ನಗು ನಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ. ಆದರೆ ನಗುವನ್ನು ಆಕರ್ಷಕವಾಗಿಸುವಲ್ಲಿ ನಮ್ಮ ಹಲ್ಲುಗಳು ಮುಖ್ಯ ಪಾತ್ರ ವಹಿಸುತ್ತದೆ. ಸುಂದರ ಬಿಳಿ ಹಲ್ಲುಗಳು ನಗುವಿನ ಜೊತೆ ಮುಖದ ಚೆಲುವನ್ನು ಕೂಡ ಹೆಚ್ಚಿಸುತ್ತದೆ. ಆದರೆ ಕೆಲವರ ಹಲ್ಲು ಹಳದಿ ಅಥವಾ ಡಲ್ ಆಗಿರುತ್ತದೆ. ಅದಕ್ಕಾಗಿ ಪದೇಪದೇ ಡೆಂಟಿಸ್ಟ್ ಬಳಿ ಓಡಲು ಸಾಧ್ಯವಿಲ್ಲ. ಸರಳ ವಿಧಾನದಿಂದ ಇದೆಲ್ಲವೂ ಸಾಧ್ಯ
ಪ್ರತಿ ಎರಡು ತಿಂಗಳಿಗೊಂದು ಹೊಸ ಬ್ರಷ್ ಬಳಸಿ
ಉತ್ತಮ ಫಲಿತಾಂಶಗಳನ್ನು ಪಡೆಯಲು ನಿಯಮಿತವಾಗಿ ನಿಮ್ಮ ಬ್ರಷ್ ಬದಲಾಯಿಸುವುದು ಬಹಳ ಮುಖ್ಯ . ಅವಧಿಯ ನಂತರ ನಿಮ್ಮ ಬ್ರಷ್ ಕಠಿಣವಾಗಿ ನಿಮ್ಮ ಹಲ್ಲುಗಳಲ್ಲಿ ಕಲೆಗಳು ಕಾಣಬಹುದು ಅಲ್ಲದೆ ಒರಟು ಬ್ರಷ್ ನಿಮ್ಮ ಹಲ್ಲುಗಳ ದಂತಕವಚವನ್ನೂ ಹಾಳುಮಾಡಬಹುದು.
ಅರಿಶಿನ ಉಪ್ಪು ಮತ್ತು ನಿಂಬೆ ರಸ :
ಹಲ್ಲುಗಳ ಮೇಲಿನ ಕಲೆಗಳನ್ನು ನಿವಾರಿಸಲು ನಿಂಬೆ ಉಪಯುಕ್ತವಾಗಿದೆ. ಹಾಗೆಯೇ ಉಪ್ಪಿನಿಂದ ಹಲ್ಲುಗಳ ಬಣ್ಣ ಮಾಸುವಿಕೆಯನ್ನು ತಡೆಗಟ್ಟಬಹುದು. ಮೊದಲಿಗೆ ಒಂದಿಷ್ಟು ಅರಿಶಿನ ಬೇರುಗಳನ್ನು ತೆಗೆದುಕೊಂಡು ಅವನ್ನು ಹುರಿದುಕೊಳ್ಳಿ. ನಂತರ ಗ್ರೈಂಡರ್‌ಗೆ ಹಾಕಿ ನುಣುಪಾದ ಪೌಡರ್ ತಯಾರಿಸಿ. ಒಂದು ಬಟ್ಟಲಿಗೆ ಒಂದು ಟೇಬಲ್ ಸ್ಪೂನ್ ಅರಿಶಿನ ಹಾಗೂ ಚಿಟಿಕೆ ಉಪ್ಪು ಹಾಕಿ. ಇದಕ್ಕೆ ಕೆಲ ನಿಂಬೆ ಹನಿಗಳನ್ನು ಬೆರೆಸಿ, ಮಿಕ್ಸ ಮಾಡಿ ನುಣುಪಾದ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್ ಅನ್ನು ಹಲ್ಲುಗಳಿಗೆ ಸವರಿ. ಸುಮಾರು 3 ನಿಮಿಷ ಬಿಟ್ಟು ಸಾದಾ ನೀರಿನಿಂದ ಬಾಯಿ ತೊಳೆದುಕೊಳ್ಳಿ. ವಾರಕ್ಕೆ ಮೂರು ಬಾರಿ ಈ ವಿಧಾನ ಅನುಸರಿಸುವುದರಿಂದ ಒಳ್ಳೆಯ ಪರಿಣಾಮಗಳನ್ನು ಕಾಣಬಹುದು.
