ಗಂಗೊಳ್ಳಿ :ಸೇವಾ ಸಂಘ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಕಾರ್ಯಕ್ರಮ

ಗಂಗೊಳ್ಳಿ : ಗಂಗೊಳ್ಳಿಯ ಸೇವಾ ಸಂಘ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಆಶ್ರಯದಲ್ಲಿ ಶ್ರೀ ಶಾರದಾ ಮಹೋತ್ಸವದ ೪೫ನೇ ವರ್ಷದ ಸಮಾರಂಭದ ಅಂಗವಾಗಿ ಶ್ರೀ ದೇವಿಯ ಪ್ರೀತ್ಯರ್ಥ ಹಾಗೂ ಲೋಕ ಕಲ್ಯಾಣಾರ್ಥ ಮತ್ತು ಗ್ರಾಮಾಭಿವೃದ್ಧಿಗೋಸ್ಕರ ಶ್ರೀ ಚಂಡಿಕಾ ಯಾಗ ಗಂಗೊಳ್ಳಿಯ ಶ್ರೀ ಶಾರದಾ ಮಂಟಪದಲ್ಲಿ ಶನಿವಾರ ಜರಗಿತು.

ಪುರೋಹಿತರಾದ ವೇದಮೂರ್ತಿ ಜಿ.ರಾಘವೇಂದ್ರ ಆಚಾರ್ಯ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ಜರಗಿತು. ಗೋವಿಂದ ಪುತ್ರನ್ ದಂಪತಿ ಕಟ್‌ಬೇಲ್ತೂರು, ವಾಸುದೇವ ಶೇರುಗಾರ್ ದಂಪತಿ ಗಂಗೊಳ್ಳಿ ಹಾಗೂ ಕೃಷ್ಣ ಮೇಸ್ತ ದಂಪತಿ ಗುಜ್ಜಾಡಿ ಯಾಗದ ಯಜಮಾನಿಕೆ ವಹಿಸಿದ್ದರು. ಸಮಿತಿಯ ಗೌರವಾಧ್ಯಕ್ಷ ವೇದಮೂರ್ತಿ ಜಿ.ನಾರಾಯಣ ಆಚಾರ್ಯ, ಸಮಿತಿಯ ಅಧ್ಯಕ್ಷ ಶ್ರೀಧರ ಎನ್. ಸಕ್ಲಾತಿ, ಕಾರ್ಯದರ್ಶಿ ಜೆ.ರಘುನಾಥ ಖಾರ್ವಿ, ಪ್ರಧಾನ ಕಾರ್ಯದರ್ಶಿ ರಘುವೀರ ಕೆ., ಕೋಶಾಧಿಕಾರಿ ಎಂ.ನಾಗೇಂದ್ರ ಪೈ, ಮಹಿಳಾ ಮಂಡಳಿ ಅಧ್ಯಕ್ಷೆ ಸ್ವಾತಿ ಮಡಿವಾಳ, ಕಾರ್ಯದರ್ಶಿ ಸಖು ಉದಯ ಜಿ., ಸಮಿತಿಯ ಪದಾಧಿಕಾರಿಗಳು, ಮಹಿಳಾ ಮಂಡಳಿ ಪದಾಧಿಕಾರಿಗಳು, ಸ್ಥಳೀಯರು, ಮತ್ತಿತರರು ಉಪಸ್ಥಿತರಿದ್ದರು.