ಕುಂದಾಪುರ: ಇಲ್ಲಿನ ಚರ್ಚ್ ರಸ್ತೆಯ ಪಾದ್ರಿಗುಡ್ಡೆ ಶ್ಯಾನುಭಾಗ ಕುಟುಂಬಿಕರ ಮೂಲ ನಾಗ ಸನ್ನಿಧಿಯಲ್ಲಿ ನಾಗದೇವರ ಪುನರ್ ಪ್ರತಿಷ್ಠಾ ಮಹೋತ್ಸವ ಹಾಗೂ ನಾಗಯಕ್ಷಿ, ರಕ್ತೇಶ್ವರಿ ಮತ್ತು ಪರಿವಾರ ದೇವರಗಳ ಪ್ರತಿಷ್ಠೆ ಮಂಗಳವಾರ ಸಂಪನ್ನಗೊಂಡಿತು.
ಧಾರ್ಮಿಕ ಪೂಜಾ ವಿಧಿಗಳನ್ನು ವೇದಮೂರ್ತಿ, ರವೀಂದ್ರ ಆಚಾರ್ಯ ನಯಂಪಳ್ಳಿ ನೇತೃತ್ವದಲ್ಲಿ ನಡೆಯಿತು. ಶ್ರೀ ದೇವರಿಗೆ ವಿಶೇಷ ಹೂವಿನ ಅಲಂಕಾರ , ಭಜನಾ ಕಾರ್ಯಕ್ರಮ ಜರಗಿತು ಮಧ್ಯಾಹ್ನ ಆಶ್ಲೇಷಾ ಬಲಿ ಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ಶ್ರೀ ಸಂಸ್ಥಾನ ಗೋಕರ್ಣ ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮಿಜಿ ನಾಗ ಸನ್ನಿಧಿಗೆ ಭೇಟಿ ನೀಡಿದರು. ಸ್ವಾಮೀಜಿಯವರನ್ನು ಪೂರ್ಣ ಕುಂಭ, ಮಂಗಳವಾದ್ಯದೊಂದಿಗೆ ಸ್ವಾಗತಿಸಿ ಬರಮಾಡಿಕೊಂಡು ಶ್ರೀ ಪಾದರ ಪಾದ ಪೂಜೆ ನೆರವೇರಿಸಿ ಗುರುಕಾಣಿಕೆ ಸಲ್ಲಿಸಲಾಯಿತು.
ಬಹಳ ಹಿಂದಿನ ಕಾಲದಿಂದಲೂ ಶ್ಯಾನುಭಾಗ ಕುಟುಂಬಿಕರ ಮೂಲ ಸನ್ನಿಧಿಯ ಜೊತೆ ಪರಿಸರದ ಹಲವಾರು ಕುಟುಂಬದ ಭಕ್ತರು ನಂಬಿ ಕೊಂಡು ಬಂದಿರುವುದರಿಂದ ಕಾರ್ಣಿಕದ ಕ್ಷೇತ್ರವಾಗಿ ಬೆಳೆಯಲು ಕಾರಣವಾಗಿದೆ. ಭಕ್ತಿಯಿಂದ ಮಾಡುವ ಸೇವೆ ಹಾಗೂ ಬೇಡಿದುದನ್ನು ನೀಡುವ ದೇವರ ಅಭಯ ಪ್ರಸಾದವೇ ಸಾಕ್ಷಿ ಎಂದು ಅವರು ಅನುಗ್ರಹಸಿದರು.
ಚಂದ್ರಕಾಂತ್ ಶ್ಯಾನುಭಾಗ್, ರಾಮದಾಸ್ ಶೆಣೈ, ಅರ್ಚಕ ಚೇಂಪಿ ರಮೇಶ ಭಟ್ , ಪ್ರದೀಪ್ ಭಟ್, ಗಣೇಶ್ ಭಟ್ ಕಲ್ಯಾಣಪುರ, ಮಂಜುನಾಥ ಆಚಾರ್ಯ ಉಡುಪಿ ಹಾಗೂ ನೂರಾರು ಭಕ್ತರು ಉಪಸ್ಥಿತರಿದ್ದರು.












