ನಂಚಾರು: 15 ಕೋಟಿ ರೂ ವೆಚ್ಚದಲ್ಲಿ ಗೋಶಾಲೆ ಲೋಕಾರ್ಪಣೆ

 ಉಡುಪಿ: ಪ್ರತಿಯೊಂದು ಜಿಲ್ಲೆಯಲ್ಲಿ ಒಂದೊಂದು ಗೋಶಾಲೆ ನಿರ್ಮಿಸಿ, ಗೋಹತ್ಯೆ ನಿಲ್ಲುವಂತಾಗಬೇಕು.  ಜಿಲ್ಲೆಯ ಬ್ರಹ್ಮಾವರ ತಾಲೂಕಿನ ನಂಚಾರು ಗ್ರಾಮದಲ್ಲಿ ತಾತ್ಕಲಿಕವಾಗಿ ಗೋ ಸಾಕಾಣೆಗೆ ಶೆಡ್ಡ್ ನಿರ್ಮಿಸಲಾಗಿದ್ದು, ಪ್ರಾಥಮಿಕ ಹಂತದಲ್ಲಿ 250 ಗೋ ಸಾಕಾಣೆಗೆ ಸಾಧ್ಯವಾಗುವಷ್ಟು ಆಶ್ರಯತಾಣದ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ ಎಂದು  ಮತ್ತು  ನಂಚಾರು ಕಾಮಧೇನು ಗೋ ಶಾಲಾ ಮಹಾಸಂಘ ಟ್ರಸ್ಟ್ ನಂಚಾರು ಅಧ್ಯಕ್ಷ ರಾಜೇಂದ್ರ ಚಕ್ಕೇರ ಅವರು ತಿಳಿಸಿದರು.

 ಶುಕ್ರವಾರ  ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜನವರಿ 24 ರಂದು ಮೊದಲ ಹಂತದ ಗೋಶಾಲೆಯ ಲೋಕಾರ್ಪಣೆ ಮಾಡಲಾಗುವುದು. ಸಾವಯವ ಗೊಬ್ಬರ ಮತ್ತು ಗೋಮಯದಿಂದ ಕಟ್ಟಿಗೆ ತಯಾರಿಸುವ ಹಂತಕ್ಕೆ ನಾವು ಬೆಳೆಯಬೇಕು ಹಾಗೂ ನಂಚಾರು ಗ್ರಾಮದಲ್ಲಿ ಸುಮಾರು 6 ಎಕರೆ ಜಾಗದಲ್ಲಿ ಅನಾಥ ಮತ್ತು ಅಪಘಾತಕ್ಕೀಡಾದ ಗೋವುಗಳಿಗೆ  ಸುಸಜ್ಜಿತ ಗೋ ಆಸ್ಪತ್ರೆ, ಪಶು ಆಹಾರ ತಯಾರಿಕ ಘಟಕ ನಿರ್ಮಿಸಲು ಯೋಜಿಸಿಕೊಂಡಿದ್ದೇವೆ. 3.92 ಕೊ.ರೂ  ವೆಚ್ಚದಲ್ಲಿ ಕಟ್ಟಡದ ಪ್ರಥಮ ಹಂತದ ಕೆಲಸಕಾರ್ಯ ಫೆಬ್ರವರಿ ಮೊದಲವಾರ ಪ್ರಾರಂಭವಾಗುವುದು ಮತ್ತು ಸಂಪೂರ್ಣ ಕಟ್ಟಡದ ವೆಚ್ಚ 15 ಕೋ.ರೂ ಆಗಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ನಂಚಾರು ಕಾಮಧೇನು ಗೋ ಶಾಲಾ ಮಹಾಸಂಘ ಟ್ರಸ್ಟ್ ನ ಟ್ರಸ್ಟಿ ಶ್ರೀಕಾಂತ್ ಶೆಟ್ಟಿ, ಖಜಾಂಚಿ ಕೋಟಾ ರಾಮಕೃಷ್ಣ ಉಪಸ್ಥಿತರಿದ್ದರು.