Government Holiday: ವಾಲ್ಮೀಕಿ ಜಯಂತಿ ರಜೆಯಲ್ಲಿ ಬದಲಾವಣೆ ಮಾಡಿ ಸರ್ಕಾರದ ಆದೇಶ; 3 ದಿನ ಸಾಲು ಸಾಲು ರಜೆ!

ವಾಲ್ಮೀಕಿ ಜಯಂತಿ ರಜೆಯಲ್ಲಿ ಬದಲಾವಣೆ ಮಾಡಲಾಗಿದ್ದು, ಸರ್ಕಾರಿ ನೌಕರರು ಹಾಗೂ ಶಾಲಾ ಕಾಲೇಜು ಮಕ್ಕಳಿಗೆ ದಸರಾ ರಜೆ ಜೊತೆಗೆ ಸಾಲು ಸಾಲು ಹಾಲಿಡೇ ರಿಲೀಫ್​ ಸಿಗಲಿದೆ.

ಬೆಂಗಳೂರು (ಅ.06): ಅಕ್ಟೋಬರ್​ ತಿಂಗಳಲ್ಲಿ ಸಾಲು ಸಾಲು ಸರ್ಕಾರಿ ರಜೆಗಳಿದೆ. ಇದರ ನಡುವೆ ಮಹರ್ಷಿ ವಾಲ್ಮೀಕಿ (Maharshi Valmiki) ಜಯಂತಿಯ ಸಾರ್ವತ್ರಿಕ ರಜೆ ದಿನಾಂಕವನ್ನು ಬದಲಾಯಿಸಿ ಕರ್ನಾಟಕ ಸರ್ಕಾರ (Government Karnataka) ಅಧಿಕೃತ ಆದೇಶ ಹೊರಡಿಸಿದೆ. ಈ ಹಿಂದೆ ನಿಗದಿಪಡಿಸಲಾಗಿದ್ದ ದಿನಾಂಕದ ಬದಲು ಅಕ್ಟೋಬರ್ 26ರ ಸೋಮವಾರದಂದು ವಾಲ್ಮೀಕಿ ಜಯಂತಿ ಆಚರಿಸಲು ಸರ್ಕಾರ ನಿರ್ಧರಿಸಿದ್ದು, ಅಂದೇ ರಜೆ ಕೂಡ ನೀಡಲು ಸರ್ಕಾರ ಆದೇಶ ಹೊರಡಿಸಿದೆ.

25 ಭಾನುವಾರದ ಬದಲು 26ರಂದು ರಜೆ

2026ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು 2026ರ ಅಕ್ಟೋಬರ್ 25ರ ಭಾನುವಾರದಂದು ಘೋಷಿಸಲಾಗಿತ್ತು. ಆದ್ರೆ, ವಾಲ್ಮೀಕಿ ಜಯಂತಿಯನ್ನು ‘ಶೀಗಿ ಹುಣ್ಣಿಮೆ’ ದಿನದಂದೇ ಆಚರಿಸುವ ಹಿನ್ನೆಲೆ ಅಕ್ಟೋಬರ್ 26ರ ಸೋಮವಾರದಂದು ಶೀಗಿ ಹುಣ್ಣಿಮೆ ಬಂದ ಹಿನ್ನೆಲೆ ಅಂದೇ ಜಯಂತಿಯನ್ನು ಆಚರಿಸಲು ಮತ್ತು ಸಾರ್ವತ್ರಿಕ ರಜೆ ನೀಡಲು ಆದೇಶಿಸಲಾಗಿದೆ.

ಬ್ಯಾಂಕ್‌ಗಳಿಗೂ ರಜೆ .. ರಜೆ..

ಅಕ್ಟೋಬರ್​ 26ರಂದು ರಜೆ ನೀಡಿದ ಹಿನ್ನೆಲೆ ಸಾಲು ಸಾಲು ರಜೆ ಸಿಗಲಿದೆ.  ಅಕ್ಟೋಬರ್ 26ರ ಸೋಮವಾರದಂದು ರಾಜ್ಯದ ಸರ್ಕಾರಿ ಕಚೇರಿಗಳು, ಶಾಲೆ-ಕಾಲೇಜುಗಳ ಜೊತೆಗೆ ಬ್ಯಾಂಕ್‌ ಗಳಿಗೂ ಸರ್ಕಾರಿ ರಜೆ ಇರಲಿದೆ. ಸರ್ಕಾರಿ ನೌಕರರು ಹಾಗೂ ಶಾಲಾ ಕಾಲೇಜು ಮಕ್ಕಳಿಗೆ ದಸರಾ ರಜೆ ಜೊತೆಗೆ ಸಾಲು ಸಾಲು ಹಾಲಿಡೇ ರಿಲೀಫ್​ ಸಿಗಲಿದೆ.