ಗುರು ಸಂಕ್ರಮಣ: ಕರ್ಕಾಟಕ ಹಾಗೂ ಸಿಂಹ ರಾಶಿಯವರಿಗೆ ಫಲಗಳು

ಕರ್ಕಾಟಕ ರಾಶಿ

ಗುರು ಈ ರಾಶಿಯ ಒಂಬತ್ತನೇ ಮತ್ತು ಆರನೇ ಮನೆಯ ಅಧಿಪತಿ. ಕರ್ಕಾಟಕ ರಾಶಿಯಿಂದ ಹತ್ತನೇ ಮನೆಯಲ್ಲಿ ಗುರು ಸಂಕ್ರಮಣವು ಕಾರ್ಯಕ್ಷೇತ್ರದಲ್ಲಿ ದೊಡ್ಡ ಬದಲಾವಣೆಗಳನ್ನು ತರುತ್ತದೆ. ಈ ಸಮಯದಲ್ಲಿ ದೀರ್ಘಕಾಲದಿಂದ ಬಯಸುತ್ತಿರುವ ಬದಲಾವಣೆಯು ಬರಬಹುದು. ಆದರೆ ವ್ಯಕ್ತಿಯು ತಾಳ್ಮೆಯಿಂದಿರಬೇಕು. ತಕ್ಷಣವೇ ಬದಲಾವಣೆಗಳನ್ನು ಮಾಡಬಾರದು ಮತ್ತು ಆಗಸ್ಟ್ 2023 ರ ನಂತರ, ವ್ಯಕ್ತಿಯು ಕಾರ್ಯಕ್ಷೇತ್ರದಲ್ಲಿ ಬದಲಾವಣೆಗಳನ್ನು ಮಾಡಬಹುದು.

ವ್ಯಾಪಾರ ಮಾಡುತ್ತಿದ್ದರೆ ಅದರಲ್ಲಿ ಅವರು ದೊಡ್ಡ ಬದಲಾವಣೆಯನ್ನು ಎದುರಿಸುತ್ತಾರೆ ಮತ್ತು ವ್ಯವಹಾರದಲ್ಲಿನ ಬದಲಾವಣೆಯು ಅವರಿಗೆ ದೊಡ್ಡ ಯಶಸ್ಸನ್ನು ನೀಡುತ್ತದೆ. ವ್ಯಕ್ತಿ ಉದ್ಯೋಗಸ್ಥನಾಗಿದ್ದರೆ ಈ ಸಮಯದಲ್ಲಿ ಅಂತಹವರಿಗೆ ಉತ್ತಮ ಅವಕಾಶ ಸಿಗುತ್ತದೆ. ಈ ಅವಕಾಶದ ಮೂಲಕ, ಕೆಲಸವನ್ನು ಬದಲಾಯಿಸಬಹುದು ಮತ್ತು ವೃತ್ತಿಜೀವನದಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸಬಹುದು. ಕೌಟುಂಬಿಕ ಜೀವನದಲ್ಲಿ ಶಾಂತಿ ನೆಲೆಸಲಿದೆ. ಆದಾಗ್ಯೂ, ಏಪ್ರಿಲ್ ನಿಂದ ಆಗಸ್ಟ್ ವರೆಗೆ ಚಲನೆಯ ಪ್ರಾರಂಭದಲ್ಲಿ, ತಂದೆಯವರು ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬಹುದು, ನಂತರ ಕ್ರಮೇಣ ಎಲ್ಲವೂ ಸರಿಯಾಗುತ್ತದೆ.

