ಅರಬ್ ಸಂಯುಕ್ತ ರಾಷ್ಟ್ರದ ಶಾರ್ಜಾದಲ್ಲಿ ನವೆಂಬರ್ 16ರ ಭಾನುವಾರದಂದು ಕನ್ನಡ ಭುವನೇಶ್ವರಿಯ ಹಬ್ಬವು ಬಹುಸಂಭ್ರಮದಿಂದ ನೆರವೇರಿತು.
ಶಾರ್ಜಾದ ವಿಮೆನ್ಸ್ ಯೂನಿಯನ್ ಅಸೋಸಿಯೇಷನ ಸಭಾಂಗಣದಲ್ಲಿ ಶಾರ್ಜಾದ ಕರ್ನಾಟಕ ಸಂಘವು 23ನೇ ವಾರ್ಷಿಕೋತ್ಸವದ ಪ್ರಯುಕ್ತ ಕನ್ನಡಹಬ್ಬವನ್ನು ಆಯೋಜಿಸಿತ್ತು.
ವೈವಿಧ್ಯಮಯ ಸಾಂಸ್ಕೃತಿಕ ಸಾಹಿತ್ಯ ಸ್ಪರ್ಧಾ ಸಂಭ್ರಮದೊಂದಿಗೆ ಸಂಪನ್ನಗೊಂಡ ಕನ್ನಡ ಉತ್ಸವವು ಗಲ್ಫ್ ಪ್ರಾಂತ್ಯದ ನೂರಾರು ಕನ್ನಡಿಗರ ಪಾಲ್ಗೊಳ್ಳುವಿಕೆಯಲ್ಲಿ ಅರ್ಥಪೂರ್ಣವಾಗಿ ಜರಗಿತು.ಚಿಣ್ಣರಿಗಾಗಿ ಛದ್ಮವೇಷ ಸ್ಪರ್ಧೆ, ಪ್ರತಿಭಾಕಾರಂಜಿ, ಸಂಗೀತಸುಧೆ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರದಾನದೊಂದಿಗೆ ವರ್ಣರಂಜಿತವಾಗಿ ಈ ಉತ್ಸವ ಆಯೋಜನೆಗೊಂಡಿತ್ತು.
ಈ ಶುಭಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಸತೀಶ ಪೂಜಾರಿ,ಉಪಾಧ್ಯಕ್ಷರಾದ ವಿಶ್ವನಾಥ ಶೆಟ್ಟಿ,ಪ್ರದಾನ ಕಾರ್ಯದರ್ಶಿ ವಿಘ್ನೇಶ ಕುಂದಾಪುರ,ಖಚಾಂಚಿ ಸುಗಂಧರಾಜ ಬೇಕಲ್, ಕಾರ್ಯನಿರ್ವಾಹಕ ಸದಸ್ಯರಾದ ಜೀವನ ಕುಕಿಯಾನ್, ಮಹಮ್ಮದ್ ಅಬ್ರಾರ್, ರಘುರಾಮ್ ಶೆಟ್ಟಿಗಾರ್, ಪೋಷಕ ಆಯೂಬ್ ಸಾಗರ್ ಉಪಸ್ತಿತರಿದ್ದರು.
ಕನ್ನಡ ಉತ್ಸವದ ಸವಿನೆನಪಿಗಾಗಿ ಕೊಡಮಾಡುವ 2025ರ ಮಯೂರ ವಿಶ್ವಮಾನ್ಯ ಕನ್ನಡಿಗ ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರವನ್ನು ಶ್ರೀರೋನಾಲ್ಡ್ ಮಾರ್ಟಿಸರಿಗೆ ಪ್ರದಾನಿಸಿ ಗೌರವಿಸಲಾಯಿತು.
ಅಂತೆಯೇ ಉಡುಪಿ ಕಾರ್ಕಳದ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ವಂದನಾ ರೈಯವರಿಗೂ ಸಂಮಾನ ಸಲ್ಲಿಸಲಾಯಿತು.ಮಧ್ಯಪ್ರಾಚ್ಯ ದೇಶಗಳ ಸ್ಪೋರ್ಟ್ಸ್ ಕನ್ನಡ ಚಾನೆಲಿನ ಗೌರವ ಪ್ರತಿನಿಧಿ ವಿಠಲ ರಿಶಾನ್ ನಾಯಕ್ ವಿಶೇಷ ಅತಿಥಿಯಾಗಿ ಈ ಹಬ್ಬದಲ್ಲಿ ಪಾಲ್ಗೊಂಡಿದ್ದರು.
ನಿರಂತರ 23 ವರ್ಷಗಳಿಂದ ಅರಬ್ ಸಂಯುಕ್ತ ರಾಷ್ಟ್ರದಲ್ಲಿ ತಾಯಿ ಕನ್ನಡ ಭುವನೇಶ್ವರಿಯ ಜಾತ್ರೆಯನ್ನು ತನಮನ ಪೂರ್ವಕವಾಗಿ ಸಲ್ಲಿಸಿ ಕನ್ನಡದ ಕಂಪನ್ನು ಪ್ರೀತಿ ಪ್ರೇಮದಿಂದ ಎಲ್ಲೆಡೆಪಸರಿಸುತ್ತಿರುವ ಗಲ್ಫ್ ಕರ್ನಾಟಕ ಸಂಘದ ಅಪ್ಪಟ ಮಾತೃಭಾಷಾ ಒಲವು ಅಭಿನಂದನೀಯ.ಗಲ್ಫ್ ಕರ್ನಾಟಕ ಸಂಘದ ಸಮಸ್ತರಿಗೆ ಕರುನಾಡಿನ ಕನ್ನಡಿಗರ ವಿಶೇಷ ಅಭಿನಂದನೆಗಳು ಸಲ್ಲಲೇಬೇಕು.
ಬರೆಹ: ಪಿ.ಲಾತವ್ಯ ಆಚಾರ್ಯ ಉಡುಪಿ.


















