ಉಡುಪಿ: ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಜುಲೈ 3 ಸೋಮವಾರ ಗುರು ಪೂರ್ಣಿಮೆಯ ಪರ್ವಕಾಲದಲ್ಲಿ ಕಪಿಲ ಮಹರ್ಷಿಗಳ ಸನ್ನಿಧಾನದಲ್ಲಿ ಮನ್ನಿನಾಮಕ ಲಕ್ಷ್ಮಿ ನರಸಿಂಹ ಮಹಾ ಯಾಗವು ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇದಮೂರ್ತಿ ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ನೆರವೇರಲಿರುವುದು.
ಗತಕಾಲದಲ್ಲಿ ಕ್ಷೇತ್ರ ರಚನೆಗೆ ಕಾರಣೀ ಭೂತರಾದ ಮುನಿ ಶ್ರೇಷ್ಠರೇನಿಸಿದ ಕಪಿಲ ಮಹರ್ಷಿಗಳ ಸನ್ನಿಧಾನದಲ್ಲಿ ವಿಶೇಷವಾದ ನೃತ್ಯಸೇವೆ ಹಾಗೂ ಸಂಗೀತ ಸೇವೆಗಳು ಪ್ರಜ್ಞಾ ಶಾಲೆಯ ವಿದ್ಯಾರ್ಥಿಗಳಿಂದ ಹಾಗೂ ವಿವಿಧ ಭಕ್ತಾದಿಗಳಿಂದ ಸೇವಾ ರೂಪದಲ್ಲಿ ಸಮರ್ಪಿಸಲ್ಪಡಲಿದೆ. ಸಂಜೆ ಸತ್ಯನಾರಾಯಣ ವೃತ ಕಥಾ ಪೂಜೆ ದುರ್ಗಾ ನಮಸ್ಕಾರ ಪೂಜೆ, ನೃತ್ಯ ಭಜನೆಗಳು ಸಂಪನ್ನಗೊಳ್ಳಲಿದೆ ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ತಿಳಿಸಿರುತ್ತಾರೆ.
ನಮ್ಮ ಜೀವನದಲ್ಲಿ ನಮಗೆ ಉತ್ತಮ ಮಾರ್ಗದರ್ಶನವನ್ನು ನೀಡಿ ಸನ್ಮಾರ್ಗದತ್ತ ಮುನ್ನಡೆಯುವಂತೆ ಮಾಡಿದ ಗುರುಗಳನ್ನು ಸ್ಮರಿಸುವ ,ಗೌರವಿಸುವ, ಪುರಸ್ಕರಿಸಿ ಕೃತಜ್ಞತೆಯನ್ನು ಸಮರ್ಪಿಸಿ ಆಶೀರ್ವಾದವನ್ನು ಪಡೆಯುವ ಮೂಲಕ ಗುರು ಹುಣ್ಣಿಮೆಯನ್ನು ಆಚರಿಸುತ್ತಾರೆ.
ಈ ಪರ್ವ ಕಾಲದಲಿ ಕ್ಷೇತ್ರದ ಗುರುಗಳಾಗಿ ಅಸಂಖ್ಯಾತ ಭಕ್ತ ಸಮೂಹಕ್ಕೆ ತಮ್ಮ ಸೂಕ್ತ ಮಾರ್ಗದರ್ಶನದಿಂದ ಕ್ಷೇಮ ದೊರಕುವಂತೆ ಅನುಗ್ರಹಿಸಿದ ಶ್ರೀ ರಮಾನಂದ ಗುರೂಜಿಯವರನ್ನು ಭಕ್ತ ಸಮೂಹ ಗೌರವಿಸಿ ಸನ್ಮಾನಿಸಲಿದ್ದಾರೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.