ಯುಪಿಐ ಸೇವೆಗಳಿಗೆ ಶುಲ್ಕ ವಿಧಿಸುವ ಯೋಜನೆ ಇಲ್ಲ: ಕೇಂದ್ರ ಸ್ಪಷ್ಟನೆ

ನವದೆಹಲಿ: ಯುಪಿಐ ಸೇವೆಗಳಿಗೆ ಯಾವುದೇ ಶುಲ್ಕ ವಿಧಿಸುವ ಯೋಜನೆ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಸರಣಿ ಟ್ವೀಟ್‌ಗಳ ಮಾಡಿರುವ ಹಣಕಾಸು ಸಚಿವಾಲಯವು, ಯುಪಿಐ ಸಾರ್ವಜನಿಕರಿಗೆ ಅಪಾರ ಅನುಕೂಲತೆ ಮತ್ತು ಆರ್ಥಿಕತೆಗೆ ಉತ್ಪಾದಕತೆಯ ಲಾಭವನ್ನು ತಂದುಕೊಡುವ ಡಿಜಿಟಲ್ ಸಾರ್ವಜನಿಕ ಉತ್ಪನ್ನವಾಗಿದೆ ಎಂದಿದೆ.

ಯುಪಿಐ ವಹಿವಾಟುಗಳ ಮೇಲೆ ಶುಲ್ಕ ವಿಧಿಸುವ ಸಾಧ್ಯತೆಯಿದೆ ಎಂಬ ಕೆಲವು ವರದಿಗಳ ನಡುವೆ ಸ್ಪಷ್ಟನೆ ಬಂದಿದೆ.

ಶುಲ್ಕ ವಸೂಲಾತಿಗಾಗಿ ಸೇವಾ ಪೂರೈಕೆದಾರರು ಕಾಳಜಿ ವ್ಯಕ್ತಪಡಿಸಿದ್ದರೂ ಸೇವಾ ವೆಚ್ಚಗಳನ್ನು ಇತರ ವಿಧಾನಗಳ ಮೂಲಕ ವಸೂಲಾತಿ ಮಾಡಬೇಕು ಎಂದು ಸಚಿವಾಲಯ ಹೇಳಿದೆ.

ಸರ್ಕಾರವು ಕಳೆದ ವರ್ಷ ಡಿಜಿಟಲ್ ಪಾವತಿ ವ್ಯವಸ್ಥೆಗೆ ಹಣಕಾಸಿನ ನೆರವು ನೀಡಿತ್ತು ಮತ್ತು ಡಿಜಿಟಲ್ ಪಾವತಿಗಳನ್ನು ಮತ್ತಷ್ಟು ಅಳವಡಿಸಿಕೊಳ್ಳಲು ಮತ್ತು ಆರ್ಥಿಕ ಮತ್ತು ಬಳಕೆದಾರ ಸ್ನೇಹಿ ಪಾವತಿ ವೇದಿಕೆಗಳ ಪ್ರಚಾರವನ್ನು ಉತ್ತೇಜಿಸಲು ಈ ವರ್ಷವೂ ಅದೇ ರೀತಿ ನೆರವನ್ನು ಘೋಷಿಸಿದೆ ಎಂದು ಸಚಿವಾಲಯವು ತಿಳಿಸಿದೆ.