ಬೆಂಗಳೂರು: ಕೆ.ಎಸ್.ಆರ್.ಟಿ.ಸಿ ಯು ತನ್ನ ಪ್ರಯಾಣಿಕರಿಗೆ ಅತ್ಯುನ್ನತ ಶ್ರೇಣಿಯ ಪ್ರವಾಸದ ಅನುಭವವನ್ನು ನೀಡಲು ನೂತನ ಶ್ರೇಣಿಯ ವಾಹನ ಸೇವೆಯನ್ನು ಪರಿಚಯಿಸುತ್ತಿದ್ದು, ಸಂಸ್ಥೆಯ ಬಿಎಸ್ ವಿಐ- 9600 ವೋಲ್ವೋ ಮಲ್ಟಿ ಆಕ್ಸಲ್ ಸ್ಲೀಪರ್ ಬಸ್ ಮತ್ತು ಒಲೆಕ್ಟ್ರಾ ಎಲೆಕ್ಟ್ರಿಕ್ ಬಸ್ ಗಳಿಗೆ ಸಾರ್ವಜನಿಕರಿಂದ ಬ್ರ್ಯಾಂಡ್ ನೇಮ್, ಟ್ಯಾಗ್ ಲೈನ್ ಹಾಗೂ ಗ್ರಾಫಿಕ್ ವಿನ್ಯಾಸವನು ನಿರೀಕ್ಷಿಸುತ್ತಿದೆ. ಉತ್ತಮ ಟ್ಯಾಗ್ ಲೈನ್ ನೊಂದಿಗೆ ಬ್ರ್ಯಾಂಡ್ ಹೆಸರನ್ನು ಸೂಚಿಸಿದವರಿಗೆ ಪ್ರತಿ ಮಾದರಿ ಬಸ್ಸಿಗೆ 10,000 ರೂ ನಗದು ಬಹುಮಾನ ಹಾಗೂ ಉತ್ತಮ ಗ್ರಾಫಿಕ್ಸ್ ನೀಡಿದವರಿಗೆ 25,000 ನಗದು ಬಹುಮಾನ ನೀಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.
ಬ್ರ್ಯಾಂಡ್ ಐಡಿಯಾಗಳನ್ನು [email protected] ಇ ಮೇಲ್ ಮಾಡಬಹುದು ಅಥವಾ KSRTC_Journeys ಟ್ವಿಟರ್ ಖಾತೆ KSRTC.Karnataka ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಳ್ಳಬಹುದು. ಗ್ರಾಫಿಕ್ ಮತ್ತು ಬ್ರ್ಯಾಂಡ್ ನೇಮ್ ಸಲ್ಲಿಸಲು ಕೊನೆ ದಿನಾಂಕ ಡಿ.5 ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ತಿಳಿಸಿದ್ದಾರೆ.