ಕಲ್ಯಾಣಪುರ: ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಗುರುವಾರದಂದು ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾದೀಶ ಶ್ರೀಪಾದ ವಡೇರ್ ಸ್ವಾಮೀಜಿಯವರು ಪ್ರಥಮ ಬಾರಿಗೆ ಭೇಟಿ ನೀಡಿದರು.
ಪೂರ್ಣಕುಂಭ ಮಂಗಳ ವಾದ್ಯದೊಂದಿಗೆ ಸ್ವಾಮೀಜಿಯವರನ್ನು ಸ್ವಾಗತಿಸಲಾಯಿತು. ದೇವಳದ ವತಿಯಿಂದ ಪಾದಪೂಜೆ, ಗೌರವಾರ್ಪಣೆ ಮತ್ತು ಗುರುಕಾಣಿಕೆ ಸಮರ್ಪಿಸಲಾಯಿತು.
ತಮ್ಮ ಆಶೀರ್ವಚನದಲ್ಲಿ ಸ್ವಾಮಿಗಳು ಮಾತನಾಡಿ, ದೇವರ ಬಳಿ ತಮ್ಮ ಸಮಸ್ಯೆಗಳನ್ನು ಹೇಳುತ್ತಾ ಸ್ವಾರ್ಥಿಯಾಗುವ ಬದಲು ಭಕ್ತರು ದೇವರ ಬಗ್ಗೆ ಚಿಂತಿಸಿ ಪರರ ಸೇವೆ ಮಾಡಬೇಕು. ದೇವಳದ ಜಿರ್ಣೋದ್ಧಾರದಿಂದ ಊರು, ರಾಜ್ಯ, ರಾಷ್ಟ್ರ ಉದ್ದಾರವಾಗುತ್ತದೆ. ದೇವಳದ ವತಿಯಿಂದ ಹಮ್ಮಿಕೊಂಡ ಜೀರ್ಣೋದ್ದಾರ ಕಾರ್ಯ ಶೀಘ್ರ ನೆರವೇರಲಿ, ಶ್ರೀ ವೆಂಕಟರಮಣ ದೇವರ ಅನುಗ್ರಹದಿಂದ ಭಕ್ತರ ಕಲ್ಯಾಣವಾಗಲಿ ಎಂದು ಹಾರೈಸಿದರು.
ದೇವಳದ ಆಡಳಿತ ಮೊಕ್ತೇಸರ ಅನಂತ ಪದ್ಮನಾಭ ಕಿಣಿ, ಪ್ರಧಾನ ಅರ್ಚಕ ಜಯದೇವ ಭಟ್ ,ಗಣಪತಿ ಭಟ್, ಅರವಿಂದ ಬಾಳಿಗಾ, ದತ್ತಾತ್ರೇಯ ಕಿಣಿ, ವಿನೋದ್ ಕಾಮತ, ಲಕ್ಷ್ಮೀನಾರಾಯಣ ನಾಯಕ್, ವಿದ್ಯಾಧರ್ ಕಿಣಿ, ಸುದೇಶ್ ಭಟ್ , ಅಮ್ಮುಂಜೆ ಯಶವಂತ ನಾಯಕ್ , ಶಿವಾನಂದ ಕಿಣಿ, ಜೀರ್ಣೋದ್ದಾರ ಸಮಿತಿಯ ಸದಸ್ಯರು, ಜಿ ಎಸ್ ಬಿ ಸಭಾ ಯುವಕರು ಮತ್ತು ಮಹಿಳಾ ಸದಸ್ಯರು, ಹಾಗೂ ಸಮಾಜದ ಸರ್ವರು ಉಪಸ್ಥಿತರಿದ್ದರು.