ಮಂಗಳೂರು: ದ.ಕ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಮಹಿಳಾ ವಿಭಾಗದ ನೇತೃತ್ವದಲ್ಲಿ ಡಿ.18 ಭಾನುವಾರದಂದು ಸಂಜೆ 5 ಗಂಟೆಗೆ ಸಮಾಜದ ಭಕ್ತಿಯ ಕಾಣಿಕೆಯಾಗಿ ಶ್ರೀ ದೇವಿಗೆ ಚಿನ್ನದ ಮಲ್ಲಿಗೆ ಹಾರ ಹಾಗೂ ಮಲ್ಲಿಗೆ ಹೂವಿನ ಅಲಂಕಾರ ಸೇವೆಯನ್ನು ಸಮರ್ಪಿಸಲಾಯಿತು.
ಮಹಿಳಾ ವಿಭಾಗದ ಸದಸ್ಯೆಯರು ಸ್ವರ್ಣ ಹಾರವನ್ನು ಚೆಂಡೆ ವಾದ್ಯ ಕಲಶಗಳ ಸಹಿತ ಮರೆವಣಿಗೆಯ ಮೂಲಕ ಶ್ರೀದೇವಿಗೆ ಸಮರ್ಪಿಸಿದರು.
ಈ ಸ್ವರ್ಣ ಮಲ್ಲಿಗೆ ಹಾರವನ್ನು ಮಂಗಳೂರಿನ ಪ್ರಖ್ಯಾತ ಜ್ಯುವೆಲ್ಲರಿ ಸಂಸ್ಥೆಯಾದ ಭೀಮಾ ಜ್ಯುವೆಲರ್ಸ್ ನವರು ತಯಾರಿಸಿದ್ದು, ಭಾನುವಾರ ನಡೆದ ಸರಳ ಸಮಾರಂಭದಲ್ಲಿ ಅಧಿಕೃತವಾಗಿ ಮಾತೃ ಸಂಘದ ಮಹಿಳಾ ವಿಭಾಗ ಸದಸ್ಯರಿಗೆ ಹಸ್ತಾಂತರಿಸಿದ್ದಾರೆ.
ಬೆಳಿಗ್ಗೆ ಸೂರ್ಯೋದಯದಿಂದ ಮೊದಲ್ಗೊಂಡು ಸೂರ್ಯಾಸ್ತದವರೆಗೆ ಭಕ್ತಿನಾಮ ಸಂಕೀರ್ತನೆ ನಡೆಯಿತು. ಮಹಿಳಾ ವಿಭಾಗದ ಸದಸ್ಯೆಯರು ಸಂಕೀರ್ತನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷೆ ಶ್ರೀಮತಿ ಜಲಜಾಕ್ಷಿ ಕುಲಾಲ್, ಕಾರ್ಯದರ್ಶಿ ಶ್ರೀಮತಿ ಚಂದ್ರಪ್ರಭಾ ಎಸ್.ಕುಲಾಲ್, ಶೀ ದೇವಿ ದೇವಸ್ಥಾನ ಮಾತೃ ಮಂಡಳಿ ಅಧ್ಯಕ್ಷೆ ಶ್ರೀಮತಿ ರೂಪಾ ಕೆ.ಎಸ್, ಶ್ರೀ ವೀರ ನಾರಾಯಾ ದೇವಸ್ಥಾನ ಮಾತೃ ಮಂಡಳಿ ಅಧ್ಯಕ್ಷೇ ಶ್ರೀಮತಿ ಗೀತಾ ಮನೋಜ್ ಹಾಗೂ ಮಹಿಳಾ ವಿಭಾಗದ ಸರ್ವ ಸದಸ್ಯರು ಉಪಸ್ಥಿತರಿದ್ದರು.