ನವದೆಹಲಿ: ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್ ದರವನ್ನು ಇಂದಿನಿಂದ (ಜುಲೈ 1) ಇಳಿಕೆ ಮಾಡಿವೆ. ಹೊಸ ದರಗಳು ದೇಶದಾದ್ಯಂತ ಜಾರಿಗೆ ಬಂದಿದ್ದು, ಹೋಟೆಲ್, ರೆಸ್ಟೋರೆಂಟ್ ಹಾಗೂ ಇತರೆ ವಾಣಿಜ್ಯ ಬಳಕೆದಾರರಿಗೆ ಇದರಿಂದ ಸ್ವಲ್ಪ ಮಟ್ಟಿನ ನಿರಾಳತೆ ಸಿಗಲಿದೆ. ಆದರೆ, ಗೃಹಬಳಕೆಯ 14.2 ಕೆಜಿ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಹೊಸ ದರಗಳು ನಗರದಿಂದ ನಗರಕ್ಕೆ ಸ್ವಲ್ಪ ವ್ಯತ್ಯಾಸ ಹೊಂದಿರುತ್ತವೆ.
19 ಕೆಜಿ ಸಿಲಿಂಡರ್ ದರ 183.50 ಯಷ್ಟು ಇಳಿಕೆ ಕಂಡಿದೆ. ಇದರಿಂದ ಈಗ ಒಂದು ಸಿಲಿಂಡರ್ ದರ ಬೆಂಗಳೂರಿನಲ್ಲಿ ರೂ. 3,021 ಇದ್ದರೆ, ದೆಹಲಿ ಮತ್ತು ಕೊಲ್ಕತ್ತಾಗಳಲ್ಲಿ ಕ್ರಮವಾಗಿ 2930 ಮತ್ತು 3081 ಆಗಿದೆ.

















