ಉಡುಪಿ: ನಗರದ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಎಳೆಯುತಿದ್ದ ಆರು ಮಂದಿ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ನಾರಯಣ ಗುರು ಮಂದಿರದ ಹಿಂಭಾಗದ ನಿವಾಸಿ ಚೇತನ್ (26), ಕೊಳಲಗಿರಿ ಚಕ್ಕುಲಿಕಟ್ಟೆ ನಿವಾಸಿ ಪವಡಪ್ಪ ನಿ.ಬಿಳಗಲ್ (25),ಅಲೆವೂರು ನಿವಾಸಿ ಸತೀಶ್.ಎಸ್(32), ಕಲ್ಮಾಡಿ ನಿವಾಸಿ ದೀಕ್ಷಿತ್ ಪೂಜಾರಿ (28), ಅಜ್ಜರಕಾಡು ಡಿಸಿ ಆಫಿಸ್ ಕ್ವಾಟರ್ಸ್ ನಿವಾಸಿ ಪುನೀತ್(18), ಯತೀಶ್(19) ಬಂಧಿತ ಆರೋಪಿಗಳು.
ಆರು ಮಂದಿಯನ್ನು ಮಣಿಪಾಲ ಕೆಎಂಸಿ ಫೊರೆನ್ಸಿಕ್ ಮೆಡಿಸಿನ್ ವಿಭಾಗದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ. ವರದಿಯಲ್ಲಿ ಗಾಂಜಾ ಸೇವನೆ ಮಾಡಿರುವುದು ದೃಡಪಟ್ಟಿದ್ದು, ವಿವಿಧ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.