ಎಕ್ಸ್ಪರ್ಟ್ ಕಾಲೇಜಿನಲ್ಲಿ ‘ಪದವಿ ಪ್ರದಾನ’ ಸಮಾರಂಭ: ಸಮಯದ ಸದ್ವಿನಿಯೋಗವೇ ಯಶಸ್ಸಿನ ಗುಟ್ಟು: ಪ್ರೊ.ನರೇಂದ್ರ ಎಲ್ ನಾಯಕ್

ಮಂಗಳೂರು: ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ಕಠಿಣ ಶ್ರಮ, ಆತ್ಮವಿಶ್ವಾಸ ಮತ್ತು ಗುರಿಯೊಂದಿಗೆ ಸಾಗಿದರೆ ನಾವು ಉನ್ನತಮಟ್ಟಕ್ಕೆ ಏರಲು ಸಾಧ್ಯ. ಬದುಕಿನಲ್ಲಿ ಯಾವುದೇ ಸವಾಲುಗಳು ಬಂದರು ಧೈರ್ಯದಿಂದ ಎದುರಿಸಿ ಸದಾ ಹೊಸದನ್ನು ಕಲಿಯುವ ಮನೋಭಾವವನ್ನು ಹೊಂದಿರಬೇಕು. ಶಿಕ್ಷಣ ಕೇವಲ ಅಂಕಗಳಿಗೆ ಮಾತ್ರ ಸೀಮಿತವಾಗದೆ, ವ್ಯಕ್ತಿತ್ವ ನಿರ್ಮಾಣಕ್ಕೂ ಸಹಾಯಕವಾಗಬೇಕು ಎಂದು ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿರುವ ಪ್ರೊ.ನರೇಂದ್ರ ಎಲ್ ನಾಯಕ್ರ ವರು ಹೇಳಿದರು.
ಮಂಗಳೂರಿನ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆದ ದ್ವಿತೀಯ ಪಿ.ಯು ವಿದ್ಯಾರ್ಥಿಗಳ
‘ಪದವಿ ಪ್ರದಾನ’ ಸಮಾರಂಭದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ಅವರು ವಿದ್ಯಾರ್ಥಿಗಳ ಸಾಧನೆಯನ್ನು ಪ್ರಶಂಸಿಸಿ ಜೀವನದಲ್ಲಿ ಶಿಕ್ಷಣದ ಮಹತ್ವವನ್ನು ವಿವರಿಸಿದರು.
ದೇಶದ ಅಭಿವೃದ್ಧಿಗೆ ಯುವಜನತೆ ಪ್ರಮುಖ ಶಕ್ತಿಯಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ಹೊಣೆಗಾರಿಕೆಯನ್ನು ಅರಿತು ಸಾಗಬೇಕು ಎಂದು ಹೇಳುತ್ತಾ ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಶುಭ ಹಾರೈಸಿದರು.

ಈ ಕಾರ್ಯಕ್ರಮದಲ್ಲಿ ಶೈಕ್ಷಣಿಕ ಸಾಲಿನ ಮ್ಯಾಗಜೀನ್ ‘ಎಕ್ಸ್ಪ್ಲೋರ್’ ಬಿಡುಗಡೆಯು ವಿಶೇಷ ಆಕರ್ಷಣೆಯಾಗಿತ್ತು.

ಯಶಸ್ಸಿನ ಸಾಧನೆಗೆ ಶಿಸ್ತು ಅತಿ ಮುಖ್ಯ. ಪದವಿ ಪೂರ್ವ ಹಂತದಲ್ಲಿ ಕಠಿಣ ಪರಿಶ್ರಮ , ಶಿಸ್ತು ಅಳವಡಿಸಿಕೊಂಡರೆ ಮುಂದಿನ ಹಂತದಲ್ಲಿ ಅತ್ಯುನ್ನತ ಸಾಧನೆ ಮಾಡಲು ಸಹಕಾರಿಯಾಗುತ್ತದೆ. ಮುಂಬರಲಿರುವ ಕೆಸಿಇಟಿ, ನೀಟ್
ಪರೀಕ್ಷೆಯನ್ನು ಕೂಡ ಗಂಭೀರವಾಗಿ ಪರಿಗಣಿಸಬೇಕು. ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯೊಂದಿಗೆ ಅಧ್ಯಯನಶೀಲತೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಉನ್ನತ ಸಾಧನೆಯನ್ನು ಮಾಡಿ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಮೂಡಿಬರಬೇಕು ಎಂದು ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆಯಾಗಿರುವ ಡಾ. ಉಷಾಪ್ರಭಾ ಎನ್ನಾಯಕ್‌ರವರು ಹೇಳಿದರು.

