ಉಡುಪಿ :ನ್ಯಾಯವಾದಿ ಬಿ ಗಿರೀಶ್ ಐತಾಳ್ ಅವರು ಸಮಾಜ ಸೇವೆಗಾಗಿ ‘ಭಾರತ ಜ್ಯೋತಿ ರಾಷ್ಟ್ರ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ. ಅವರು ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಜೂ. 30ರಂದು ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಕಳೆದೆರಡು ವರ್ಷದಲ್ಲಿ ಐತಾಳರು ಜಾತಿಭೇದವಿಲ್ಲದೆ ಸುಮಾರು 127 ಜೋಡಿಗಳಿಗೆ ವಿವಾಹ ಮಾಡಿಸಿದ್ದಾರೆ. ಸುಮಾರು 180 ಬಡಕುಟುಂಬಗಳಿಗೆ ಗೃಹ ನಿರ್ಮಾಣಕ್ಕೆ ಸಾಲ ಕೊಡಿಸುವುದನ್ನು ಗುರುತಿಸಿ ಪ್ರಶಸ್ತಿ ಲಬಿಸಿದೆ.