ರಾಷ್ಟ್ರಮಟ್ಟದ ಫ್ಲವರ್ ಡೆಕೋರೇಟರ್ಸ್ ಎಕ್ಸ್ ಪೋ ಆಯೋಜಿಸಿ ದೇಶದ ಗಮನ ಸೆಳೆಯಿರಿ: ರಘುಪತಿ ಭಟ್

ಉಡುಪಿ: ಜನವರಿಯಲ್ಲಿ ರಾಷ್ಟ್ರಮಟ್ಟದ ಫ್ಲವರ್ ಡೆಕೋರೇಟರ್ಸ್ ಎಕ್ಸ್ ಪೋ ಆಯೋಜಿಸುವ ಮೂಲಕ ಜಿಲ್ಲೆಯು ದೇಶದಲ್ಲೇ ವಿಶಿಷ್ಟ ರೀತಿಯಲ್ಲಿ ಗಮನ ಸೆಳೆಯುವಂತೆ ಮಾಡುವ ಯೋಜನೆ ರೂಪಿಸಬೇಕು ಎಂದು ಶಾಸಕ ಕೆ. ರಘುಪತಿ ಭಟ್ ಹೇಳಿದರು.

ಭಾನುವಾರ ಉಡುಪಿಯಲ್ಲಿ ಜಿಲ್ಲಾ ಫ್ಲವರ್ ಡೆಕೋರೇಟರ್ಸ್ ಮಾಲಕರ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲೆಯ ರಜತ ಮಹೋತ್ಸವದ ಹಿನ್ನೆಲೆಯಲ್ಲಿ ಡಾ ಜಿ. ಶಂಕರ್ ಅವರ ಸಲಹೆಯಂತೆ ಜಿಲ್ಲಾಡಳಿತ ಮತ್ತು ರಜತ ಮಹೋತ್ಸವ ಸಮಿತಿ ಸಹಕಾರದಲ್ಲಿ ಎಕ್ಸ್ ಪೋ ಆಯೋಜನೆ ಮಾಡಬೇಕು. ಇದಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಹೇಳಿದರು.

ಸಂಘದ ಲಾಂಛನವನ್ನು ಅನಾವರಣಗೊಳಿಸಿದ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ನ ಪ್ರವರ್ತಕ ಡಾ ಜಿ.ಶಂಕರ್ ಮಾತನಾಡಿ, ಸಂಘವು ಸದಾ ಒಗ್ಗಟ್ಟಿನಲ್ಲಿರಬೇಕು, ವಿನೂತನ ಕಾರ್ಯದ ಮೂಲಕ ಜನರಿಗೆ ಹೊಸತನ ಮತ್ತು ವೈಶಿಷ್ಟ್ಯತೆಯನ್ನು ಪ್ರದರ್ಶಿಸಬೇಕು ಎಂದರು.

ಸಂಘದ ಅಧ್ಯಕ್ಷ ಅಕ್ಷಯ್ ಜೈನ್ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು.

ಉದ್ಯಮಿಗಳಾದ ಪುರುಷೋತ್ತಮ ಶೆಟ್ಟಿ, ಮನೋಹರ್ ಶೆಟ್ಟಿ, ಜೆರ್ರಿ ವಿನ್ಸೆಂಟ್ ಡಯಾಸ್, ಜಯಕರ ಶೆಟ್ಟಿ ಇಂದ್ರಾಳಿ, ಸಾಫಲ್ಯ ಟ್ರಸ್ಟ್ ನ ನಿರುಪಮಾ ಪ್ರಸಾದ್ ಶೆಟ್ಟಿ, ಜಿಲ್ಲಾ ಸೌಂಡ್ಸ್ ಆ್ಯಂಡ್ ಲೈಟ್ಸ್ ಮಾಲಕರ ಸಂಘದ ಅಧ್ಯಕ್ಷ ರಾಮಕೃಷ್ಣ ಕುಂದರ್, ಜಿಲ್ಲಾ ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಉದಯ ಕುಮಾರ್, ಎಸ್‌ಕೆಪಿಎ ಉಡುಪಿ ಅಧ್ಯಕ್ಷ ಜನಾರ್ಧನ ಕೊಡವೂರು, ಹಲೀಮಾ ಸಬ್ಜು ಆಡಿಟೋರಿಯಂ ಮಾಲಕ ಜಲೀಲ್ ಸಾಹೇಬ್, ದ.ಕ. ಫ್ಲವರ್ ಡೆಕೋರೇಟರ್‌ಸ್‌ ಮಾಲಕರ ಸಂಘದ ಅಧ್ಯಕ್ಷ ಅಶ್ವಿತ್ ಕೊಟ್ಟಾರಿ, ಪ್ರ. ಕಾರ್ಯದರ್ಶಿ ಸುಲಕ್ಷಣ್ ಬಿ.ರೈ, ಕೋಶಾಧಿಕಾರಿ ವಿಲ್ಫ್ರೆಡ್ ಪಿಂಟೋ, ಉಡುಪಿ ಜಿಲ್ಲಾ ಸಂಘದ ಪ್ರ. ಕಾರ್ಯದರ್ಶಿ ಪ್ರಸನ್ನ ಶೆಟ್ಟಿ ಕಾಪು, ಕೋಶಾಧಿಕಾರಿ ಸುರೇಶ್ ಅಮೀನ್, ಸಂಘಟನಾ ಕಾರ್ಯದರ್ಶಿ ಈಶಾನ್ ಬಲ್ಲಾಳ್, ಉಪಾಧ್ಯಕ್ಷ ದಾಮೋದರ್ ಜೋಗಿ, ಶಂಕರ್, ವಿಲ್ಮಾ ಕ್ಯಾರೆಲ್ ಉಪಸ್ಥಿತರಿದ್ದರು.

ಫ್ಲವರ್ ಡೆಕೋರೇಷನ್ ಕ್ಷೇತ್ರದಲ್ಲಿ 25 ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಹಿರಿಯರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಪ್ರಶಾಂತ್ ಶೆಟ್ಟಿ ಹಾವಂಜೆ ಮತ್ತು ಸಾಹಿಲ್ ರೈ ನಿರೂಪಿಸಿದರು.