ಉಡುಪಿ, ಬಂಟಕಲ್: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ
ವಿದ್ಯಾಲಯದ ವಿದ್ಯಾರ್ಥಿಗಳಾದ ಅನ್ನಪೂರ್ಣ ಶೆಣೈ, ಪೂರ್ಣಿತಾ, ದಿವ್ಯಾಂತ್, ಶರಣ್ಯ, ಚಂದನ್ ಮತ್ತು ಕಾರ್ತಿಕ್ ಇವರು ದಿನಾಂಕ 26 ಜುಲೈ 2025 ರಂದು ಹಿರಿಯಡ್ಕ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಐಒಟಿ ಅಪ್ಲಿಕೇಶನ್ ಬಗ್ಗೆ
ಮಾರ್ಗದರ್ಶನ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಈ ಕಾರ್ಯಕ್ರಮ ಮುಖ್ಯ ಉದ್ದೇಶ ವಿದ್ಯಾರ್ಥಿಗಳಲ್ಲಿ ನಾವೀನ್ಯತೆ ಮತ್ತು ಡಿಜಿಟಲ್ ಸಾಕ್ಷರತೆಯ ಬಗ್ಗೆ ಮಾಹಿತಿ ನೀಡುವುದಾಗಿದೆ. ಹಿರಿಯಡ್ಕ ಕರ್ನಾಟಕ ಪಬ್ಲಿಕ್ ಶಾಲೆಯ ೮ನೇ ತರಗತಿಯ ಸುಮಾರು 30 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇವರಿಗೆ ಎಲೆಕ್ಟ್ರಾನಿಕ್ಸ್ ಮತ್ತು ಸಂವೇದಕ ಆಧಾರಿತ ವ್ಯವಸ್ಥೆಗಳ ಮೂಲಭೂತ ಅಂಶಗಳ ಬಗ್ಗೆ ಮಾಹಿತಿಯನ್ನು ನೀಡಿದರು.

ವಿದ್ಯಾರ್ಥಿಗಳಿಗೆ ಆರ್ಡಿನೋ ಪ್ರೋಗ್ರಾಮಿಂಗ್, ಎಲ್‌ಇಡಿ ನಿಯಂತ್ರಣ ಮತ್ತು ಸಂವೇದಕಗಳನ್ನು ಬಳಸಿಕೊಂಡು
ಸರಳ ಯಾಂತ್ರಿಕರಣವನ್ನು ಪರಿಚಯಿಸಲಾಯಿತು. ಈ ಮಾರ್ಗ ದರ್ಶನ ಕಾರ್ಯಕ್ರಮವು ತಂತ್ರಜ್ಞಾನ ಮತ್ತು ಶಾಲಾ ಮಟ್ಟದ ಶಿಕ್ಷಣದ ನಡುವಿನ ಅಂತರವನ್ನು ಕಡಿಮೆ ಮಾಡಲು ಸಹಾಯಕವಾಗಿದೆ. ಈ ಕಾರ್ಯಕ್ರಮವನ್ನು ಸಂಸ್ಥೆಯ ಗಣಕ ಯಂತ್ರ ವಿಭಾಗದ ದೀಪಕ್ ರಾವ್ ಇವರು ಸಂಯೋಜಿಸಿದರು.