ವ್ಯಕ್ತಿಯ ಹಣಕಾಸಿನ ಪರಿಸ್ಥಿತಿಗಳು ಬಲಗೊಳ್ಳುತ್ತವೆ. ಹಣಕಾಸಿನ ಲಾಭವನ್ನು ಪಡೆಯುವ ಮೂಲಗಳು ತಿಳಿದಿರುವುದಿಲ್ಲ. ಈ ಸಮಯವು ಸಮೃದ್ಧಿಯಿಂದ ಕೂಡಿರುತ್ತದೆ. ಕುಟುಂಬದಲ್ಲಿ ಶಾಂತಿ ಮತ್ತು ಸಮೃದ್ಧಿಯು ಮೇಲುಗೈ ಸಾಧಿಸುತ್ತದೆ ಮತ್ತು ವಿರೋಧಿಗಳಿಗೆ ಸವಾಲು ಹಾಕುತ್ತಾರೆ. ನ್ಯಾಯಾಲಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಯಶಸ್ಸನ್ನು ಕಂಡು ಆಯಾ ಕ್ಷೇತ್ರದಲ್ಲಿ ನಾಯಕರಾಗುತ್ತಾರೆ.

ಪರಿಹಾರ: ಗುರುವಾರದಂದು ಆಲದ ಮರಕ್ಕೆ ನೀರನ್ನು ಅರ್ಪಿಸಿ ಮತ್ತು ಯಾವುದೇ ನೀರನ್ನು ಹಾಕದೆ ಅಶ್ವಥ ಮರವನ್ನು ಸ್ಪರ್ಶಿಸಿ.

ಸಿಂಹ ರಾಶಿ

ಐದನೇ ಮನೆ ಮತ್ತು ಎಂಟನೇ ಮನೆಯ ಅಧಿಪತಿ ಗುರು. ಏಪ್ರಿಲ್ 22 ರಂದು ಸಿಂಹ ರಾಶಿಯಿಂದ ಗುರು ಒಂಬತ್ತನೇ ಮನೆಗೆ ಸಾಗುತ್ತಾನೆ. ಇವರ ಜಾತಕಕ್ಕೆ, ಗುರುವು ಒಂಬತ್ತನೇ ಮನೆಗೆ ಪಂಚಮೇಶ (ಐದನೇ ಮನೆಯ ಅಧಿಪತಿ) ಮತ್ತು ಅಷ್ಟಮೇಶ (ಎಂಟನೇ ಮನೆಯ ಅಧಿಪತಿ) ರೂಪದಲ್ಲಿ ಸಾಗುತ್ತಾನೆ ಮತ್ತು ಅದರೊಂದಿಗೆ, ಇದು ಇವರಿಗೆ ಧಾರ್ಮಿಕ ಮತ್ತು ಧಾರ್ಮಿಕೇತರ ಕೆಲಸಗಳಲ್ಲಿ ಯಶಸ್ಸನ್ನು ನೀಡುತ್ತದೆ. ಇತರ ಕ್ಷೇತ್ರಗಳಲ್ಲಿ ಸ್ವಲ್ಪ ಸಮಸ್ಯೆಗಳನ್ನುಎದುರಿಸಬೇಕಾಗಬಹುದು. ಆದಾಗ್ಯೂ, ಸಹಜ ಹೋರಾಟದ ಮನೋಭಾವದಿಂದ ಎಲ್ಲವನ್ನೂ ಸಾಧಿಸುತ್ತಾರೆ. ಅದೃಷ್ಟವು ತಕ್ಷಣವೇ ಬದಲಾಗುತ್ತದೆ ಮತ್ತು ಉತ್ತಮ ಪ್ರಗತಿಯನ್ನು ಪಡೆಯುತ್ತಾರೆ. ಆರ್ಥಿಕವಾಗಿಯೂ ಲಾಭ ಪಡೆಯಬಹುದು.

