ಉಡುಪಿ: ಉಡುಪಿಯ ತೆಂಕಪೇಟೆಯಲ್ಲಿರುವ ಶ್ರೀ ಲಕ್ಷ್ಮಿ ವೆಂಕಟೇಶ ದೇವಸ್ಥಾನದಲ್ಲಿ ವೈಭವದ ವಾರ್ಷಿಕ ದೀಪೋತ್ಸವ ನಡೆಯಿತು. ದೇವಸ್ಥಾನದ ಆವರಣ ಮಾತ್ರವಲ್ಲದೆ ತೆಂಕಪೇಟೆಯ ಉದ್ದಕ್ಕೂ ಸಾಲು ಸಾಲು ದೀಪಗಳನ್ನು ಬೆಳಗಲಾಯಿತು. ದೇವಾಲಯದ ಪುಷ್ಕರಣೆಯಲ್ಲಿ ಕೆರೆ ದೀಪೋತ್ಸವ ನಡೆಯಿತು.
ಇದೆ ವೇಳೆ ನಡೆದ ಪಲ್ಲಕ್ಕಿ ಉತ್ಸವದಲ್ಲಿ ಲಕ್ಷ್ಮಿ ವೆಂಕಟೇಶ ದೇವರನ್ನಿಟ್ಟು ಮೆರವಣಿಗೆ ಮಾಡಲಾಯಿತು. ಬೆಳ್ಳಿಯ ಪುಷ್ಪ ರಥದಲ್ಲಿ ಪೇಟೆ ಉತ್ಸವ ನಡೆಯಿತು. ಬಳಿಕ ಆಕರ್ಷಕ ಸುಡುಮದ್ದು ಪ್ರದರ್ಶನ ಏರ್ಪಡಿಸಲಾಗಿತ್ತು. ಸಾವಿರಾರು ಭಕ್ತರು ಕಾರ್ತಿಕ ಮಾಸದ ಈ ವೈಭವದ ದೀಪೋತ್ಸವದಲ್ಲಿ ಭಾಗಿಯಾದರು.




















