ಹೆಬ್ರಿ: ಉಡುಪಿ ಜಿಲ್ಲೆಯ ಚಾರ ಜವಾಹರ ನವೋದಯ ವಿದ್ಯಾಲಯದ ಹುಡುಗರ ಹಾಗೂ ಹುಡುಗಿಯರ ಹಾಸ್ಟೆಲ್ ಗೆ ಸುಮಾರು 1.6 ಲಕ್ಷ ಮೊತ್ತದ ಎಲೆಕ್ಟ್ರಲ್ ಗೀಸರ್ ಚಾರ ಜೆ.ಎನ್.ವಿಯ ಪಿಟಿಸಿ ವತಿಯಿಂದ ಕೊಡಮಾಡಿದ್ದು ಅದರ ಉದ್ಘಾಟನೆಯನ್ನು ಡಿ.27ರಂದು ಚಾರ ಜವಾಹರ ನವೋದಯ ವಿದ್ಯಾಲಯದ ಪ್ರಾಂಶುಪಾಲೆ ವಿಜಯಕುಮಾರಿ ನೆರವೇರಿಸಿದರು.
ಈ ಸಂದರ್ಭದಲ್ಲಿ ವಿದ್ಯಾಲಯದ ಉಪ ಪ್ರಾಂಶುಪಾಲೆ ಗೀತಾಲಕ್ಷ್ಮಿ, ಚಾರ ಜವಾಹರ ನವೋದಯ ವಿದ್ಯಾಲಯದ ಪೋಷಕ ಶಿಕ್ಷಕ ಸಮಿತಿಯ ಅಧ್ಯಕ್ಷ ಹೆಬ್ರಿ ಉದಯಕುಮಾರ್ ಶೆಟ್ಟಿ, ಉಪಾಧ್ಯಕ್ಷೆ ಶ್ಯಾಮಲಾ,ಕಾಯ೯ದಶಿ೯ ಡಾ. ಪರಶುರಾಮ್, ಪಿಟಿಸಿ ಸದಸ್ಯರಾದ ಸುರೇಶ್ , ಸೋನಿ ಪಿ.ಶೆಟ್ಟಿ , ಚಾಣಕ್ಯ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲೆ ವೀಣಾ ಯು.ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.