ತುಪ್ಪದಿಂದ ಅದೆಷ್ಟು ಲಾಭವಿದೆಯಂತ ನಿಮಗೆ ಗೊತ್ತಿರಲಿ: ಡಾಕ್ಟ್ರು ಹೇಳಿದ ತುಪ್ಪದ ಗುಟ್ಟುಗಳು

ಡಾ.ಹರ್ಷಾ ಕಾಮತ್

ಸಂಸ್ಕೃತದಲ್ಲಿ ಘೃತ ಎಂದು ಕರೆಯಲಾಗುವ ತುಪ್ಪವು ಪವಿತ್ರ ಎಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ತಯಾರಿಸಿದ ಹಸುವಿನ ಹಾಲಿನ ಶುದ್ಧ  ತುಪ್ಪದ ಆರೋಗ್ಯ ಲಾಭವು ಅಪಾರ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಯಾರೂ ಕೂಡ ಸೇವಿಸಬಹುದು ಈ ತುಪ್ಪವನ್ನು.  

ತುಪ್ಪದಿಂದ ಏನೇನ್ ಲಾಭ ಇದೆ ಒಮ್ಮೆ ಕೇಳಿ

♦ ತುಪ್ಪವು ನಿಗದಿತ ಪ್ರಮಾಣದಲ್ಲಿ (ಒಂದುವರೆ ಚಮಚ) ಸೇವಿಸಿದರೆ ಜೀರ್ಣಶಕ್ತಿಯನ್ನು ಹೆಚ್ಚಿಸಿ ಜೀರ್ಣಕ್ರಿಯೆ ಚೆನ್ನಾಗಿ ಆಗುವಂತೆ ಮಾಡುತ್ತದೆ. ಆದರೆ ಅತಿ ಹೆಚ್ಚು ಪ್ರಮಾಣದಲ್ಲಿ ಸೇವಿಸಿದರೆ ಅಜೀರ್ಣಕ್ಕೆ ಕಾರಣವಾಗುತ್ತದೆ.

♦ ದೇಹದಲ್ಲಿ ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಉತ್ತೇಜಿಸುತ್ತದೆ.

♦ ನಮ್ಮ ಮೆದುಳನ್ನು ನರಮಂಡಲವನ್ನು ಪೋಷಿಸುವುದರಿಂದ ನಮ್ಮ ಬುದ್ಧಿಶಕ್ತಿಯನ್ನು ಹಾಗೂ ನೆನಪಿನ ಶಕ್ತಿಯನ್ನು ಹೆಚ್ಚಿಸಲು ತುಪ್ಪ ಸಹಾಯ ಮಾಡುತ್ತದೆ.

♦ಉರಿ ಊತವನ್ನು ಕಡಿಮೆಗೊಳಿಸುವ ಗುಣವಿರುವುದರಿಂದ ಎಲರ್ಜಿ, ಸಂಧಿವಾತವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಮೂಳೆಗಳನ್ನು ಬಲಪಡಿಸುತ್ತದೆ.

♦ ವಿಟಮಿನ್ ಇ, ಬೀಟಾ ಕೆರೊಟಿನ್, ಇರುವುದರಿಂದ ಆ್ಯಂಟಿ ಆಕ್ಸಿಡೆಂಟ್ ಆಗಿ ಕಾರ್ಯ ನಿರ್ವಹಿಸುತ್ತದೆ. ವಿಟಮಿನ್ ಎ ಡಿ ಇ ಕೆ ಹಾಗೂ ಮಿನರಲ್ಸ್ ಗಳಿಂದ ಕೂಡಿದೆ.

♦ ತುಪ್ಪ ಹಾಗೂ ಜೇನುತುಪ್ಪವನ್ನು ಮಿಶ್ರಣಮಾಡಿ ತ್ವಚೆಯ ಮೇಲೆ ಲೇಪಿಸುವುದರಿಂದ ಚರ್ಮದ ಉರಿಯೂತ, ಗಾಯ, ಗುಳ್ಳೆಗಳನ್ನು ಗುಣಪಡಿಸಬಹುದು.

♦ ಹಾರ್ಮೋನ್ ಗಳನ್ನು ಸಮತೋಲನಗೊಳಿಸುತ್ತದೆ.

♦ ಲ್ಯಾಕ್ಟೋಸ್ ಇಂಟಾಲರೆನ್ಸ್ ಇದ್ದವರಿಗೆ ತುಪ್ಪವು ಹಿತ.

