ಕಾರ್ಕಳ : ಪ್ರಾಮಾಣಿಕ ರಾಜಕಾರಣಿ ಕಾರ್ಕಳ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಗೋಪಾಲ್ ಭಂಡಾರಿಯವರ ಪ್ರಾರ್ಥಿವ ಶರೀರವನ್ನು ಶುಕ್ರವಾರ ಕಿಸಾನ್ ಸಭಾ ಟ್ರಸ್ಟ್ ರಾಜೀವ್ ಗಾಂಧಿ ಸಬಾ ಭವನದಲ್ಲಿರಿಸಿ ಸಾರ್ವಜನಿಕ ದರ್ಶನಕ್ಕೆ ಕಲ್ಪಿಸಿಲಾಯಿತು.
ಬೆಳ್ಳಗ್ಗೆ 9:30 ರ ಹೊತ್ತಿಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಯಿಂದ ಶವ ಮಹಜರುಗೊಳಿಸಿ ಹೊರಟ ಪಾರ್ಥಿವ ಶರೀರವು 11 ಗಂಟೆಗೆ ಕಾರ್ಕಳ ಕಿಸಾನ್ ಸಭಾ ಟ್ರಸ್ಟ್ ವೇದಿಕೆಯಲ್ಲಿ ತಲುಪಿತ್ತು.
ಸಾವಿರಾರು ಅಭಿಮಾನಿಗಳಿಂದ, ಸಾರ್ವಜನಿಕರಿಂದ ದರ್ಶನ:
ಭಂಡಾರಿಯವರ ಅಂತಿಮ ದರ್ಶನಕ್ಕಾಗಿ ಬೆಳ್ಳಗ್ಗಿನಿಂದಲೇ ಸಾವಿರಾರು ಅಭಿಮಾನಿಗಳು, ಸಾರ್ವಜನಿಕರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಉಡುಪಿ ಜಿಲ್ಲೆಯ ವಿವಿದೆಡೆಯಿಂದ ಆಗಮಿಸಿದ ಗಣ್ಯರು ಕೂಡ ಕಂಬನಿ ಮಿಡಿದರು.
ರಜೆ ಘೋಷಣೆ:ಅಂಗಡಿ ಬಂದ್:
ಕಾರ್ಕಳದ ಅಲ್ಲಲ್ಲಿ ವರ್ತಕರು ಅಂಗಡಿ ಬಂದ್ ಮಾಡಿ ಭಂಡಾರಿಯವರ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಿದರು. ತಾಲೂಕಿನ ಸರಕಾರಿ ಶಾಲೆ ಹಾಗೂ ಕೆಲ ಖಾಸಗಿ ಗಳಿಗೆ ರಜೆ ಷೋಷಿಸಲಾಗಿತ್ತು.
ರಾಜಕೀಯ ಪಕ್ಷದ ಮುಖಂಡರು, ಸರಕಾರಿ ಅಧಿಕಾರಿಗಳು ಅಂತಿಮ ದರ್ಶನ ಪಡೆದರು.
ಮಾಜಿ ಮುಖ್ಯಮಂತ್ರಿ ,ಮಾಜಿ ಸಂಸದ ಡಾ ವೀರಪ್ಪ ಮೊಯ್ಲಿ, ಉಡುಪಿ ಉಸ್ತುವಾರಿ ಸಚಿವೆ ಡಾ ಜಯಮಾಲ, ವಿಧಾನ ಸಭಾ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಶಾಸಕ ವಿ ಸುನಿಲ್ ಕುಮಾರ್, ಮಾಜಿ ಶಾಸಕ ಹಾಗೂ ಉಸ್ತುವಾರಿ ಸಚಿವರಾದ ಪ್ರಮೋದ್ ಮದ್ವರಾಜ್, ಮೂಡಬಿದ್ರೆ ಕ್ಷೇತ್ರದ ಮಾಜಿ ಶಾಸಕ ಅಭಯ್ ಚಂದ್ರ ಜೈನ್, ಕಾಪು ಕ್ಷೇತ್ರದ ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ, ಜಿಲ್ಲಾ ಅರ್ ಸಭಾಪತಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದೇವಿ ಪ್ರಸಾದ್ ಶೆಟ್ಟಿ ಗಫೋರ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಮುನಿಯಾಲು ಉದಯ್ ಕುಮಾರ್ ಶೆಟ್ಟಿ, ಇಮ್ಮಿಯಾಜ್ ಅಹಮ್ಮದ್, ಅವಿನ್ ಲೂಯಿಸ್ , ಜಿಲ್ಲಾ ಪಂಚಾಯತ್ ಸದಸ್ಯರು ತಾಲೂಕು ಪಂಚಾಯತ್ ಸದಸ್ಯರು ಪುರಸಭೆ ಸದಸ್ಯರು, ಪಂಚಾಯತ್ ಸದಸ್ಯರು ಅದ್ಯಕ್ಷರು ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ, ಉಡುಪಿಜಿಲ್ಲಾ ಪೊಲಿಸ್ ವರಿಷ್ಟಾಧಿಕಾರಿ ನಿಶಾ ಜೆಮ್ಸ್, ಪಂಚಾಯತ್ ಸಿ ಈಒ , ತಾ ಪಂ ಕಾರ್ಯನಿರ್ವಹಾದಿಕಾರಿ ಡಾ ಹರ್ಷ ಮೇಜರ್ , ಹೆಬ್ರಿ ತಾಲೂಕು ದಂಢಾದಿಕಾರಿ ಉಡುಪಿ ಧರ್ಮ ಪ್ರಾಂತ ಧರ್ಮ ಅಧಿಕಾರಿ ಬಿಷಪ್ ಐಸಾಕ್ ಲೋಬೋ, ಅತ್ತೂರು ಬೆಸಿಲಿಕ ಸಂತ ಲಾರೆನಸ್ ಗುರುಗಳಾದ ಜಾಜ್೯ಡಿಸೋಜಾ ಭಾಗವಹಿಸಿ ಅಂತಿಮ ದರ್ಶನ ಪಡೆದರು.