ಗಂಗೊಳ್ಳಿ :ಶ್ರೀ ಕ್ಷೇತ್ರ ಮಂತ್ರಾಲಯದ ಶ್ರೀ ರಾಯರ ಸನ್ನಿಧಿಗೆ ಪಾದಯಾತ್ರೆ

ಗಂಗೊಳ್ಳಿ : ಗೌಡ ಸಾರಸ್ವತ ಸಮಾಜದ ಹನ್ನೆರೆಡು ಮಂದಿ ಗಂಗೊಳ್ಳಿಯ ಪುರಾಣ ಪ್ರಸಿದ್ಧ ಮಲ್ಯರಮಠ ಶ್ರೀ ವೆಂಕಟರಮಣ ದೇವರ ಸನ್ನಿಧಿಯಿಂದ ಶ್ರೀ ಕ್ಷೇತ್ರ ಮಂತ್ರಾಲಯದ ಶ್ರೀ ರಾಯರ ಸನ್ನಿಧಿಗೆ ಗುರುವಾರ ಪಾದಯಾತ್ರೆ ಕೈಗೊಂಡಿದ್ದಾರೆ.
ಇಂದು ಬೆಳಿಗ್ಗೆ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀದೇವರ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಯಾತ್ರಾರ್ಥಿಗಳು ಶ್ರೀ ಕ್ಷೇತ್ರ ಮಂತ್ರಾಲಯದ ಶ್ರೀ ರಾಯರ ಸನ್ನಿಧಾನಕ್ಕೆ ಪಾದಯಾತ್ರೆ ಆರಂಭಿಸಿದರು. ಗೌಡ ಸಾರಸ್ವತ ಸಮಾಜದ ಉನ್ನತಿ, ಗ್ರಾಮದ ಶ್ರೇಯೋಭಿವೃದ್ಧಿ, ಮತ್ಸ್ಯಕ್ಷಾಮ ನಿವಾರಣೆ ಹಾಗೂ ಗ್ರಾಮದಲ್ಲಿ ಸರ್ವರಿಗೂ ಸುಖಶಾಂತಿ ಲಭಿಸುವಂತಾಗಲು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಎಸ್.ವೆಂಕರಮಣ ಆಚಾರ್ಯ ನೇತೃತ್ವದಲ್ಲಿ ಮಹಾಪ್ರಾರ್ಥನೆ ನಡೆಯಿತು. ದೇವಳದ ಆಡಳಿತ ಮಂಡಳಿಯ ವೇದಮೂರ್ತಿ ಜಿ.ವೇದವ್ಯಾಸ ಕೆ.ಆಚಾರ್ಯ, ಜಿ.ವೆಂಕಟೇಶ ನಾಯಕ್, ವೇದಮೂರ್ತಿ ಜಿ.ರಾಘವೇಂದ್ರ ಆಚಾರ್ಯ, ಡಾ.ಕಾಶೀನಾಥ ಪೈ, ಬಿ.ರಾಘವೇಂದ್ರ ಪೈ, ಎಂ.ಮುಕುಂದ ಪೈ, ಎನ್.ತಿಮ್ಮಪ್ಪ ನಾಯಕ್, ಜಿ.ವೆಂಕಟೇಶ ಮಲ್ಯ, ಎಂ.ಜಿ. ಜಗದೀಶ ಭಂಡಾರ್‌ಕಾರ್, ಕೆ.ಸುಧೀಂದ್ರ ಭಟ್ ಮತ್ತಿತರರು ಉಪಸ್ಥಿತರಿದ್ದರು.
ಗಂಗೊಳ್ಳಿ ಗ್ರಾಪಂ ಸದಸ್ಯ ಬಿ.ಗಣೇಶ ಶೆಣೈ ಮತ್ತು ಜಿ.ಕೃಷ್ಣ ಪಡಿಯಾರ್ ನೇತೃತ್ವದಲ್ಲಿ ಗಣೇಶ ಕಿಣಿ, ಜಿ.ವಿಜೇಂದ್ರ ನಾಯಕ್, ವಿಜೇಶ ಮಲ್ಯ, ಎಂ.ಅನಂತ ಪೈ, ಶ್ರೀನಿವಾಸ ಎಂ., ಜಿ.ಪ್ರದೀಪ ಭಟ್, ಜಿ. ವಿಷ್ಣುದಾಸ ಭಟ್, ಭುವನೇಶ ಶ್ಯಾನುಭಾಗ್, ಸಾಯಿನಾಥ ಕಾರವಾರ, ಪ್ರಕಾಶ ಪ್ರಭು ಇವರು ಪಾದಯಾತ್ರೆ ಕೈಗೊಂಡಿದ್ದು, ಇವರೊಂದಿಗೆ ವಾಹನ ಚಾಲಕ ಮಧು ಗಂಗೊಳ್ಳಿ ಕೂಡ ಯಾತ್ರೆ ಆರಂಭಿಸಿದ್ದಾರೆ. ಯಾತ್ರಾರ್ಥಿಗಳು ಜೂನ್ ೨೭ರಂದು ಮಂತ್ರಾಲಯ ತಲುಪಲಿದ್ದಾರೆ.