ಗಂಗೊಳ್ಳಿ: ಮೀನುಗಾರಿಕಾ ದೋಣಿ ಮುಳುಗಿ; ಮೂವರು ಸಮುದ್ರಪಾಲು

ಉಡುಪಿ: ಕುಂದಾಪುರ ತಾಲ್ಲೂಕಿನ ಗಂಗೊಳ್ಳಿಯಲ್ಲಿ ಭೀಕರ ದುರಂತವೊಂದು ಸಂಭವಿಸಿದ್ದು, ಮೀನುಗಾರಿಕಾ ದೋಣಿ ಮುಳುಗಿ ಮೂವರು ಸಮುದ್ರಪಾಲಾಗಿದ್ದು, ಓರ್ವ ಮೀನುಗಾರ ಪಾರಾಗಿರುವ ಘಟನೆ ನಡೆದಿದೆ.

ಮಂಗಳವಾರ ಮೀನುಗಾರಿಕೆಗೆಂದು ತೆರಳಿದ್ದಾಗ ದೋಣಿ ಮಗುಚಿದ್ದು ಮೂವರು ನೀರು ಪಾಲಾಗಿದ್ದು, ಓರ್ವ ಈಜಿ ದಡ ಸೇರಿದ್ದಾರೆ ಎನ್ನಲಾಗಿದೆ. ನಾಪತ್ತೆಯಾಗಿರುವ ಗಂಗೊಳ್ಳಿ ನಿವಾಸಿಗಳಾದ ಸುರೇಶ್ ಖಾರ್ವಿ (48), ಲೋಹಿತ್ ಖಾರ್ವಿ (34), ಜಗದೀಶ್ ಖಾರ್ವಿ (50) ಎಂಬ ಮೂವರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ದೋಣಿಯಲ್ಲಿದ್ದ ಇನ್ನೋರ್ವ ಮೀನುಗಾರ ಸಂತೋಷ್ ಖಾರ್ವಿ (35) ಎಂಬುವವರು ಈಜಿ ದಡ ಸೇರಿದ್ದಾರೆ.

ನಾಪತ್ತೆಯಾಗಿರುವ ಮೂವರು ಮೀನುಗಾರರಿಗಾಗಿ ಶೋಧ ಕಾರ್ಯ ಮುಂದುವರಿದಿದ್ದು ಕರಾವಳಿ ಕಾವಲು ಪಡೆ, ಗಂಗೊಳ್ಳಿ ಠಾಣೆ ಪೊಲೀಸ್ ಸಿಬ್ಬಂದಿ, ಅಗ್ನಿಶಾಮಕ ದಳ, ಸ್ಥಳೀಯ ಮೀನುಗಾರರು ಹುಡುಕಾಟ ನಡೆಸುತ್ತಿದ್ದಾರೆ.