ಈ ಗ್ರೀನ್ ಜ್ಯೂಸ್ ಕುಡಿದರೆ ವಿವಿಧ ಆರೋಗ್ಯ ಸಮಸ್ಯೆ ನಿಮ್ಮ ಹತ್ರವೂ ಸುಳಿಯೋದಿಲ್ಲ!

«ಸಿಂಥಿಯಾ ಮೆಲ್ವಿನ್ 

ಪ್ರಕೃತಿ ಎನ್ನುವುದು ದೇವರು ಕೊಟ್ಟ ವರ. ನಮ್ಮ ಸುತ್ತಮುತ್ತಲಿರುವ ಹಲವು ಗಿಡ-ಮರದ ಎಲೆಗಳಲ್ಲಿ ಹಲವು ಬಗೆಯ ಔಷಧೀಯ ಗುಣಗಳನ್ನು ದೇವರು ನಮಗಾಗಿ ಸೃಷ್ಟಿಸಿದ್ದಾನೆ. ಚಿಕ್ಕ-ಚಿಕ್ಕ ಖಾಯಿಲೆಗೂ ದೊಡ್ಡ-ದೊಡ್ಡ ಆಸ್ಪತ್ರೆಗೆ ಮೊರೆ ಹೋಗುವ ಈ ಕಾಲದಲ್ಲಿ ಕುಂತ್ರೆ-ನಿಂತ್ರೆ ಮಾತ್ರೆ ತೆಗೆದುಕೊಳ್ಳುವ ಚಟ ನಮ್ಮದಾಗಿದೆ. ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ತಮ್ಮ ಸುತ್ತ-ಸುತ್ತಲಿರುವ ಗಿಡಮೂಲಿಕೆ ಎಲೆ, ಬೇರುಗಳನ್ನು ಉಪಯೋಗಿಸಿ ಹಲವು ಖಾಯಿಲೆಗಳನ್ನು ಗುಣಪಡಿಸಿಕೊಳ್ಳುತ್ತಿದ್ದರು.

ಇಲ್ಲೊಂದು ಸ್ಪೆಷಲ್ ಹೋಮ್ ಮೇಡಮ್ ಜ್ಯೂಸ್ ಬಗ್ಗೆ ಹೇಳ್ತೇವೆ.ಅದನ್ನು ಮಾಡಿ ಕುಡಿದರೆ ಮೂತ್ರಕೋಶದ ಸಮಸ್ಯೆಯೂ ಸೇರಿದಂತೆ ವಿವಿಧ ಸಮಸ್ಯೆಗಳು ನಿಮ್ಮ ಹತ್ತಿರವೂ ಸುಳಿಯೋದಿಲ್ಲ.

ಗರ್ಭಕೋಶದ ಸಮಸ್ಯೆಗೆ ಹಾಗೂ ಮೂತ್ರಕೋಶದ ಸಮಸ್ಯೆಗೆ ಈ ಸರಳ ಜ್ಯೂಸನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು.

ಹೀಗೆ ಮಾಡಿ:

ಒಂದು ಹಿಡಿ ತುಳಸಿಸೊಪ್ಪು, ಕೊತ್ತಂಬರಿ ಸೊಪ್ಪು, ಪುದಿನಾ ಸೊಪ್ಪನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಶುಚಿಗೊಳಿಸಿ ನಂತರ ಇವನ್ನು ಮಿಕ್ಸಿ-ಜಾರ್ ಗೆ ಹಾಕಿ ಒಂದು ದೊಡ್ಡ ಲೋಟದಷ್ಟು ನೀರನ್ನು ಹಾಕಿ ರುಬ್ಬಿ ನಂತರ ಸೋಸಿಕೊಂಡರೆ ಅದ್ಭುತವಾದ ಗ್ರೀನ್ ಜ್ಯೂಸ್ ತಯಾರಾಗುತ್ತದೆ.

 

ಈ ಗ್ರೀನ್ ಜ್ಯೂಸ್ ಅನ್ನು ಬೆಳಿಗ್ಗೆ ಬರೀ ಹೊಟ್ಟೆಯಲ್ಲಿ ಕುಡಿದು ಅರ್ಧ ಗಂಟೆ ವಾಕ್ ಅಥವಾ ಮನೆಗೆಲಸ ಅಥವಾ ಏನಾದರೂ ಒಂದು ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ತುಂಬಾ ಉತ್ತಮ.

ಯಾರೂ ಕುಡಿಯಬಹುದು:

ಸುಂದರ ಆರೋಗ್ಯ ನಮ್ಮದಾಗಬೇಕು ಎನ್ನುವ ಎಲ್ಲರೂ ಈ ಜ್ಯೂಸ್ ಕುಡಿಯಬಹುದಾಗಿದೆ. ರುಚಿಗೆ ಸ್ವಲ್ಪ ಬೆಲ್ಲ ಸೇರಿಸಬಹುದು ಅಥವಾ ಹಾಗೆಯೇ ಕುಡಿಯಬಹುದು. ಈ ಜ್ಯೂಸ್ ಕುಡಿಯುವುದರಿಂದ ಗರ್ಭಕೋಶವು ಸಧೃಡವಾಗುತ್ತದೆ. ಹಾಗೂ ಮೂತ್ರಕೋಶಕ್ಕೂ ತುಂಬಾ ಒಳ್ಳೆಯದು. ದಿನಪೂರ್ತಿ ಉಲ್ಲಾಸದಿಂದಿರಲು ಈ ಜ್ಯೂಸ್ ಸಹಕಾರಿ. ಹಾಗಾದ್ರೆ ತಡ ಯಾಕೆ ಮಾಡಿ ಕುಡಿರಿ.

«ಸಿಂಥಿಯಾ ಮೆಲ್ವಿನ್