ಶ್ರೀಕೃಷ್ಣ ಮಠದಲ್ಲಿ ಗಣೇಶ ಚತುರ್ಥಿ

ಉಡುಪಿ:ಗಣೇಶ ಚತುರ್ಥಿಯ ಪ್ರಯುಕ್ತ ಶ್ರೀಕೃಷ್ಣಮಠದ ಮಂಟಪದಲ್ಲಿ ಗಣೇಶ ವಿಗ್ರಹವನ್ನಿರಿಸಿ ಶ್ರೀ‌ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಹಾಗೂ ಶೀರೂರು ಮಠಾಧೀಶರಾದ ಶ್ರೀವೇದವರ್ಧನತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಪರ್ಯಾಯ ಮಠದ ಪುರೋಹಿತರಾದ ಶ್ರೀನಿವಾಸ ಉಪಾಧ್ಯಾಯರು ಗಣಹೋಮ ಮಾಡಿ ವಿಶೇಷ ಪೂಜೆ ನೆರವೇರಿಸಿದರು.