ಹಸಿ ಕ್ಯಾರೆಟ್
ಪ್ರತೀ ದಿನ ಹಸಿ ಕ್ಯಾರೆಟ್ ತಿನ್ನಿ. ಇದು ಹಲ್ಲುಗಳನ್ನು ಬಿಳಿಯಾಗಿಸುವುದು. ಕ್ಯಾರೆಟ್ ತಿನ್ನುವಾಗ ಪದರಗಳು ದೂರವಾಗುವುದು
ಅಡುಗೆ ಸೋಡಾ
ಸ್ವಲ್ಪ ಅಡುಗೆ ಸೋಡಾ ತೆಗೆದುಕೊಂಡು ಅದರಿಂದ ಹಲ್ಲುಗಳನ್ನು ನಿಧಾನವಾಗಿ ಉಜ್ಜಿಕೊಳ್ಳಿ. ಇದನ್ನು ಹಲ್ಲುಗಳನ್ನು ಬಿಳಿಯಾಗಿಸುವುದು ಮಾತ್ರವಲ್ಲದೆ ಕಲೆಗಳನ್ನು ನಿವಾರಿಸುವುದು. ಬಾಯಿಯಲ್ಲಿ ಬ್ಯಾಕ್ಟೀರಿಯಾ ಬೆಳವಣಿಗೆಯನ್ನು ಇದು ನಿಯಂತ್ರಣದಲ್ಲಿ ಇಡುವುದು. ಒಂದೇ ದಿನದಲ್ಲಿ ಹಲ್ಲುಗಳು ಬಿಳಿಯಾಗುತ್ತದೆ ಎಂದು ನಿರೀಕ್ಷಿಸಬೇಡಿ. ಫಲಿತಾಂಶ ಬರಲು ಸ್ವಲ್ಪ ಸಮಯ ಬೇಕಾಗುವುದು.
ಆಪಲ್ ಸೈಡರ್ ವಿನೆಗರ್
ನಿಮ್ಮ ಹಲ್ಲುಗಳಿಗೆ ಆಪಲ್ ಸೈಡರ್ ವಿನೆಗರ್ ನಿಂದ ಮಸಾಜ್ ನೀಡಿ. ನಂತರ ಚೆನ್ನಾಗಿ ತೊಳೆಯಿರಿ. ಕೆಲವು ದಿನಗಳವರೆಗೆ ಪುನರಾವರ್ತಿಸಿ.
ಹಣ್ಣಿನ ಸಿಪ್ಪೆ
ಬಾಳೆಹಣ್ಣಿನ ಸಿಪ್ಪೆ ಅಥವಾ ಕಿತ್ತಳೆ ಸಿಪ್ಪೆಯ ಒಳಭಾಗದಿಂದ ನಿಮ್ಮ ಹಲ್ಲುಗಳನ್ನು ಉಜ್ಜಿ. ಸಿಪ್ಪೆಯಲ್ಲಿ ಮ್ಯಾಂಗನೀಸ್ ಮತ್ತು ಪೊಟ್ಯಾಸಿಯಮ್ ಸಮೃದ್ಧವಾಗಿದ್ದು, ಇದು ಹಲ್ಲಿನ ಎನಮೇಲ್ ಅನ್ನು ರೀಚಾರ್ಜ್ ಮಾಡುತ್ತದೆ. ಕೆಲವು ನಿಮಿಷಗಳ ನಂತರ ನಿಮ್ಮ ಹಲ್ಲುಗಳನ್ನು ಬ್ರಷ್ ಮಾಡಿ. ಸಿಪ್ಪೆಯನ್ನು ವಾರಕ್ಕೆ ಎರಡು ಬಾರಿಯಾದರೂ ಬಳಸಿ.
ಕಹಿ ಬೇವು
ಕಹಿ ಬೇವು ಒ೦ದಿಷ್ಟು ಕಹಿ ಬೇವಿನ ಎಲೆಗಳನ್ನು ಜಜ್ಜಿರಿ, ಇದಕ್ಕೆ ಒ೦ದು ಅಥವಾ ಎರಡು ಹನಿಗಳಷ್ಟು ಲಿ೦ಬೆರಸವನ್ನು ಬೆರೆಸಿ ಬಳಿಕ ಈ ಮಿಶ್ರಣದಿ೦ದ ನಿಮ್ಮ ಹಳದಿ ದ೦ತಪ೦ಕ್ತಿಗಳನ್ನು ಮಾಲೀಸು ಮಾಡಿಕೊಳ್ಳುವುದರ ಮೂಲಕ ಅದನ್ನು ಬಿಳುಪಾಗಿಸಿರಿ. ಫಲಿತಾ೦ಶವು ಗಮನಾರ್ಹವಾಗಿ ಕ೦ಡುಬರುವ೦ತಾಗಲು ಈ ಪ್ರಕ್ರಿಯೆಯನ್ನು ದಿನಕ್ಕೊ೦ದು ಬಾರಿ ಕೈಗೊಳ್ಳಿರಿ. ಮುಖದ ಸೌಂದರ್ಯಕ್ಕಿಂತ ಮನಸ್ಸಿನ ಸೌಂದರ್ಯ ಮುಖ್ಯ ಅದನ್ನು ಹೆಚ್ಚಿಸುವ ಪ್ರಯತ್ನವನ್ನು ಮಾಡೋಣ.