ನೇಣುಬಿಗಿದ ಸ್ಥಿತಿಯಲ್ಲಿ ಪದವಿ ಕಾಲೇಜು ವಿದ್ಯಾರ್ಥಿನಿಯ ಮೃತದೇಹ ಪತ್ತೆ

ಕಾಸರಗೋಡು: ಜಿಲ್ಲೆಯ ಪೆರ್ಲದಲ್ಲಿ ಕಾಲೇಜು ವಿದ್ಯಾರ್ಥಿನಿಯೋರ್ವಳ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಪೆರ್ಲ ಸಮೀಪದ ಬಜಕೂಡ್ಲು ನಿವಾಸಿ ಮಹಾಲಿಂಗ ನಾಯ್ಕ – ಕುಮುದಾಕ್ಷಿ ದಂಪತಿಗಳ ಪುತ್ರಿ ಶ್ರಾವ್ಯ (20) ಮೃತ ವಿದ್ಯಾರ್ಥಿನಿ.

ಈಕೆ ವಿಟ್ಲದ ಪದವಿ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿದ್ದಳು. ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಎಂದು ಶಂಕಿಸಲಾಗಿದ್ದು, ಪೊಲೀಸ್ ತನಿಖೆಯಿಂದ ಪ್ರಕರಣದ ಸತ್ಯಾಸತ್ಯತೆ ತಿಳಿದುಬರಬೇಕಿದೆ.