♦ ಕಣ್ಣಿನ ರೆಪ್ಪೆಗೆ ತುಪ್ಪವನ್ನು ಪ್ರತಿದಿನ ಹಚ್ಚುವುದರಿಂದ ಕಣ್ಣಿನ ಶುಷ್ಕತೆಯನ್ನು ದೂರ ಮಾಡಬಹುದು ಹಾಗೂ ಇದು ಕಣ್ಣಿನ ಆರೋಗ್ಯಕ್ಕೂ ಕೂಡಾ ಒಳ್ಳೆಯದು.

♦ ಎರಡು ಬಿಂದು ತುಪ್ಪವನ್ನು ಮುಂಜಾನೆ ಮೂಗಿಗೆ ಹಾಕುವುದರಿಂದ ಕಣ್ಣಿಗೆ, ತ್ವಚೆಗೆ, ಕೇಶಕ್ಕೆ ಪೋಷಣೆ ನೀಡುತ್ತದೆ ಹಾಗೂ ಸ್ಟ್ರೆಸ್ ನಿದ್ದೆಬಾರದೇ ಇರುವವರಿಗೆ ಹಾಗೂ ಉಸಿರಾಟದ ತೊಂದರೆ ದೂರವಾಗುತ್ತದೆ.

♦ ಇದರ ನಿರಂತರ ಸೇವನೆಯಿಂದ  ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ .

ಹೀಗೆ ಸೇವಿಸಿ:

ದಿನನಿತ್ಯ ನಾವು ಒಂದೂವರೆ ಚಮಚ ಬಿಸಿ ತುಪ್ಪವನ್ನು ಅನ್ನಕ್ಕೆ ಅಥವಾ ರೊಟ್ಟಿಗೆ ಅಥವಾ ಯಾವುದೇ ಆಹಾರ ಪದಾರ್ಥದ ಜೊತೆ ಸೇವಿಸಬಹುದು.

♦ ಒಂದು ವರ್ಷ ಹಳೆಯ ತುಪ್ಪವನ್ನು ಉಪಯೋಗಿಸುವುದರಿಂದ ಮೂರ್ಛೆ ರೋಗ, ಜ್ವರ, ಅಪಸ್ಮಾರ, ಉನ್ಮಾದವನ್ನು ಗುಣಪಡಿಸಲು ಸಹಾಯ ಮಾಡುತ್ತದೆ .

♦ ತುಪ್ಪವನ್ನು ಹೈ ಕೊಲೆಸ್ಟ್ರಾಲ್ ಹಾಗೂ ಓವರ್ ವೇಟ್ ಇದ್ದವರು ಉಪಯೋಗಿಸಬಾರದು

♦ ತುಪ್ಪಹಾಗುಜೆನುತುಪ್ಪಸಮಪ್ರಮಾಣದಲ್ಲಿಸೇವಿಸಕೂಡದು.ಅಸಮಪ್ರಮಾಣದಲ್ಲಿಸೇವಿಸಬಹುದು.

♦ ಆಯುರ್ವೇದದಲ್ಲಿ ಔಷಧಿಯುಕ್ತ  ಮೂಲಿಕೆಗಳಿಂದ ತಯಾರಿಸಿದ ಘೃತವನ್ನು ವಿವಿದ ರೋಗಗಳಿಗೆ ಉಪಯೋಗಿಸುತ್ತಾರೆ. ಅಶ್ವಗಂಧಾಘೃತ, ಶತಾವರಿ ಘೃತ,ಬಲಾಘೃತ ಮುಂತಾದವುಗಳು .ಶತಧೌತಘೃತ ಅಂದರೆ ಹಲವು ಬಾರಿ ನೀರಿನಲ್ಲಿ ತೊಳೆದ ತುಪ್ಪವನ್ನು ಸುಟ್ಟ ಗಾಯಕ್ಕೆ ಹೇಳಿದ ಔಷಧಿಯಾಘಿ ಬಳಸಿಕೊಳ್ಳುವುದು

ಆರೋಗ್ಯದ ದೃಷ್ಟಿಯಿಂದ ಹತ್ತು ಹಲವು ಉಪಯೋಗವಿರುವ ಈ ತುಪ್ಪವನ್ನು ದಿನನಿತ್ಯ ಬಳಸಿ ಆರೋಗ್ಯದಿಂದಿರಿ .

(ಡಾ. ಹರ್ಷಾಕಾಮತ್  ಆಯುರ್ವೇದ ವೈದ್ಯೆ, ಹವ್ಯಾಸಿ ಚಿತ್ರಕಲಾವಿದೆ. ಪಾಕಶಾಸ್ತ್ರದಲ್ಲೂ ಆಗಾಗ ಹೊಸ ಹೊಸ ಪ್ರಯೋಗ ಮಾಡುವ ಪ್ರಯೋಗಶೀಲ ವ್ಯಕ್ತಿತ್ವ ಇವರದ್ದು)