ಆನೆಕೆರೆ ಸಾರ್ವಜನಿಕ ಶ್ರೀ ಗಣೇಶೊತ್ಸವ ಸಮಿತಿ: ವಿವಿಧ ಸ್ಪರ್ಧೆ ಉದ್ಘಾಟನೆ

ಕಾರ್ಕಳ: ಆನೆಕೆರೆ ಸಾರ್ವಜನಿಕ ಶ್ರೀ ಗಣೇಶೊತ್ಸವ ಸಮಿತಿಯ ಆಶ್ರಯದಲ್ಲಿ  ಭಕ್ತಿಗೀತೆ ಹಾಗೂ ಚಿತ್ರ ಬಿಡಿಸುವ ಸ್ಫರ್ದೆ ಆ-25ರಂದು ಆನೆಕೆರೆ ಶ್ರೀ ರಾಮಪ್ಪ ಶಾಲೆಯಲ್ಲಿ ನಡೆಯಿತು.

ಹಿರಿಯ ಕಲಾವಿದ, ಹಿನ್ನಲೆ ಗಾಯಕ ಕೆ. ಪಿ. ಶಾಂಭವ  ಕಾರ್ಯಕ್ರಮ ಉದ್ಘಾಟಿಸಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉದ್ಯಮಿ ಚಂದ್ರಶೇಖರ ಶೆಟ್ಟಿ, ಗಣೇಶ್ ದೇವಾಡಿಗ, ಸತ್ಯೇಂದ್ರ ಕಾಮತ್, ಸತೀಶ್ ಸುವರ್ಣ, ಶಿಕ್ಷಕ ಸುಧಾಕರ್ ಶುಭ ಹಾರೈಸಿದರು.

ಸಮಿತಿಯ ಅಧ್ಯಕ್ಷರಾದ ಗೋವಿಂದರಾಯ ಪೈ ಸ್ವಾಗತಿಸಿದರು, ಸಾಂಸ್ಕøತಿಕ ಕಾರ್ಯದರ್ಶಿ ವರದರಾಯ ಪ್ರಭು ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ರಾಘವೇಂದ್ರ ಪೈ ವಂದಿಸಿದರು.