ಅಮೆಜಾನ್’ನಲ್ಲಿ 14 ಸಾವಿರ ಉದ್ಯೋಗಿಗಳಿಗೆ ಗೇಟ್‌ ಪಾಸ್‌ಗೆ ತೀರ್ಮಾನ!

ಸ್ಯಾನ್‌ ಫ್ರಾನ್ಸಿಸ್ಕೊ: ಅಮೆಜಾನ್ ಕಂಪನಿಯು 14 ಸಾವಿರದಷ್ಟು ಉದ್ಯೋಗ ಕಡಿತ ಮಾಡಲಿದೆ ಎಂದು ವರದಿಯಾಗಿದೆ.ಸುಮಾರು 30 ಸಾವಿರದಷ್ಟು ನೌಕರರನ್ನು ಕಡಿಮೆ ಮಾಡುವ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗುತ್ತದೆ ಎಂದು ವರದಿಯಾಗಿದೆ.

ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಅಮೆಜಾನ್ ಸಂಸ್ಥೆಯು 14 ಸಾವಿರದಷ್ಟು ನೌಕರರ ಸಂಖ್ಯೆಯನ್ನು ಕಡಿತಗೊಳಿಸಿತ್ತು.

ಆದರೆ ಉದ್ಯೋಗ ಕಡಿತದ ಕುರಿತು ಸಂಸ್ಥೆಯಿಂದ ಇನ್ನಷ್ಟೇ ಅಧಿಕೃತ ಪ್ರಕಟಣೆ ಬರಬೇಕಿದೆ.

ಯಾವೆಲ್ಲ ವಿಭಾಗಕ್ಕೆ ಧಕ್ಕೆ?

◾ವೆಬ್ ಸರ್ವೀಸ್,

ರಿಟೇಲ್,

ಪ್ರೈಮ್ ವಿಡಿಯೊ,

ಮಾನವ ಸಂಪನ್ಮೂಲ,

ಪೀಪಲ್ ಎಕ್ಸ್‌ಪೀರಿಯನ್ಸ್, ತಂತ್ರಜ್ಞಾನ

2022ರಲ್ಲಿ ಅಮೆಜಾನ್ 27 ಸಾವಿರದಷ್ಟು ಉದ್ಯೋಗ ಕಡಿತಗೊಳಿಸಿತ್ತು. ಈಗ ಮೂರು ದಶಕಗಳಲ್ಲೇ ಬೃಹತ್ ಉದ್ಯೋಗ ಕಡಿತಕ್ಕೆ ಮುಂದಾಗಿದೆ ಎಂದು ತಿಳಿದು ಬಂದಿದೆ.