ ಹತ್ತುವ ಕೇಂದ  Åಗಳನ್ನು (ಎಂಬಾರ್ಕೇಶನ್‌ ಸೆಂಟರ್‌) ರದ್ದು ಪಡಿಸಿದ್ದು, ಇದರಲ್ಲಿ ಮಂಗಳೂರು ವಿಮಾನ ನಿಲ್ದಾಣ ಸಹ ಸೇರಿದೆ.

ರಾಜ್ಯದ ಹಜ್‌ ಯಾತ್ರಿಗಳು ಬೆಂಗಳೂರು, ಮಂಗಳೂರು, ಗೋವಾ ಹಾಗೂ ಹೈದರಾಬಾದ್‌ ಮೂಲಕ ಹಜ್‌ ಯಾತ್ರೆಗೆ ತೆರಳುತ್ತಿದ್ದರು. ಇದೀಗ ಮಂಗಳೂರು ಎಂಬಾ ರ್ಕೆàಶನ್‌ ಪಾಯಿಂಟ್‌ ರದ್ದು ಮಾಡು ವು  ದರಿಂದ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು ಹಾಗೂ ಹಾಸನ ಜಿಲ್ಲೆಯ ಯಾತ್ರಿಗಳು ತೊಂದರೆಗೆ ಸಿಲುಕಿದ್ದು, ಭಾರತೀಯ ಹಜ್‌ ಸಮಿತಿಯು ಈ ಐದು ಜಿಲ್ಲೆಗಳ ಯಾತ್ರಿ ಗಳಿಗೆ ಕೇರಳದ ಕಣ್ಣೂರು, ಕೊಚ್ಚಿ, ಬೆಂಗಳೂರು ಹಾಗೂ ಚೆನ್ನೈ ಈ ಎಂಬಾರ್ಕೆàಶನ್‌ ಪಾಯಿಂಟ್‌ ಆಯ್ಕೆ ಮಾಡಿಕೊಳ್ಳಲು ತಿಳಿಸುತ್ತಿದೆ.

ಕಳೆದ ವರ್ಷ ಕೋವಿಡ್‌ ಕಾರಣದಿಂದ ಮಂಗಳೂರಿನಿಂದ ನೇರವಾಗಿ ಹಜ್‌ ಯಾತ್ರೆಗೆ ಅವಕಾಶ ಕಲ್ಪಿಸಿರಲಿಲ್ಲ. ಈ ಸಲ ಮಂಗಳೂ ರಿನಿಂದ ನೇರವಾಗಿ ಯಾತ್ರೆ ಕೈಗೊಳ್ಳಲು ಅವಕಾಶ ನೀಡುವಂತೆ ಅ. ಭಾ. ಹಜ್‌ ಸಮಿತಿಯನ್ನು ಕೋರಲಾಗಿತ್ತು. ಆದರೆ ಯಾತ್ರಿಕರು ಹೊರಡುವ ಸ್ಥಳಗಳ ಪಟ್ಟಿಯಿಂದ ಮಂಗಳೂರನ್ನು ಸಮಿತಿ ಕೈಬಿಟ್ಟಿದೆ ಎನ್ನಲಾಗಿದೆ.

ದ.ಕ. ಜಿಲ್ಲೆಯ ಜತೆಗೆ ಚಿಕ್ಕಮಗಳೂರು, ಉಡುಪಿ, ಹಾಸನ, ಕೊಡಗು ಜಿಲ್ಲೆಯವರೂ ಮಂಗಳೂರು ವಿಮಾನ ನಿಲ್ದಾಣದ ಮೂಲಕವೇ ಯಾತ್ರೆ ಕೈಗೊಳ್ಳುತ್ತಿದ್ದಾರೆ. ಈ ಸಲ ಬೆಂಗಳೂರಿಗೆ ಅಥವಾ ಕಣ್ಣೂರಿನ ಮೂಲಕ ಯಾತ್ರೆ ಕೈಗೊಳ್ಳುವುದರಿಂದ ಜಿಲ್ಲೆಯ ಯಾತ್ರಿಕರಿಗೆ ತೊಂದರೆಯಾ ಗಲಿದೆ ಎಂದು ದ.ಕ. ಜಿಲ್ಲಾ ಹಜ್‌ ನಿರ್ವಹಣ ಸಮಿತಿಯ ಕಾರ್ಯದರ್ಶಿ ಹನೀಫ್ ತಿಳಿಸಿದ್ದಾರೆ.

ಯಾತ್ರಿಗಳಿಂದ ಅಸಮಾಧಾನ
ಮಂಗಳೂರು ವಿಮಾನ ನಿಲ್ದಾಣದಿಂದ ಯಾತ್ರೆಗೆ ಅವಕಾಶ ನೀಡುವುದರಿಂದ ಕರಾವಳಿ ಭಾಗದ ಯಾತ್ರಿಗಳಿಗೆ ಅನುಕೂಲ ಆಗುತ್ತದೆ. ಬೆಂಗಳೂರು ಅಥವಾ ಕಣ್ಣೂರು, ಕೊಚ್ಚಿ ವಿಮಾನ ನಿಲ್ದಾಣಗಳ ಮೂಲಕ ತೆರಳುವುದು ನಮಗೆ ಕಷ್ಟ ವಾ ಗುತ್ತದೆ. ಯಾತ್ರೆಗೆ ತೆರಳುವಾಗ ಮುಂಚಿತವಾಗಿ ನಾವು ಅಲ್ಲಿ ಹೋಗಿ ಉಳಿದು ಕೊಳ್ಳಲು ಹಾಗೂ ನಮಗೆ ಬೀಳ್ಕೊಡಲು ಬರುವ ಸಂಬಂಧಿಕರ ವಾಸ್ತವ್ಯಕ್ಕೂ ವ್ಯವಸ್ಥೆ ಮಾಡಬೇಕಾಗುತ್ತದೆ. ಇದೆಲ್ಲ ಆರ್ಥಿಕವಾಗಿ ಮತ್ತಷ್ಟು ಹೊರೆಯಾಗುತ್ತದೆ. ಭಾರತೀಯ ಹಜ್‌ ಸಮಿತಿಯವರು ಈ ಭಾಗದ ಯಾತ್ರಿಗಳ ಸಮಸ್ಯೆ ಬಗ್ಗೆ ಗಮನ ಹರಿಸಿ, ಬಗೆಹರಿಸಬೇಕು ಎಂದು ಯಾತ್ರಿಗಳು ಆಗ್ರಹಿಸಿದ್ದಾರೆ.