ಮಂಗಳೂರು-ಕಾರ್ಕಳ: ಕಾರ್ಕಳ-ಮಂಗಳೂರು ದಾರಿಯಲ್ಲಿ ಸರಕಾರಿ ಬಸ್ಸು ಓಡಾಡಬೇಕು ಎನ್ನುವುದು ಇಲ್ಲಿನ ಜನರ, ವಿದ್ಯಾರ್ಥಿಗಳ ಬಹು ವರ್ಷಗಳ ಕನಸಾಗಿತ್ತು. ಗ್ಯಾರಂಟಿ ಯೋಜನೆ ಬಂದ ಮೇಲಂತೂ ಸರಕಾರಿ ಬಸ್ಸನ್ನು ಈ ದಾರಿಯಲ್ಲಿ ಬಿಡಲೇಬೇಕು ಎನ್ನುವ ಆಗ್ರಹ ಜಾಸ್ತಿಯಾಗಿತ್ತು. ಈಗ ಸರಕಾರಿ ಬಸ್ಸಿನ ಕನಸು ಈಡೇರಿದೆ. ಡಿ.12 ಗುರುವಾರದಿಂದ ಕಾರ್ಕಳ-ಮೂಡುಬಿದಿರೆ ದಾರಿಯಲ್ಲಿ ಸರಕಾರಿ ಬಸ್ಸು ಸಂಚಾರ ಆರಂಭಿಸಿದ್ದು ಜನತೆ ಹರ್ಷರಾಗಿದ್ದಾರೆ.ಇಷ್ಟು ದಿನ ಖಾಸಗಿ ಬಸ್ ಗಳ ಒತ್ತಡದಿಂದ ಸರಕಾರಿ ಬಸ್ಸು ರಸ್ತೆಗಿಳಿಯದೇ ಜನರು ಸಮಸ್ಯೆ ಅನುಭವಿಸಿದ್ದರು.
ಖಾಸಗಿ ಬಸ್ಸು ಮಾಲೀಕರು ಶಾಸಕರಿಗೆ, ಜನಪ್ರತಿನಿಧಿಗಳಿಗೆ ಆರ್ ಟಿ ಒ ಅಧಿಕಾರಿಗಳಿಗೆ ಲಂಚ ಕೊಟ್ಟು ಸರಕಾರಿ ಬಸ್ ರಸ್ತೆಗಿಳಿಯದಂತೆ ನೋಡಿಕೊಂಡಿದ್ದರು ಎನ್ನುವ ಆರೋಪ ಮೊದಲಿನಿಂದಲೂ ಕೇಳಿಬಂದಿತ್ತು. ಆದರೆ ಈಗ ಸ್ಥಳೀಯರ ಸಹಕಾರದಿಂದ ಬಸ್ಸು ಓಡಾಟ ಶುರು ಮಾಡಿದ್ದು ಸದ್ಯಕ್ಕೆ ನಾಲ್ಕು ಬಸ್ಸುಗಳ ಓಡಾಟವಷ್ಟೇ ನಡೆದಿದೆ. ಇದನ್ನು ಹೇಗಾದರೂ ನಿಲ್ಲಿಸುವ ಷಡ್ಯಂತ್ರ್ಯವನ್ನು ಖಾಸಗಿ ಬಸ್ ಮಾಲೀಕರು ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ಆದರೆ ಸಾರ್ವಜನಿಕರ ಸತತ ಒತ್ತಡ, ಬೇಡಿಕೆ ಜಾಸ್ತಿಯಾದರೆ ಸರಕಾರವೂ ಮಣಿದು ಬಸ್ಸುಗಳನ್ನು ಶಾಶ್ವತವಾಗಿ ಓಡಾಡುವಂತೆ ನೋಡಿಕೊಳ್ಳಲಿದ್ದು. ಸಾರ್ವಜನಿಕರ ಸಹಕಾರ ಕೂಡ ಸರಕಾರಿ ಬಸ್ಸುಗಳಿಗೆ ಬೇಕಾಗಿದೆ.
ಇಲ್ಲಿದೆ ಬಸ್ ವೇಳಾಪಟ್ಟಿ:
ಮಂಗಳೂರಿನಿಂದ ಕಾರ್ಕಳಕ್ಕೆ ಬೆಳಿಗ್ಗೆ 6.45,8.30,10.30,12.15,3.15,4.00,5.45 ಕ್ಕೆ ಮಂಗಳೂರು ಬಿಜೈ ಸರಕಾರಿ ಬಸ್ ನಿಲ್ದಾಣದಿಂದ ಹೊರಡಿಲಿದೆ.
ಕಾರ್ಕಳ ಮುಖ್ಯ ಬಸ್ಸು ನಿಲ್ದಾಣದಿಂದ ಬೆಳಿಗ್ಗೆ 6.45 8.30 ,10.30, 12.15, 2.15, 4.00, 5.45. ಕ್ಕೆ ಮಂಗಳೂರಿನತ್ತ ಹೊರಡಲಿದೆ.