ಉಡುಪಿ: ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ನಡೆಸಿದ ಜೂನಿಯರ್ ವಿಭಾಗದ ಪರೀಕ್ಷೆಯಲ್ಲಿ ಶ್ರೀನಿಧಿ ಭಟ್ ಆರೂರು ಅವರು ಡಿಸ್ಟಿಂಕ್ಷನ್ನಲ್ಲಿ ಪಾಸಾಗಿದ್ದಾರೆ.
ಅವರು ಆರೂರು ಲಕ್ಷ್ಮೀನಾರಾಯಣ ಭಟ್ ಹಾಗೂ ಸುನಿತಾ ಭಟ್ ಅವರ ಸುಪುತ್ರಿ. ಲಿಟಲ್ ರಾಕ್ ಇಂಡಿಯನ್ ಸ್ಕೂಲಿನ 9ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾರೆ. ವಿದ್ವಾನ್ ಅಶ್ವಿನಿ ರಾವ್ ಅವರ ಶಿಷ್ಯ.
















