ಗೋಹತ್ಯೆ ನಿಷೇಧಿಸಲು ಮೋದಿ ಸರಕಾರ ಸೂಕ್ತ ಕಾನೂನು ರೂಪಿಸಬೇಕು: ಪೇಜಾವರ ಶ್ರೀ

ಉಡುಪಿ: ಗೋಹತ್ಯೆ, ಗೋಮಾಂಸದ ಭಕ್ಷಣೆ ಹೇಯ ಕೃತ್ಯ. ಮಾನವೀಯ ನೆಲೆಯಲ್ಲಿ ಗೋವಿನ‌ ರಕ್ಷಣೆಯಾಗಬೇಕು. ಕೇಂದ್ರದಲ್ಲಿ ಬಿಜೆಪಿ ಬಹುಮತದಿಂದ ಆಯ್ಕೆಯಾಗಿದೆ. ಹೀಗಾಗಿ ನರೇಂದ್ರ ಮೋದಿ ನೇತೃತ್ವದ ಸರಕಾರ ಗೋವಿನ ‌ರಕ್ಷಣೆಗೆ ಸೂಕ್ತ ಕಾನೂನು ರೂಪಿಸಬೇಕು ಎಂದು ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಹೇಳಿದ್ದಾರೆ.
ಉಡುಪಿ ಶ್ರೀಕೃಷ್ಣ ಮಠದಲ್ಲಿ ಭಾನುವಾರ ದೇಸಿ ಗೋ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ‌ ಪಶು ಸಂಪತ್ತು ಬೆಳೆಯಬೇಕು. ಅಮೃತ ಕೊಡುವ ಗೋವುಗಳ ಬಗ್ಗೆ ಕಾಳಜಿ ವಹಿಸಬೇಕಿದೆ. ಗೋವುಗಳನ್ನು ಉಳಿಸುವ ಕಾಳಜಿ ಯಾರು ಮಾಡುತ್ತಿಲ್ಲ. ಭಾರತದ ಹಸುವಿನಷ್ಟು ಆರೋಗ್ಯಕರ ಹಾಲು ಬೇರೆ ಹಸುಗಳು ಕೊಡಲ್ಲ. ದೇಶದಲ್ಲಿ ಹೆಚ್ಚು ಗೋ ರಕ್ಷಣೆ ನಡೆಯಬೇಕು. ಹೀಗಾಗಿ‌ ಸರಕಾರ ಕಾನೂನು ರೂಪಿಸುವುದು ಅತ್ಯಗತ್ಯ ಎಂದರು.
ಗೋವನ್ನು ಕೊಲ್ಲುವವರು‌ ಮನಷ್ಯರಲ್ಲ. ಅವರು ರಾಕ್ಷಸರಿಗೆ ಸಮಾನ. ದೇಶದಲ್ಲಿ ಹುಲಿ, ಸಿಂಹಗಳ ರಕ್ಷಣೆಗೆ ಆದ್ಯತೆ ನೀಡಲಾಗುತ್ತಿದೆ. ಆದರೆ ಗೋವಿನ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿಲ್ಲ ಎಂದು ತಿಳಿಸಿದರು.