ಕಲ್ಯಾಣಪುರ ಹಾಗೂ ತೆಂಕಪೇಟೆ ದೇವಳಗಳಲ್ಲಿ ಗಣೇಶ ವಿಸರ್ಜನೆ

ಕಲ್ಯಾಣಪುರ: ಇಲ್ಲಿನ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ಶನಿವಾರ ಸಂಪನ್ನಗೊಂಡಿತು. ಗಣೇಶ ಮೂರ್ತಿಯ ಶೋಭಾ ಯಾತ್ರೆ ಪ್ರಮುಖ ಬೀದಿಯಲ್ಲಿ ಪೇಟೆ ಉತ್ಸವ ನಡೆಸಿ ಸ್ವರ್ಣ ನದಿಯಲ್ಲಿ ವಿಸರ್ಜನೆ ಮಾಡಲಾಯಿತು. ದೇವಳದ ಆಡಳಿತ ಮೊಕ್ತೇಸರ ಅನಂತ ಪದ್ಮನಾಭ ಕಿಣಿ ಇವರ ಮಾರ್ಗದರ್ಶನದಲ್ಲಿ, ದೇವಳದ ಪ್ರಧಾನ ಅರ್ಚಕ ಜಯದೇವ ಭಟ್, ಗಣಪತಿ ಭಟ್, ಧಾರ್ಮಿಕ ಪೂಜಾ ವಿದಾನಗಳನ್ನು ನೆರವೇರಿಸಿದರು. ಜಿ ಎಸ್ ಬಿ ಸಭಾ ಸದಸ್ಯರು, ನೂರಾರು ಭಕ್ತರು ಉಪಸ್ಥಿತರಿದ್ದರು.

ಶ್ರೀ ಲಕ್ಷ್ಮೀ ವೆಂಕಟೇಶ ದೇವಳದಲ್ಲಿ ಪೂಜಿಸಿದ 12 ಗಣೇಶ ಮೂರ್ತಿಯ ಜೊತೆಗೆ ದೇವಸ್ಥಾನದ ಮಹಾಗಣಪತಿಯನ್ನು ರಜತ ಪಲ್ಲಕ್ಕಿ ಉತ್ಸವ, ಮಂಗಳ ವಾದ್ಯ , ಹುಲಿವೇಷದೊಂದಿಗೆ ವಿಸರ್ಜನೆ ಮಾಡಲಾಯಿತು.

ಶೋಭಾಯಾತ್ರೆಯು ದೇವಸ್ಥಾನದಿಂದ – ಐಡಿಯಲ್ ಸರ್ಕಲ್ – ಹಳೆ ಪೋಸ್ಟ್ ಆಫೀಸ್ ರಸ್ತೆ – ಡಯಾನಾ ಸರ್ಕಲ್ – ಕವಿ ಮುದ್ದಣ್ಣ ಮಾರ್ಗ – ತ್ರಿವೇಣಿ ವೃತ್ತ – ಪೋಸ್ಟ್ ಆಫೀಸ್ ರಸ್ತೆ – ಸಂಸ್ಕೃತ ಕಾಲೇಜು ಸರ್ಕಲ್ – ಮಾರುತಿ ವಿಥಿಕ ರಸ್ತೆ – ಚಿತ್ತರಂಜನ್ ಸರ್ಕಲ್ – ಮೈಸೂರ್ ಸ್ಟೀಲ್ ರಸ್ತೆ – ತೆಂಕುಪೇಟೆ ಮಾರ್ಗವಾಗಿ ದೇವಳಕ್ಕೆ ಬಂದು ದನಂತರ ದೇವಸ್ಥಾನದ ಪದ್ಮ ಸರೋವರದಲ್ಲಿ ಗಣೇಶ ವಿಗ್ರಹ ವಿಸರ್ಜನೆ ನಡೆಯಿತು
ಧಾರ್ಮಿಕ ಪೂಜಾ ವಿಧಿ ವಿಧಾನಗಳನ್ನು ಅರ್ಚಕ ವಿನಾಯಕ ಭಟ್ , ದಯಾ ಘನ್ ಭಟ್ ,ಗಿರೀಶ ಭಟ್ ನೆರವೇರಿಸಿದರು ದೇವಳದ ಆಡಳಿತ ಮಂಡಳಿಯ ಸದಸ್ಯರು , ಜಿ ಎಸ್ ಬಿ ಯುವಕ ಮಂಡಳಿ ಹಾಗೂ ಮಹಿಳಾ ಮಂಡಳಿಯ ಸದಸ್ಯರು ಹಾಗೂ ಸಮಾಜ ಬಾಂಧವರು ಪಾಲ್ಗೊಂಡರು.