೨೦೨೪-೨೬ರ ಶೈಕ್ಷಣಿಕ ಸಾಲಿನಲ್ಲಿ ಪಠ್ಯ ಹಾಗೂ ಪಠ್ಯೇತರಚಟುವಟಿಕೆಗಳಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ
ಪ್ರಶಂಸಾ ಪತ್ರವನ್ನು ನೀಡಿ ಗೌರವಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರಾಮಚಂದ್ರ ಭಟ್ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಕಳೆದ ಶೈಕ್ಷಣಿಕ ಸಾಲಿನಲ್ಲಿ ರಾಜ್ಯಕ್ಕೆ ವಿಜ್ಞಾನ ವಿಭಾಗದಲ್ಲಿ ಅಗ್ರಸ್ಥಾನ ಪಡೆದ ವಿದ್ಯಾರ್ಥಿನಿಯಾಗಿರುವ ಅಮೂಲ್ಯ ಕಾಮತ್ಅ ವರನ್ನು ಈ ಸುಸಂದರ್ಭದಲ್ಲಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕೆಲವು ವಿದ್ಯಾರ್ಥಿಗಳು ತಾವು ಕಾಲೇಜಿನಲ್ಲಿ ಕಳೆದ ಎರಡು ವರ್ಷದ ಸವಿ ನೆನಪುಗಳನ್ನು ಮೆಲುಕು ಹಾಕುತ್ತ ತಮ್ಮ ಅನುಭವಗಳನ್ನು ಹಂಚಿಕೊಂಡು ಭಾವುಕರಾದರು.

ವೇದಿಕೆಯಲ್ಲಿ ಪ್ರಾಂಶುಪಾಲರಾದ ಪ್ರೊ.ರಾಮಚಂದ್ರ ಭಟ್ , ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯ ಮಾಹಿತಿ ತಂತ್ರಜ್ಞಾನದ
ನಿರ್ದೇಶಕರಾದ ಅಂಕುಶ್ ಎನ್ ನಾಯಕ್, ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯ ಕೋರ್‌ಕಮಿಟಿ ಸದಸ್ಯರಾದ ಶ್ರೀ. ಬಿ. ವಿನಯ್
ಕುಮಾರ್, ಕೋಚಿಂಗ್ ಸಂಯೋಜಕರಾದ ಕರುಣಾಕರ್ ಬಳ್ಕೂರು, ಭೌತಶಾಸ್ತ್ರದ ಉಪನ್ಯಾಸಕಿಯಾದ ಶ್ರೀಮತಿ.
ಶ್ರೀವಿದ್ಯಾ, ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿಗಳಾದ ಅಶ್ವಿನಿ ಪೈ ಹಾಗೂ ಪ್ರಶಾಂತ್ ಪೈ ರವರು ಉಪಸ್ಥಿತರಿದ್ದರು.
ಗಣಿತಶಾಸ್ತ್ರ ವಿಭಾಗದ ಉಪನ್ಯಾಸಕರಾದ ಪೃಥ್ವಿ ಡಿಸೋಜಾ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿ
ಪರಿಷತ್‌ನ ಕಾರ್ಯದರ್ಶಿ ನಿಹಾರಿಕಾ ವಂದಿಸಿದರು.
ಕಾರ್ಯಕ್ರಮದ ಸಂಯೋಜಕಿಯಾದ ಶ್ರೀಮತಿ ಶ್ವೇತಾ ಸುವರ್ಣ ಹಾಗೂ ಇನ್ನಿತರ ಸಹೊದ್ಯೋಗಿ ವರ್ಗದವರು
ಕಾರ್ಯಕ್ರಮ ಸುಸೂತ್ರವಾಗಿ ನೆರವೇರಲು ಸಹಕರಿಸಿದರು.