ಉಡುಪಿ: ಇಂದು ಅಶ್ವಿನಿ ನಕ್ಷತ್ರದಲ್ಲಿ ಚಂದ್ರನಿಗೆ ರಾಹು ಗ್ರಹಣ ಸಂಭವಿಸಲಿದೆ. ಈ ಗ್ರಹಣವು
ರಾತ್ರಿ ಗಂಟೆ 12:57 ಕ್ಕೆ ಆರಂಭವಾಗಲಿದ್ದು ಗ್ರಹಣ ಮೋಕ್ಷ ರಾತ್ರಿ ಗಂಟೆ 2:27ಕ್ಕೆ ಆಗಲಿದೆ.
ಸುದೀರ್ಘ ಒಂದು ಗಂಟೆ 27 ನಿಮಿಷಗಳ ಕಾಲ ಈ ಗ್ರಹಣ ನಡೆಯಲಿದೆ. ಈ ಗ್ರಹಣವು ಅಶ್ವಿನಿ ಭರಣಿ ಮಖ ಮೂಲಾ ರೇವತಿ ನಕ್ಷತ್ರದವರಿಗೂ ಮೇಷ ವೃಷಭ ಕನ್ಯಾ ವೃಶ್ಚಿಕ ರಾಶಿಯವರಿಗೂ ಅನಿಷ್ಟಕರವಾಗಿದೆ.
ಕ್ಷೇತ್ರದಲ್ಲಿ ಅನಿಷ್ಟ ನಿವಾರಣೆಗಾಗಿ ಗ್ರಹಣ ಶಾಂತಿಯನ್ನು ಹಮ್ಮಿಕೊಳ್ಳಲಾಗಿದ್ದು ಭಕ್ತರು ಇದರಲ್ಲಿ ತಮ್ಮ ಹೆಸರು ನಕ್ಷತ್ರ ರಾಶಿಯನ್ನು ನೀಡಿ ಪಾಲ್ಗೊಳ್ಳಬಹುದು. ಪೂಜಾ ಸಂಕಲ್ಪ ಒಂದಕ್ಕೆ ರೂಪಾಯಿ 250 ನಿಗದಿಪಡಿಸಲಾಗಿದೆ.
ಕಾಣಿಕೆಯನ್ನು ಗೂಗಲ್ ಪೇ 9342749650 ನಂಬರಿಗೆ ಕಳುಹಿಸಿಕೊಡಬಹುದು.