ಭಾರತಕ್ಕೆ ಚಿನ್ನ:ಆರ್ಚರಿಯಲ್ಲಿ ಗೆದ್ದ ವನಿತೆಯರಿಗೆ ಅಭಿನಂದಿಸಿದ ಪ್ರಧಾನಿ ಮೋದಿ, ಖರ್ಗೆ

ನವದೆಹಲಿ :ಟ್ವಿಟ್​ ಮಾಡಿರುವ ಮೋದಿ,”ನಮ್ಮ ಅಸಾಧಾರಣ ಸಂಯುಕ್ತ ಮಹಿಳಾ ತಂಡವು ಬರ್ಲಿನ್‌ನಲ್ಲಿ ನಡೆದ ವಿಶ್ವ ಆರ್ಚರಿ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಮೊಟ್ಟಮೊದಲ ಚಿನ್ನದ ಪದಕವನ್ನು ತಂದುಕೊಟ್ಟಿರುವುದು ಭಾರತಕ್ಕೆ ಹೆಮ್ಮೆಯ ಕ್ಷಣವಾಗಿದೆ. ನಮ್ಮ ಚಾಂಪಿಯನ್‌ಗಳಿಗೆ ಅಭಿನಂದನೆಗಳು! ಅವರ ಕಠಿಣ ಪರಿಶ್ರಮ ಮತ್ತು ಸಮರ್ಪಣೆ ಈ ಅತ್ಯುತ್ತಮ ಫಲಿತಾಂಶಕ್ಕೆ ಕಾರಣವಾಯಿತು” ಎಂದು ಬರೆದು ಶುಭಾಶಯ ತಿಳಿಸಿದ್ದಾರೆ ಬರ್ಲಿನ್‌ನಲ್ಲಿ ನಡೆದ ವಿಶ್ವ ಆರ್ಚರಿ ಚಾಂಪಿಯನ್‌ಶಿಪ್ 2023 ರಲ್ಲಿ ಚಿನ್ನದ ಪದಕ ಗೆದ್ದ ಜ್ಯೋತಿ ಸುರೇಖಾ ವೆನ್ನಮ್, ಪರ್ನೀತ್ ಕೌರ್ ಮತ್ತು ಅದಿತಿ ಗೋಪಿಚಂದ್ ಸ್ವಾಮಿ ಅವರ ಭಾರತೀಯ ವನಿತೆಯ ತಂಡಕ್ಕೆ ಪ್ರಧಾನಿ ಮೋದಿ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಭಿನಂದಿಸಿದ್ದಾರೆ.ವಿಶ್ವ ಆರ್ಚರಿ ಚಾಂಪಿಯನ್​ಶಿಪ್​ನಲ್ಲಿ ಪ್ರಶ್ತಿ ಗೆದ್ದ ಭಾರತೀಯ ವನಿತೆಯರ ತಂಡಕ್ಕೆ ಪ್ರಧಾನಿ ಮೋದಿ ಮತ್ತು ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಭಕೋರಿದ್ದಾರೆ.

“ನಮ್ಮ ಮಹಿಳಾ ತಂಡವು ವಿಶ್ವ ಬಿಲ್ಲುಗಾರಿಕೆ ಚಾಂಪಿಯನ್‌ಶಿಪ್‌ನಲ್ಲಿ ಇತಿಹಾಸವನ್ನು ಬರೆದಿದೆ. ಬರ್ಲಿನ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕವನ್ನು ಗೆದ್ದುಕೊಟ್ಟ ವಿ.ಜ್ಯೋತಿ ಸುರೇಖಾ, ಅದಿತಿ ಸ್ವಾಮಿ ಮತ್ತು ಪರ್ನೀತ್ ಕೌರ್ ಅವರ ಅಸಾಧಾರಣ ಮೂವರಿಗೆ ಅಭಿನಂದನೆಗಳು. ನಿಮ್ಮ ಸಾಧನೆಯ ಬಗ್ಗೆ ಭಾರತವು ಹೆಮ್ಮೆಪಡುತ್ತದೆ ಮತ್ತು ನಿಮ್ಮ ಮುಂದೆ ಉಜ್ವಲ ಭವಿಷ್ಯವನ್ನು ನಾವು ಬಯಸುತ್ತೇವೆ!” ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟ್ವೀಟ್ ಮಾಡಿದ್ದಾರೆ.

ಅರ್ಹತಾ ಸುತ್ತಿನಲ್ಲಿ ಎರಡನೇ ಸ್ಥಾನ ಅಲಂಕರಿಸಿದ್ದ ಭಾರತದ ವನೆತೆಯರ ಗುಂಪು ಸೆಮಿಫೈನಲ್​​ನಲ್ಲಿ ಆರ್ಚರಿ ಚಾಂಪಿಯನ್​ಶಿಪ್​ನ ಹಾಲಿ ವಿಚೇತ ತಂಡವಾದ ಕೊಲಂಬಿಯಾವನ್ನು 220-216 ಅಂಕಗಳಿಂದ ಸೋಲಿಸಿ ಪ್ರಶಸ್ತಿ ಸುತ್ತಿನಲ್ಲಿ ಸ್ಥಾನ ಪಡೆದಿದ್ದರು. ಮೊದಲ ಸುತ್ತಿನಲ್ಲಿ ಬೈ ಪಡೆದ ನಂತರ, ಭಾರತದ ಮಹಿಳಾ ತಂಡ ಕ್ರಮವಾಗಿ ಚೈನೀಸ್ ತೈಪೆ ಮತ್ತು ಟರ್ಕಿಯನ್ನು ಕ್ವಾರ್ಟರ್-ಫೈನಲ್ ಮತ್ತು ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಮಣಿಸಿತ್ತು. ವಿಶ್ವ ಆರ್ಚರಿ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಒಂದು ಚಿನ್ನ, ಒಂಬತ್ತು ಬೆಳ್ಳಿ ಮತ್ತು ಎರಡು ಕಂಚು ಸೇರಿದಂತೆ 12 ಪದಕಗಳನ್ನು ಗೆದ್ದುಕೊಂಡಿದೆ.
ಶುಕ್ರವಾರ ಆರ್ಚರಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ವನಿತೆಯರ ಗುಂಪು ಫೈನಲ್​ನಲ್ಲಿ ಮೆಕ್ಸಿಕೋದ ಎದುರಾಳಿಗಳನ್ನು ಮಣಿಸಿ ಚಿನ್ನದ ಪದಕವನ್ನು ಗೆದ್ದುಕೊಂಡರು. ಇದು ಆರ್ಚರಿ ಚಾಂಪಿಯನ್​ಶಿಪ್​ನಲ್ಲಿ ಭಾರತಕ್ಕೆ ಸಂದ ಮೊದಲ ಚಿನ್ನದ ಪದಕವಾಗಿದೆ. ಚಿನ್ನದ ಪದಕದ ಫೈನಲ್‌ನಲ್ಲಿ ಭಾರತದ ಮೂವರು 235 ಅಂಕಗಳನ್ನು ಗಳಿಸಿದರು, ಮೆಕ್ಸಿಕನ್ ಜೋಡಿಯಾದ ಡಾಫ್ನೆ ಕ್ವಿಂಟೆರೊ, ಅನಾ ಸೋಫಾ ಹೆರ್ನಾಂಡೆಜ್ ಜಿಯೋನ್ ಮತ್ತು ಆಂಡ್ರಿಯಾ ಬೆಸೆರಾ ಅವರು 229 ಅಂಕಗಳಿಂದ ಸೋಲು ಕಂಡರು