ಬಜಗೋಳಿ: ಹಿಂದುತ್ವ ಪ್ರತಿಪಾದಕ ರವೀಂದ್ರ ಶೆಟ್ಟಿ ಬಜಗೋಳಿ ಮತ್ತು ಅವರ ಧರ್ಮಪತ್ನಿ ರೂಪ ರವೀಂದ್ರ ಶೆಟ್ಟಿ ದಂಪತಿಗಳು ದೀಪಾವಳಿಯ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದ್ದು, ದಾನಕ್ಕೆ ಹೆಸರುವಾಸಿಯಾದ ಬಲಿ ಚಕ್ರವರ್ತಿಯಂತೆ, ಬಡ ಮತ್ತು ಅಶಕ್ತ ಕುಟುಂಬಗಳನ್ನು ಆರ್ಥಿಕವಾಗಿ ಮೇಲೆತ್ತಲು ದ್ವಿತೀಯ ವರ್ಷದ ಗೋದಾನಕ್ಕೆ ತಮ್ಮ ಸ್ವಗ್ರಹದಲ್ಲಿ ಚಾಲನೆ ನೀಡಿದರು.
ಹಲವಾರು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ರವೀಂದ್ರ ಶೆಟ್ಟಿಯವರು ಬಡವರ ಶಿಕ್ಷಣ, ದೈವ-ದೇವಸ್ಥಾನಗಳ ಜೀರ್ಣೋದ್ಧಾರ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳಿಗಾಗಿ ಆರ್ಥಿಕ ಸಹಾಯ ಮಾಡುತ್ತಲೇ ಬಂದಿದ್ದಾರೆ. ಈ ಬಾರಿ ಹೆಬ್ರಿ, ಬೆಳ್ಮಣ್,ಮೀಯಾರು, ಮಾಳ ಮತ್ತು ಇದು ಗ್ರಾಮದಲ್ಲಿ ಗೋ ಕಳ್ಳತನವಾಗಿರುವವರ ಅಶಕ್ತ ಕುಟುಂಬಗಳನ್ನು ಗುರುತಿಸಿದ್ದು, ಅಂತಹ 5 ಕುಟುಂಬಗಳಿಗೆ ಗೋದಾನ ಮಾಡಿ ನೆರವಾಗಿದ್ದಾರೆ.