ಈ ಸಮಯದಲ್ಲಿ, ದೂರದ ಪ್ರಯಾಣ ಮತ್ತು ತೀರ್ಥಯಾತ್ರೆ ಯೋಗಗಳು ಬರಬಹುದು. ಏಪ್ರಿಲ್ ಮತ್ತು ಆಗಸ್ಟ್ ತಿಂಗಳ ನಡುವೆ ದೂರದ ಪ್ರಯಾಣ ಮಾಡದಿರುವುದು ಉತ್ತಮ. ಆ ಸಮಯದ ನಂತರದ ಪ್ರಯಾಣವು ಸಮೃದ್ಧವಾಗಿರುತ್ತದೆ. ಕೆಲವು ಪ್ರಮುಖ ವ್ಯಕ್ತಿಗಳನ್ನು ಭೇಟಿಯಾಗುತ್ತಾರೆ ಮತ್ತು ಅವರೊಂದಿಗೆ ಪರಿಚಯ ಮಾಡಿಕೊಳ್ಳುವ ಅವಕಾಶವನ್ನು ಪಡೆಯುತ್ತಾರೆ. ಹಣಕಾಸಿನ ಸ್ಥಿತಿಯು ಬಲಗೊಳ್ಳುತ್ತದೆ ಮತ್ತು ಹೊಸದಾಗಿ ಸ್ಥಾಪಿಸಲಾದ ಒಪ್ಪಂದಗಳು ಬೆಂಬಲಿಸುತ್ತವೆ. ಈ ಗುರು ಸಂಚಾರದಿಂದ, ವ್ಯಕ್ತಿಯ ವ್ಯಕ್ತಿತ್ವವು ಹೊರಹೊಮ್ಮುತ್ತದೆ ಮತ್ತು ಎಲ್ಲಾ ದಿಕ್ಕುಗಳಲ್ಲಿ ಬಲಗೊಳ್ಳುತ್ತಾರೆ.

ಕೆಲಸ ಕಾರ್ಯಗಳಲ್ಲಿ ಒಡಹುಟ್ಟಿದವರ ಬೆಂಬಲವನ್ನು ಪಡೆಯುತ್ತಾರೆ. ಇದರಿಂದಾಗಿ ಪ್ರೀತಿ ಗೆಚ್ಚಾಗುತ್ತದೆ ಮತ್ತು ಮಕ್ಕಳಿಗೆ ಸಂಬಂಧಿಸಿದ ಒಳ್ಳೆಯ ಸುದ್ದಿಗಳನ್ನು ಕೇಳಬಹುದು. ಉನ್ನತ ಅಧ್ಯಯನದಲ್ಲಿ ತೊಡಗಿಸಿಕೊಳ್ಳಲು ಬಯಸಿದರೆ, ಈ ಗುರು ಸಂಚಾರ ಅತ್ಯುತ್ತಮ ಅವಕಾಶವನ್ನು ನೀಡುತ್ತದೆ. ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ, ದೊಡ್ಡ ಪ್ರಶಸ್ತಿ ಅಥವಾ ಉನ್ನತ ಸ್ಥಾನವನ್ನು ಸಹ ಪಡೆಯಬಹುದು.

ಪರಿಹಾರ: ಗುರುವಾರದಂದು ಗುರುವಿನ ಬೀಜ ಮಂತ್ರವನ್ನು ಪಠಿಸಬೇಕು ಮತ್ತು ಬುಧವಾರ ಸಂಜೆ ದೇವಸ್ಥಾನಕ್ಕೆ ಕಪ್ಪು ಎಳ್ಳನ್ನು ದಾನ ಮಾಡಬೇಕು.

ಬೃಹಸ್ಪತಿ ಬೀಜ ಮಂತ್ರ ಹೀಗಿದೆ:
ಓಂ ಗ್ರಾಂ ಗ್ರೀಂ ಗ್ರೌಂ ಸಃ ಗುರವೇ: ನಮಃ ||

ಓಂ ಬ್ರಂ ಬೃಹಸ್ಪತಿ ನಮಃ ||

ಮಾಹಿತಿ ಕೃಪೆ: ಆಸ್ಟ್ರೋ ಸೇಜ್
ವಿ.ಸೂ: ಈ ಲೇಖನ ಕೇವಲ ಮಾಹಿತಿಗಾಗಿ ಮಾತ್ರ. ಹೆಚ್ಚಿನ ವಿವರಗಳಿಗೆ ವಿಶ್ವಾಸಾರ್ಹ ಜ್ಯೋತಿಷ್ಯಶಾಸ್ತ್ರಜ್ಞರ ಸಲಹೆ ಪಡೆಯುವುದು ಒಳಿತು