ಮಂಗಳೂರು: ನಗರದ ಫಳ್ನೀರ್ ನಲ್ಲಿರುವ ಇಂದಿರಾ ಎಜುಕೇಶನ್ ಟ್ರಸ್ಟ್ ಇದರ ಅಧೀನ ಕಾಲೇಜುಗಳ ಪದವಿ ದಿನವನ್ನು ಎಪ್ರಿಲ್ 29 ಶನಿವಾರದಂದು ಮಂಗಳೂರಿನ ಮಿಲಾಗ್ರಿಸ್ ಜುಬಿಲಿ ಹಾಲ್‌ನಲ್ಲಿ ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ (ಮೌಲ್ಯಮಾಪನ) ಡಾ.ಎನ್.ರಾಮಕೃಷ್ಣರೆಡ್ಡಿ, ಗೌರವ ಅತಿಥಿಗಳಾಗಿ ಪ್ರೊ.ಡಾ.ಯು.ಟಿ. ಇಫ್ತಿಕರ್ ಅಲಿ, ಮಾಜಿ ಸಿಂಡಿಕೇಟ್ ಸದಸ್ಯ, ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ, ಬೆಂಗಳೂರು ಇವರು ಆಗಮಿಸಿದ್ದರು.
ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ.ಗ್ರೀಶಾ ಜೋಸ್; ಫಿಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲೆ ಡಾ.ಎನ್. ಜಿಯೋವಿಯಾ ಜಾರ್ಜ್ (ಪಿಟಿ), ಅಲೈಡ್ ಹೆಲ್ತ್ ಸೈನ್ಸ್ ವಿಭಾಗದ ಪ್ರಾಂಶುಪಾಲೆ ಕೃತಿಕಾ, ಅರೆವೈದ್ಯಕೀಯ ವಿಜ್ಞಾನಗಳ ಉಸ್ತುವಾರಿ ಪ್ರಾಂಶುಪಾಲೆ ಮೀಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾಲೇಜುಗಳ ವಾರ್ಷಿಕ ವರದಿಯನ್ನು ಆಯಾಯ ಕಾಲೇಜುಗಳ ಪ್ರಾಂಶುಪಾಲರು ವಾಚಿಸಿದರು. ಸಮಾರಂಭದ ಮುಖ್ಯಅತಿಥಿ ಡಾ.ಎನ್.ರಾಮಕೃಷ್ಣರೆಡ್ಡಿ, ಇವರು ಆರೋಗ್ಯ ವೃತ್ತಿಪರರ ಪ್ರಾಮುಖ್ಯತೆ ಮತ್ತು ವೃತ್ತಿಯ ಅಭಿವೃದ್ಧಿಗಾಗಿ ಡಾ.ಯು.ಟಿ.ಇಫ್ತಿಕರ್ ಅಲಿ ಇವರು ನೀಡಿದ ಅಗಾಧಕೊಡುಗೆ ಕುರಿತು ತಮ್ಮ ವಿಚಾರವನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಎಂಎಸ್ಸಿ ನರ್ಸಿಂಗ್, ಬಿಎಸ್ಸಿ ನರ್ಸಿಂಗ್, ಪೋಸ್ಟ್ ಬೇಸಿಕ್ ಬಿಎಸ್ಸಿ ನರ್ಸಿಂಗ್ ಮತ್ತುಅಲೈಡ್ ಹೆಲ್ತ್ ಸೈನ್ಸಸ್ ಪದವಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಅರೆವೈದ್ಯಕೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಡಿಪ್ಲೊಮಾ ಪ್ರಮಾಣ ಪತ್ರ ನೀಡಲಾಯಿತು.
ಇಂದಿರಾ ನರ್ಸಿಂಗ್ ಕಾಲೇಜಿನ ಉಪನ್ಯಾಸಕಿ ಇವಾನ್ಸಾ ರಾಲಿನ್ ವಾರ್ಜ್ರಿ ಸ್ವಾಗತಿಸಿದರು. ಸಹ ಪ್ರಾಧ್ಯಾಪಕಿ ಶ್ರೀಮತಿ ಸಿಜಿ ಆಗಸ್ಟಿನ್ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಪದವಿ ಪ್ರದಾನ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.












